ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಗೆ ಕ್ಷಣಗಣನೆ ಅರಂಭವಾಗಿದ್ದು ಈ ಬಾರಿಯ  ಐಪಿಎಲ್ ನಲ್ಲಿ ಹರಾಜು ಪ್ರಕ್ರಯೆ ಮುಗಿದಿದೆ. ಎಲ್ಲಾ ತಂಡಗಳಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದ್ದು ಅದರಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಸಹ ಬದಲಾವಣೆ ಆಗಿವೆ. ವಿರಾಟ್ ಕೊಹ್ಲಿ  ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಟೀಂ ನ ಆಟಗಾರರ ಅಂತಿಮ ಪಟ್ಟಿ ಬಿಡುಗಡೆ ಮಾಡಿದೆ. 2019ರ ಟೂರ್ನಿಯ ಹರಾಜು ಪ್ರಕ್ರಿಯೆ ಕಾರಣ ಆರ್‌ಸಿಬಿ ಕೆಲ ಆಟಗಾರರಿಗೆ ಗೇಟ್ ಪಾಸ್ ನೀಡಿದ್ದು, ತಂಡದಲ್ಲಿ ನಾಯಕ ವಿರಾಟ್ ಕೊಹ್ಲಿ, ಎ ಬಿ ಡಿವಿಯರ್ಸ್, ಪಾರ್ಥಿವ್ ಪಟೇಲ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಪವನ್ ನೇಗಿ, ಮೊಯಿನ್ ಅಲಿ, ಯಜುವೇಂದ್ರ ಚಹಲ್, ಮೊಹಮ್ಮದ್ ಸಿರಾಜ್, ಥಿಮ್ ಸೌಥಿ, ಉಮೇಶ್ ಯಾದವ್, ನವದೀಪ್ ಸೈನಿ ಉಳಿದುಕೊಂಡಿದ್ದಾರೆ.

ಆರ್​ಸಿಬಿ ಇಂದ  ಔಟ್ ಆದ ಆಡಗಾರರು.: ಕ್ವಿಂಟನ್ ಡಿ ಕಾಕ್, ಮಂದೀಪ್ ಸಿಂಗ್, ಬ್ರೆಂಡನ್ ಮೆಕ್ಕಲಂ, ಕ್ರಿಸ್ ವೋಕ್ಸ್, ಕೋರಿ ಆಂಡರ್​ಸನ್, ಸರ್ಫ್ರಾಜ್ ಖಾನ್, ಅನಿಕೇತ್ ಚೌಧರಿ, ಅನಿರುದ್ಧ ಜೋಶಿ, ಎಂ.ಅಶ್ವಿನ್, ಮನನ್ ವೋಹ್ರಾ, ಪವನ್ ದೇಶಪಾಂಡೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here