ಇಂದು ನಡೆದ ಎರಡನೇ ಟ್ವೆಂಟಿ ಪಂದ್ಯದಲ್ಲಿ ಮರಳಿ ಫಾರ್ಮ್ ಕಂಡುಕೊಂಡಿರುವ ಭಾರತ ತಂಡ ಈಗ ನ್ಯೂಜಿಲೆಂಡ್ ವಿರುದ್ದ ಗೆಲುವನ್ನು ಸಾಧಿಸಿದೆ.ಆಕ್ಲೆಂಡ್ ಈಡನ್ ಪಾರ್ಕ್ ನಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು ಟಾಸ್ ಗೆದ್ದು ಮೊದಲು ಟಾಸ್ ಆಯ್ದುಕೊಂಡಿತು ಕಾಲಿನ್ ಗ್ರಾಂಡ್ ಹೋಂ ಅವರ ಭರ್ಜರಿ (50) ಅರ್ಧಶತಕ ಹಾಗೂ ರಾಸ್ ಟೇಲರ್ ಅವರ 42 ರನ್ ಗಳ ನೆರವಿನಿಂದ ನ್ಯೂಜಿಲೆಂಡ್ ತಂಡವು 20 ಓವರ್ ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತು.ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ್ದ ಭಾರತ ತಂಡ ರೋಹಿತ್ ಶರ್ಮಾ ಅವರ ವೇಗದ ಫಿಫ್ಟಿ ಹಾಗೂ ರಿಷಬ್ ಪಂತ್ ಅವರ ಅಜೇಯ 40 ರನ್ ಗಳ ನೆರವಿನಿಂದ ಕೇವಲ ಮೂರು ವಿಕೆಟ್ ಕಳೆದುಕೊಂಡು 18.5 ಓವರ್ ಗಳಲ್ಲಿ 162 ರನ್ ಗಳಿಸಿತು..

ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಟಿ20 ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರರಾಗಿ ಹೊರಹೊಮ್ಮಿದ್ದಾರೆ. ಈ ಮೂಲಕ ನ್ಯೂಜಿಲೆಂಡ್ ಬ್ಯಾಟ್ಸ್’ಮನ್ ಮಾರ್ಟಿನ್ ಗಪ್ಟಿಲ್ 2272 ಅವರನ್ನು ಹಿಂದಿಕ್ಕಿ ರೋಹಿತ್ ಅಗ್ರಸ್ಥಾನಕ್ಕೇರಿದ್ದಾರೆ.ಪಂದ್ಯ ಆರಂಭಕ್ಕೂ ಮುನ್ನ ಗಪ್ಟಿಲ್ ದಾಖಲೆ ಹಿಂದಿಕ್ಕಲು ರೋಹಿತ್’ಗೆ ಕೇವಲ 35 ರನ್’ಗಳ ಅವಶ್ಯಕತೆಯಿತ್ತು. ಇಶ್ ಸೋಧಿ ಬೌಲಿಂಗ್’ನಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ಕಿವೀಸ್ ಬ್ಯಾಟ್ಸ್’ಮನ್ ದಾಖಲೆ ಹಿಂದಿಕ್ಕುವಲ್ಲಿ ಯಶಸ್ವಿಯಾಗಿದ್ದಾರೆ.

ಮಾರ್ಟಿನ್ ಗಪ್ಟಿಲ್ 74 ಇನ್ನಿಂಗ್ಸ್’ಗಳಲ್ಲಿ 14 ಅರ್ಧಶತಕ ಹಾಗೂ 2 ಶತಕಗಳ ನೆರವಿನಿಂದ 2272 ರನ್ ಬಾರಿಸಿದ್ದಾರೆ. ಇನ್ನು ರೋಹಿತ್ ಶರ್ಮಾ 84 ಇನ್ನಿಂಗ್ಸ್’ಗಳಲ್ಲಿ 16* ಅರ್ಧಶತಕ ಹಾಗೂ 4 ಶತಕ ಸಿಡಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here