ಕೇವಲ 44 ಎಸೆತಗಳಲ್ಲಿ ಏಳು ಆಕರ್ಷಕ ಸಿಕ್ಸರ್ ಮತ್ತು  ಮೂರು ಬೌಂಡರಿ ನೆರವಿನ ಅಜೇಯ ಬಿರುಸಿನ 82 ರನ್ ಗಳಿಸಿದ ಎಬಿಡಿ ವಿಲಿಯರ್ಸ್ ಹಾಗೂ 24 ಎಸೆತಗಳಲ್ಲಿ ಏಳು ಬೌಂಡರಿ ಮತ್ತು ಎರಡು ಸಿಕ್ಸರ್ ನೆರವಿನ 43 ರನ್ ಗಳಿಸಿದ ಪಾರ್ಥಿವ್ ಪಟೇಲ್ ಮತ್ತು ಕೊನೆಯ ಓವರ್ ನಲ್ಲಿ ಸಿಡಿದ ಮಾರ್ಕೊವ್ ಅವರ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 202 ರನ್ ಗಳಿಸಿದೆ. ಪಾರ್ಥಿವ್ ಪಟೇಲ್ ಹಾಗೂ ಎಬಿ ಡಿವಿಲಿಯರ್ಸ್ ಹೋರಾಟದಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಬ್ಬರಿಸಿದೆ. RCB 4 ವಿಕೆಟ್ ನಷ್ಟಕ್ಕೆ 202 ರನ್ ಸಿಡಿಸಿದೆ . ಈ ಮೂಲಕ ಪಂಜಾಬ್ ಗೆಲುವಿಗೆ 203 ರನ್ ಟಾರ್ಗೆಟ್ ನೀಡಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ RCBಗೆ ಪಾರ್ಥೀವ್ ಪಟೇಲ್ ಉತ್ತಮ ಆರಂಭ ನೀಡಿದರು. ಆದರೆ ವಿರಾಟ್ ಕೊಹ್ಲಿ ಕೇವಲ 13 ರನ್ ಸಿಡಿಸಿ ನಿರಾಸೆ ಅನುಭಿವಿಸಿದರು. ಮೊದಲ ವಿಕೆಟ್‌ಗೆ ಕೊಹ್ಲಿ ಹಾಗೂ ಪಾರ್ಥೀವ್ 35 ರನ್ ಜೊತೆಯಾಟ ನೀಡಿತು. ಹೋರಾಟ ನೀಡಿದ ಪಾರ್ಥೀವ್ 43 ರನ್ ಸಿಡಿಸಿ ಔಟಾದರು.

ಮೊಯಿನ್ ಹಾಗೂ ಅಕ್ಷದೀಪ್ ನಾಥ್ ನೆರವಾಗಲಿಲ್ಲ. ಆದರೆ ಎಬಿ ಡಿವಿಲಿಯರ್ಸ್ ಅಬ್ಬರಿಸಿದರು. ಮಾರ್ಕಸ್ ಸ್ಟೊಯ್ನಿಸ್ ಜೊತೆ ಸೇರಿದ ಎಬಿಡಿ RCB ರನ್ ವೇಗ ಹೆಚ್ಚಿಸಿದರು. ಎಬಿಡಿ ಅರ್ಧಶತಕ ಸಿಡಿಸಿ ಮಿಂಚಿದರು. ಎಬಿಡಿ 44 ಸೆತದಲ್ಲಿ 3 ಬೌಂಡರಿ ಹಾಗೂ 7 ಸಿಕ್ಸರ್ ನೆರವಿನಿಂದ ಅಜೇಯ 82 ರನ್ ಸಿಡಿಸಿದರು. ಸ್ಟೊಯ್ನಿಸ್ 34 ಎಸೆತದಲ್ಲಿ ಅಜೇಯ 46 ರನ್ ಸಿಡಿಸಿದರು. ಈ ಮೂಲಕ Rcb 4 ವಿಕೆಟ್ ನಷ್ಟಕ್ಕೆ 202 ರನ್ ಸಿಡಿಸಿತು. ಕೊನೆಯ ಓವರ್ ನಲ್ಲಿ ಬರೋಬ್ಬರಿ 27 ರನ್ ಗಳು ಹರಿದು ಬಂತು .

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here