ಮರಿಯಮ್ಮನಹಳ್ಳಿ: ಹೋಬಳಿಯ ಡಣನಾಯಕನಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಇಂದಿರಾ ನಗರದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅರ್ಧವಾರ್ಷಿಕ ರಜೆ ಮುಗಿಸಿಕೊಂಡು ಶಾಲೆ ಪ್ರಾರಂಭವಾಗುತ್ತಿದ್ದಂತೆ ನೀರಿನ ಕೊರತೆ ಕಂಡು ಬಂದಿದೆ. ಈ ಶಾಲೆಯಲ್ಲಿ ಒಂದರಿಂದ ಐದನೇ ತರಗತಿವರೆಗೆ 101 ಮಕ್ಕಳಿದ್ದು ಅಕ್ಟೋಬರ್ 25 ರಿಂದ ತರಗತಿ ಶುರುವಾಗಿದ್ದು, ಮಕ್ಕಳಿಗೆ ಅಡುಗೆ ಮಾಡಲು, ಮತ್ತು ಕುಡಿಯಲು ಶಾಲೆಯಲ್ಲಿ ನೀರಿಲ್ಲದಂತಾಗಿದೆ. ಇಂದಿರಾನಗರಕ್ಕೆ 15 ದಿನಗಳಿಂದ ನೀರಿನ ಸಂಪರ್ಕ ಕಡಿತವಾಗಿದೆ, ಹಾಗಾಗಿ ಶಾಲೆ ತೆರೆದ ಸಂದರ್ಭದಲ್ಲಿ ಶಾಲೆಗೂ ಸಹ ನೀರಿಲ್ಲದಂತಾಗಿದೆ. ಅಡುಗೆ