ನೆನ್ನೆ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕಿಂಗ್ಸ್ ಇಲೆವನ್ ಪಂಜಾಬ್ ತಂಡಗಳ ನಡುವೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆದು ಆ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲುವಿನ ನಗೆ ಬೀರಿದೆ. ನೆನ್ನೆಯ ಪಂದ್ಯ ಅಭಿಮಾನಿಗಳ ಪಾಲಿಗೆ ಬಹಳ ವಿಶೇಷತೆಯಿಂದ ಕೂಡಿತ್ತು. ಕನ್ನಡದ ವರನಟ ಪದ್ಮಭೂಷಣ ಡಾ.ರಾಜ್‍ಕುಮಾರ್ ಅವರ ಜಯಂತಿಯ ಸಂಭ್ರಮ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಹ ಮೊಳಗಿತ್ತು. ಕ್ರೀಡಾಂಗಣದ ಒಳಗಿನ ಬೃಹತ್ ಪರದೆಯ ಮೇಲೆ ಅಣ್ಣಾವ್ರಿಗೆ ಶುಭಾಷಯ ಕೋರಲಾಗಿತ್ತು. ಇದನ್ನು ಕಂಡ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು.

ಹೌದು , ಬೆಂಗಳೂರಿನಲ್ಲಿ  ರಾಜ್ ಕುಮಾರ್ ಹುಟ್ಟುಹಬ್ಬ ಜೋರಾಗಿಯೇ ನಡೆದಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಅಭಿಮಾನಿಗಳು ಈ ದಿನವನ್ನು ಆಚರಣೆ ಮಾಡಿದ್ದಾರೆ.ಈ ವರ್ಷದ ಹುಟ್ಟುಹಬ್ಬ ಕೆಲವು ವಿಶೇಷ ಕಾರಣಗಳಿಂದ ಬಹಳಷ್ಟು ಖುಷಿ ನೀಡಿದೆ.ಹೌದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಪಂದ್ಯದಲ್ಲಿ ರಾಜ್ ದರ್ಶನ ಆಗಿದೆ. ರಾಜ್ ಕುಮಾರ್ ಅವರ ಫೋಟೋವನ್ನು ಹಾಕುವ ಮೂಲಕ ಅಭಿಮಾನಿಗಳಿಗೆ ಸರ್ ಪ್ರೈಸ್ ನೀಡಿದೆ.

ದೊಡ್ಡ ಪರದೆ ಮೇಲೆ ರಾಜ್ ಕುಮಾರ್ ಫೋಟೋ ಹಾಗೂ ಅವರ ಹಾಡನ್ನು ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಇಡೀ ಕ್ರೀಡಾಂಗಣ ಈ ಸಂದರ್ಭವನ್ನು ಸಂಭ್ರಮಿಸಿತು.ಇನ್ನು ಬೆಂಗಳೂರು ಹಾಗೂ ಪಂಜಾಬ್ ನಡುವೆ ನಡೆದ, ಈ ಪಂದ್ಯವನ್ನು ವೀಕ್ಷಣೆ ಮಾಡಲು ಸ್ಯಾಂಡಲ್ ವುಡ್ ಕಿಂಗ್  ಡಾ. ಶಿವರಾಜ್ ಕುಮಾರ್ ಬಂದಿದ್ದರು. ಶಿವಣ್ಣ ಅವರನ್ನು ನೋಡಿದ ಅಭಿಮಾನಿಗಳು ಮೈದಾನದಲ್ಲಿ ಶಿವಣ್ಣನಿಗೆ ಜೈಕಾರ ಹಾಕಿ ಅಣ್ಣಾವ್ರ ಜನ್ಮದಿನದ ಕಳೆ ಹೆಚ್ಚಿಸಿದರು. ನಿರ್ಮಾಪಕ ಶ್ರೀಕಾಂತ್ ಹಾಗೂ ನಿರ್ದೇಶಕ ರಘುರಾಮ್ ಇಬ್ಬರು ಶಿವಣ್ಣನ ಜೊತೆ ಪಂದ್ಯ ನೋಡಿ ಆನಂದಿಸಿದರು.ಈ ಎಲ್ಲ ವಿಶೇಷತೆಗಳ ಜೊತೆಗೆ ಪಂಜಾಬ್ ವಿರುದ್ಧ ಆರ್ ಸಿಬಿ ಪಂದ್ಯವನ್ನು ಗೆದ್ದಿದೆ. 17 ರನ್ನಗಳಿಂದ ಬೆಂಗಳೂರು ತಂಡ ನಿನ್ನೆಯ ಪಂದ್ಯದಲ್ಲಿ ಜಯ ಪಡೆದಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ಅಣ್ಣಾವ್ರ ಜನ್ಮದಿನದ ಸಂಭ್ರಮ 😍

Dr.Shivarajkumar Yuva Sene यांनी वर पोस्ट केले बुधवार, २४ एप्रिल, २०१९

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here