ರೋಹಿತ್ ಶರ್ಮಾ ಭಾರತ ಕಂಡಂತ ಸರ್ವಶ್ರೇಷ್ಠ ಬ್ಯಾಟ್ಸ್‌ಮನ್. ರೋಹಿತ್ ಶರ್ಮಾ ಕ್ರೀಡಾಂಗಣದಲ್ಲಿ ಬ್ಯಾಟಿಂಗ್ ಲಯ ಕಂಡುಕೊಂಡರೆ ಅವರನ್ನು ತಡೆಯುವುದು ಸುಲಭದ ಮಾತಲ್ಲ. ಇದೀಗ ರೋಹಿತ್ ಶರ್ಮಾ ಜೀವನದಲ್ಲಿ ಸಂತಸದ ಕ್ಷಣ ಸವಿಯುತ್ತಿದ್ದಾರೆ‌. ಟೀಂ ಇಂಡಿಯಾದಲ್ಲಿ ಸ್ಫೋಟಕ ಬ್ಯಾಟ್ಸ್‌ಮನ್ ಎಂದೇ ಹೆಸರಾಗಿರುವ ರೋಹಿತ್ ಶರ್ಮಾಗೆ 2018ನೇ ವರ್ಷ ಅತ್ಯಂತ ಸ್ಮರಣೀಯವಾಗಿತ್ತು. ಒಂದೆಡೆ 11 ತಿಂಗಳ ಬಳಿಕ ಟೆಸ್ಟ್ ತಂಡಕ್ಕೆ ಕಮ್‌ಬ್ಯಾಕ್ ಮಾಡಿದರೆ, ವರ್ಷದ ಕೊನೆಯಲ್ಲಿ ರೋಹಿತ್ ಶರ್ಮಾ ಅವರು ತಂದೆಯಾಗಿ ಬಡ್ತಿ ಪಡೆದರು. ಡಿಸೆಂಬರ್ 30 ರಂದು ರೋಹಿತ್ ಶರ್ಮಾ ಅವರ   ಪತ್ನಿ ರಿತಿಕಾ ಸಜ್ದೆ ಅವರು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.

ಪ್ರಮೋಶನ್ ಪಡೆದ ರೋಹಿತ್ ಶರ್ಮಾ ಸಿಡ್ನಿ ಟೆಸ್ಟ್ ಪಂದ್ಯ ಮಿಸ್ ಮಾಡಿಕೊಂಡು ಭಾರತಕ್ಕೆ ಆಗಮಿಸಿದರು. ಇದೀಗ ಕೆಲವು ದಿನಗಳ ಬಳಿಕ ರೋಹಿತ್ ಶರ್ಮಾ ಮುದ್ದು ಮಗಳ ಫೋಟೋ ಬಹಿರಂಗ ಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ರೋಹಿತ್ ಫೋಟೋ ಶೇರ್ ಮಾಡಿದ್ದರು. ಫೋಟೋ ಶೇರ್ ಮಾಡುವುದರ ಜೊತೆಗೆ ಅಭಿಮಾನಿಗಳಿಗೆ ಮತ್ತೊಂದು ಸಂಭ್ರಮದ ವಿಷಯ ಹಂಚಿಕೊಂಡಿದ್ದರು ರೋಹಿತ್ ಶರ್ಮಾ.

ಅದೇನೆಂದರೆ ತಮ್ಮ ಮುದ್ದು ಮಗಳಿಗೆ ಮುದ್ದಾದ ಹೆಸರು ಸಹ ರೋಹಿತ್ ಶರ್ಮಾ ಇಟ್ಟಿದ್ದರು. ರೋಹಿತ್ ಶರ್ಮಾ ಅವರು ತಮ್ಮ ಪ್ರೇಮದ ಕಾಣಿಕೆಗೆ ಇಟ್ಟ ಹೆಸರೇ ಶಮಿರಾ. ರೋಹಿತ್ ಶರ್ಮಾ ಅವರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ತಮ್ಮ ಮಗಳಿಗೆ ಶಮೀರ ಎಂದು ಹೆಸರಿಡುವ ಮೂಲಕ ಈ ವಿಷಯ ಎಲ್ಲರ ಜೊತೆ ಹಂಚಿಕೊಂಡಿದ್ದರು. ಎಲ್ಲರೂ ರೋಹಿತ್ ಶರ್ಮಾ ಮಗಳು ಶಮೀರಗೆ ಶುಭಹಾರೈಸಿದ್ದರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here