ಐಪಿಎಲ್ ನ ಕಳೆದ 12 ಆವೃತ್ತಿ ಗಳಲ್ಲೂ ಕಪ್ ಗೆಲ್ಲುವಲ್ಲಿ ವಿಫಲವಾಗಿದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ‌. ಆದರೆ ಈಗ 2020 ರ ಆವೃತ್ತಿಯಲ್ಲಿ ಏನೇ ಆಗಲಿ ಕಪ್ ಪಡೆಯಲೇಬೇಕೆಂದು ಪಣತೊಟ್ಟಿರುವ ಬೆಂಗಳೂರು ಪ್ರಾಂಚೈಸಿ, ಇದೀಗ ತನ್ನ ಟೀಂ ನಲ್ಲಿ ಒಂದು ದೊಡ್ಡ ಬದಲಾವಣೆಗೆ ಮುಂದಾಗಿದೆ. ಇದನ್ನು ಬದಲಾವಣೆ ಎನ್ನುವುದಕ್ಕಿಂದ ಒಂದು ಮೇಜರ್ ಸರ್ಜರಿಯೆಂದೇ ಕರೆಯಬಹುದಾಗಿದ್ದು, ಇದರ ಮೂಲಕ 12 ಜನ ಆಟಗಾರರನ್ನು ಅದು ತನ್ನ ತಂಡದಿಂದ‌ ಕೈ ಬಿಟ್ಟಿದೆ ಎನ್ನಲಾಗಿದೆ.

ಇದು ನಿಜವಾಗಿದ್ದು, ತಂಡಕ್ಕೆ ಒಂದು ಹೊಸ ರೂಪ ಹಾಗೂ ಹುರುಪನ್ನು ನೀಡುವ ಪ್ರಯತ್ನವಾಗಿ ತಂಡದಿಂದ ಬರೋಬ್ಬರಿ 12 ಮಂದಿ ಆಟಗಾರರನ್ನು ಕೈ ಬಿಡಲಾಗಿದೆ. ಸ್ಟಾರ್ ವೇಗಿ ಡೇಲ್ ಸ್ಟೇನ್ ಕೈಬಿಟ್ಟಿದ್ದು ಅಚ್ಚರಿಗೆ ಕಾರಣವಾಗಿದೆ. ಆಲ್ರೌಂಡರ್ ಕಾಲಿನ್ ಡಿ ಗ್ರಾಂಡ್’ಹೋಮ್, ಮಾರ್ಕರ್ ಸ್ಟೋನಿಸ್ ಶಿಮ್ರೇನ್ ಹೆಟ್ಮಯೋರ್ ಅವರನ್ನು ಕೂಡಾ RCB ತನ್ನ ತಂಡದಿಂದ ಹೊರಗಿಟ್ಟಿದೆ. ಕಳೆದ ಆವೃತ್ತಿಯಲ್ಲಿ ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾಗಿದ್ದ ಟಿಮ್ ಸೌಥಿಗೂ ಕೂಡಾ ಈ ಬಾರಿ ತಂಡದಿಂದ ಗೇಟ್ ಪಾಸ್ ನೀಡಲಾಗಿದೆ. RCB ಎಬಿ ಡಿವಿಲಿಯರ್ಸ್ ಹಾಗೂ ಮೊಯಿನ್ ಅಲಿ ಇಬ್ಬರನ್ನು ಬಿಟ್ಟು ಉಳಿದೆಲ್ಲಾ ವಿದೇಶಿ ಆಟಗಾರರನ್ನು ತಂಡದಿಂದ ಕೈಬಿಟ್ಟಿದೆ.

ಬರುವ ಡಿಸೆಂಬರ್ 19 ರಂದು ಕೊಲ್ಕತ್ತಾದಲ್ಲಿ ಆಟಗಾರರ ಹರಾಜು ನಡೆಯಲಿದ್ದು, RCB ತನ್ನ ತಂಡಕ್ಕೆ ಹೊಸ ಆಟಗಾರರನ್ನು ಖರೀದಿ ಮಾಡಲಿದೆ. ಅಲ್ಲದೆ RTM ಕಾರ್ಡ್ ಬಳಸಿ ತನ್ನ ತಂಡದಲ್ಲಿನ ಇಬ್ಬರು ಆಟಗಾರರನ್ನು ಉಳಿಸಿಕೊಳ್ಳುವ ಅವಕಾಶವನ್ನು ಕೂಡಾ ಪಡೆದಿರುತ್ತದೆ. ಮುಂದಿನ ಐಪಿಎಲ್ ನಲ್ಲಿ RCB ಯಲ್ಲಿ ಯಾರೆಲ್ಲಾ ಇರುವರು ಎಂಬುದು‌ ಹರಾಜಿನ ನಂತರ ತಿಳಿಯಲಿದೆ. ಈಗ ಸದ್ಯಕ್ಕೆ ಆರ್.ಸಿ.ಬಿ. ಕೈ ಬಿಟ್ಟಿರುವ ಆಟಗಾರರ ಪಟ್ಟಿ ಈ ರೀತಿ ಇದೆ.

1. ಡೇಲ್ ಸ್ಟೇನ್
2. ಮಾರ್ಕಸ್ ಸ್ಟೋನಿಸ್
3. ಶಿಮ್ರೋನ್ ಹೆಟ್ಮೇಯರ್
4. ಅಕ್ಷದೀಪ್ ನಾಥ್
5.ನೇಥನ್ ಕೌಲ್ಟರ್ ನೀಲ್
6. ಕಾಲಿನ್ ಡಿ ಗ್ರಾಂಡ್ ಹೋಮ್
7. ಪ್ರಯಾಸ್ ರೇ ಬರ್ಮನ್
8. ಟಿಮ್ ಸೌಥಿ
9. ಕುಲ್ವಂತ್ ಖೆಜ್ರೋಲಿಯಾ
10. ಹಿಮ್ಮತ್ ಸಿಂಗ್
11. ಹೆನ್ರಿಚ್ ಕ್ಲಾಸೆನ್
12. ಮಿಲಿಂದ್ ಕುಮಾರ್

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here