ಈ ಜಗತ್ತಿನಲ್ಲಿ ಕೆಲವೊಂದು ವಿಷಯಗಳು ರಹಸ್ಯವಾಗಿಯೇ ಉಳಿದಿರುತ್ತವೆ.. ವೈಜ್ಞಾನಿಕವಾಗಿ ಜಗತ್ತು ಎಷ್ಟೇ ಮುಂದುವರೆದರೂ ಕೆಲವೊಂದು ವಿಷಯಗಳಿಗೆ ವೈಜ್ಞಾನಿಕ ತಳಹದಿಯ ಮೇಲೆ ಸಮರ್ಪಕವಾದ ಉತ್ತರವನ್ನು ನೀಡುವುದು ಮಾತ್ರ ಇಂದಿಗೂ ಸಾಧ್ಯವಾಗಿಲ್ಲ. ಅಂತಹ ಕೆಲವು ಬಹಳ ಆಸಕ್ತಿ ಕೆರಳಿಸುವ ಮತ್ತ ರಹಸ್ಯಮಯವಾಗಿಯೇ ಉಳಿದಿರುವ ವಿಚಾರಗಳನ್ನು ನಾವಿಲ್ಲಿ ತಿಳಿಯೋಣ ಬನ್ನಿ. ಮೊದಲನೆಯದಾಗಿ ಪ್ಲೇಗ್ ರೋಗದ ಬಗ್ಗೆ ಬಹಳಷ್ಟು ಕೇಳಿದ್ದೇವೆ. ಆದರೆ ಡಾನ್ಸಿಂಗ್ ಪ್ಲೇಗ್ ರೋಗ ಎಂದರೆ ಇದೆಂತಹ ವಿಚಿತ್ರ ಎನಿಸಬಹುದು. ಆದರೆ 1518 ರ ಅವಧಿಯಲ್ಲಿ ಪವಿತ್ರ ರೋಮ್ ಸಾಮ್ರಾಜ್ಯದ ಸ್ಟ್ರಾಸ್ ಬರ್ಗ್ ನಲ್ಲಿ ಇಂತಹುದೇ ಒಂದು ಕಾಯಿಲೆ ಕಾಣಿಸಿಕೊಂಡಿತ್ತು ಎನ್ನುತ್ತದೆ ಇತಿಹಾಸ.

ಆ ನಗರದಲ್ಲಿ ಇದ್ದಕ್ಕಿದ್ದಂತೆ ಜನರು ಮನಸೋ ಇಚ್ಚೆ, ನಿರಂತರವಾಗಿ ಕುಣಿಯಲು ಆರಂಭಿಸಿದ್ದರು. ಹಗಲು ಇರುಳು ಎನ್ನದೆ ಕುಣಿದು ಆಯಾಸ ಗೊಂಡು ಬಿದ್ದರೆ ಮತ್ತೆ ಕೆಲವರು ಪ್ರಾಣವನ್ನೇ ಕಳೆದುಕೊಂಡರು. ಸುಮಾರು ಎರಡು ತಿಂಗಳ ಕಾಲ ಹರಡಿದ್ದ ಈ ರೋಗ ಅಷ್ಟೇ ರಹಸ್ಯವಾಗಿ ಉಳಿದಿದೆ. ಅಂದು ಅಲ್ಲಿನ ಜನರಿಗೆ ಈ ರೋಗ ಏಕೆ ಬಂದಿತ್ತು ಎನ್ನುವುದಕ್ಕೆ ಇದುವರೆವಿಗೂ ಉತ್ತರವಿಲ್ಲ. 1518 ರ ಜುಲೈ ತಿಂಗಳ ಒಂದು ದಿನ ಫ್ರಾ(ಶ್ರೀಮತಿ) ಟ್ರಾಫಿಯಾ ಎನ್ನುವಾಕೆ ಇದ್ದಕ್ಕಿದ್ದಂತೆ ತನ್ನ ಮನೆಯಿಂದ ಹೊರಗೆ ಬಂದು ರಸ್ತೆಯಲ್ಲಿ ಕುಣಿಯಲಾರಂಭಿಸಿದಳು. ಆಕೆ ಪ್ರಜ್ಞೆ ಕಳೆದುಕೊಳ್ಳೋವರೆಗೂ ಕುಣಿದಳು. ಅನಂತರ ಆರೈಕೆ ಪಡೆದು ಎಚ್ಚರವಾದ ಮೇಲೆ ಮತ್ತೆ ಕುಣಿಯಲಾರಂಭಿಸಿದಳು.

ಇದಾದ ನಂತರ ಒಂದೇ ವಾರದಲ್ಲಿ ಸುಮಾರು 30 ಜನರಿಗೆ ಈ ರೋಗ ಹರಡಿ ಅವರು ರಸ್ತೆಗಿಳಿದು ನರ್ತನ ಮಾಡಿದರು. ಆಗ ಅದಕ್ಕೆ ಔಷಧಿ ಏನೆಂದು ತಿಳಿಯದೆ, ಒಂದು ಸಿದ್ಧಾಂತದ ಪ್ರಕಾರ ಹೆಚ್ಚು ಕುಣಿಯುವುದೇ ಇದಕ್ಕೆ ಮದ್ದು ಎಂದು, ಅಧಿಕಾರಿಗಳು ಜನರಿಗೆ ಡಾನ್ಸ್ ಮಾಡಲು ಗಿಲ್ಡ್ ಹಾಲ್ ಗಳನ್ನು ಸ್ಥಾಪನೆ ಮಾಡಿದ್ದಲ್ಲದೆ ,ಡಾನ್ಸ್ ಮಾಸ್ಟರ್ ಗಳನ್ನು ನೇಮಿಸಿದರು. ಸುಮಾರು 400 ಮಂದಿಗೆ ಈ ರೋಗದಿಂದ ಮುಕ್ತಿ ಸಿಕ್ಕಿದಾದರೂ ಕೆಲವರು ತೀವ್ರ ಆಯಾಸದಿಂದ ಅಸುನೀಗಿದರು. ಕಡೆಗೆ ಈ ರೋಗ ಸೆಪ್ಟೆಂಬರ್‌ ವೇಳೆಗೆ ನಿಯಂತ್ರಣ ವಾಯಿತು. ಯೂರೋಪಿನ ಇತಿಹಾಸದಲ್ಲಿ ಈ ಡಾನ್ಸ್ ಪ್ಲೇಗ್ ಒಂದು ರೋಚಕ ಮಾಹಿತಿಯಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here