ಐಪಿಎಲ್ ನ 13 ನೇ ಆವೃತ್ತಿಗೆ ಸಿದ್ಧತೆಗಳು ಆರಂಭವಾಗಿದೆ. ಈ ಸೀಸನ್ ನಲ್ಲಿ ಕಪ್ ತನ್ನದಾಗಿಸಿಕೊಳ್ಳುವ ಉದ್ದೇಶದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿ ನಡೆದ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ತಮಗೆ ಬೇಕಾದ ಆಟಗಾರರನ್ನು ಖರೀದಿ ಮಾಡಿ, ತಮ್ಮ ಟೀಂ ಅನ್ನು ಮೊದಲಿಗಿಂತ ಸದೃಢವಾಗಿ ಮಾಡಲು ಸಜ್ಜಾಗಿದೆ. ಈ ಬಗ್ಗೆ RCB ಯ ಕ್ಯಾಪ್ಟನ್ ವಿರಾಟ್ ಕೊಹ್ಲಿ ಕೂಡಾ ಸಂತೋಷ ಪಟ್ಟಿದ್ದಾರೆ. ಆರ್.ಸಿ.ಬಿ.ಗೆ ಒಂಟು ಎಂಟು ಹೊಸ ಆಟಗಾರರು ಸೇರ್ಪಡೆ ಆಗಿದ್ದು, ಇದರಲ್ಲಿ ಅತಿ ಹೆಚ್ಚು ಬಿಡ್ ಗೆ ಮಾರಾಟವಾದ ಮೂರು ಜನ ಆಟಗಾರರಲ್ಲಿ ಒಬ್ಬರು ಆರ್.ಸಿ.ಬಿ. ತಂಡದಲ್ಲಿ ಇದ್ದಾರೆ.

ದಕ್ಷಿಣ ಆಫ್ರಿಕಾದ ಆಲ್ರೌಂಡರ್ ಆಟಗಾರ ಎನಿಸಿರುವ ಕ್ರಿಸ್ ಮೊರೀಸ್ ಅವರನ್ನು 10 ಕೋಟಿ ಕೊಟ್ಟು ಖರೀದಿ ಮಾಡಿದ್ದು ಅವರೇ ಈ ಬಾರಿಯ ಗರಿಷ್ಠ ಮೊತ್ತಕ್ಕೆ ಸೇಲ್ ಆದ 3 ನೇ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ. ಆ್ಯರೋನ್ ಫಿಂಚ್ ಅವರನ್ನು 4 ಕೋಟಿ 40 ಲಕ್ಷಕ್ಕೆ ಆರ್​ಸಿಬಿ ಹರಾಜಿನಲ್ಲಿ ಖರೀದಿ ಮಾಡಿದ ಮೊದಲ ಆಟಗಾರ. ಅದಾದ ನಂತರ ಹರಾಜಿನ ಕೊನೆಯ ಹಂತದಲ್ಲಿ ಸೇಲ್ ಆಗದೆ ಉಳಿದಿದ್ದ ಡೇಲ್ ಸ್ಟೈನ್​ರನ್ನು ಮೂಲಬೆಲೆ 2 ಕೋಟಿ ಕೊಟ್ಟು ತನ್ನ ತಂಡಕ್ಕೆ ಸೇರಿಸಿಕೊಂಡಿದೆ ಆರ್.ಸಿ.ಬಿ.
ಕರ್ನಾಟಕದ ಆಟಗಾರ ಪವನ್ ದೇಶಪಾಂಡೆ ಅವರನ್ನು 20 ಲಕ್ಷಕ್ಕೆ ಖರೀದಿ ಮಾಡಿದರೆ, ಶಹ್ಬಾಜ್ ಅಹ್ಮದ್ 20 ಲಕ್ಷ, ಇಸ್ರು ಉದಾನ 50 ಲಕ್ಷಕ್ಕೆ, ಹಾಗೂ ಆಸ್ಟ್ರೇಲಿಯಾ ಪ್ರಮುಖ ವೇಗಿ ಕೇನ್ ರಿಚರ್ಡಸನ್ ಅವರನ್ನು 4 ಕೋಟಿ ಕೊಟ್ಟು ಖರೀದಿ ಮಾಡಿದೆ. ಜೋಶ್ ಪಿಲಿಪ್ ಅವರನ್ನು 20 ಲಕ್ಷ ಕೊಟ್ಟು ಖರೀದಿ ಮಾಡಿತು.

ಆರ್.ಸಿ.ಬಿ. ಯಲ್ಲಿ ಈಗ ಒಟ್ಟು 21 ಜನ ಆಟಗಾರರು ಇದ್ದಾರೆ. ಅದರಲ್ಲಿ ವಿರಾಟ್ ಕೊಹ್ಲಿ (ನಾಯಕ), ಎಬಿ ಡಿವಿಲಿಯರ್ಸ್​​, ದೇವದತ್ ಪಡಿಕ್ಕಲ್, ಪಾರ್ಥಿವ್ ಪಟೇಲ್ (ವಿಕೆಟ್ ಕೀಪರ್), ಆ್ಯರೋನ್ ಫಿಂಚ್, ಜೋಶ್ ಪಿಲಿಪ್ (ವಿಕೆಟ್ ಕೀಪರ್), ಶಹ್ಬಾಜ್ ಅಹ್ಮದ್ (ವಿಕೆಟ್ ಕೀಪರ್), ಗುರ್​ಕೀರತ್ ಸಿಂಗ್ ಮನ್, ಪವನ್ ದೇಶಪಾಂಡೆ ಇವರೆಲ್ಲಾ ಬ್ಯಾಟ್ಸಮನ್ ಗಳಾಗಿದ್ದಾರೆ. ಮೊಯೀನ್ ಅಲಿ, ಕ್ರಿಸ್ ಮೊರೀಸ್, ಇಸುರು ಉದಾನ, ಶಿವಂ ದುಬೆ ಇವರು ಆಲ್ ರೌಂಡರ್ ಗಳು, ಸ್ಪಿನ್ನರ್ ಗಳಾಗಿ ಯಜುವೇಂದ್ರ ಚಹಾಲ್, ವಾಷಿಂಗ್ಟನ್ ಸುಂದರ್, ಪವನ್ ನೇಗಿ, ವೇಗಿಗಳಾಗಿ ಉಮೇಶ್ ಯಾದವ್, ನ್​ವದೀಪ್ ಸೈನಿ, ಮೊಹಮ್ಮದ್ ಸಿರಾಜ್, ಕೇನ್ ರಿಚರ್ಡಸನ್, ಡೇಲ್ ಸ್ಟೈನ್ ಇದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here