ಹಾಸನ ಜಿಲ್ಲೆಯ ಅರಸೀಕರ ತಾಲೂಕಿನ ಬನ್ನಿ ಮರದ ಹಟ್ಟಿ ಎಂಬ ಗ್ರಾಮದಲ್ಲಿ ಬಲವಂತವಾಗಿ ಮತಾಂತರ ನಡೆಯುತ್ತಿದೆ ಎಂಬ ಸುದ್ದಿಯೊಂದು ಈಗ ಹರಿದಾಡುತ್ತಿದೆ. ರಾಜು ಫಾಸ್ಟರ್ ಎನ್ನುವ ವ್ಯಕ್ತಿಯೊಬ್ಬರು ಈ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಗ್ರಾಮಸ್ಥರು ಆತನನ್ನು ದೂರಿದ್ದಾರೆ. ಈ ವ್ಯಕ್ತಿ ಗ್ರಾಮಸ್ಥರನ್ನು ಬಲವಂತವಾಗಿ ಕ್ರೈಸ್ತ ಮತ್ತಕ್ಕೆ ಬದಲಾವಣೆ ಮಾಡಿಸಿದ ನಂತರ ಇತರೆ ಕುಗ್ರಾಮಗಳ ಕಡೆ ಗಮನವಹಿಸುತ್ತಾರೆ ಎನ್ನಲಾಗಿದೆ. ಬನ್ನಿ ಮರದ ಹಟ್ಟಿ ಗ್ರಾಮದಲ್ಲಿ ಈಗಾಗಲೇ ಕೆಲವು ಕುಟುಂಬಗಳನ್ನು ಕ್ರೈಸ್ತ ಮತಕ್ಕೆ ಮತಾಂತರ ಮಾಡಲಾಗಿದೆಯೆಂದು ತಿಳಿದು ಬಂದಿದೆ.

ಅದು ಮಾತ್ರವಲ್ಲದೇ ಮತಾಂತರ ಆಗಿರುವವರು ತಮ್ಮ ಕುಟುಂಬದ ಹಿರಿಯರು ಅಂದರೆ ತಂದೆ ತಾಯಿಯನ್ನು ಕೂಡಾ ಮತಾಂತರ ಮಾಡುವುದಕ್ಕೆ ಬಲವಂತ ಮಾಡಲಾಗಿದ್ದು, ಒಪ್ಪಿಕೊಳ್ಳದವರನ್ನು ಮಳೆಯಿಂದ ಹೊರ ಹಾಕುತ್ತಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಗ್ರಾಮದಲ್ಲಿ ಸ್ಥಾಪನೆ ಮಾಡಿರುವ ಚರ್ಚ್ ಗೆ ಜನರನ್ನು ಕೊಂಡೊಯ್ದು, ಅಲ್ಲಿ ತೀರ್ಥ ಕುಡಿಸಿದ ಮೇಲೆ ಗ್ರಾಮದಲ್ಲಿ ಸಾವು ನೋವು ಹೆಚ್ಚಾಗಿದೆ ಎನ್ನಲಾಗಿದೆ. ಗ್ರಾಮಸ್ಥರು ಇದರಿಂದ ಆತಂಕಕ್ಕೆ ಒಳಗಾಗಿದ್ದಾರೆ.

ವಿಷಯ ತಿಳಿದ ಋಷಿಕುಮಾರ ಸ್ವಾಮೀಜಿ ಮತ್ತು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮಸ್ಥರ ಜೊತೆ ಮಾತನಾಡಿ, ಬಲವಂತದ ಮತಾಂತರದ ವಿರುದ್ದ ದೂರು ನೀಡುವುದಾಗಿ ಹೇಳಿದ್ದು, ಇನ್ನೂ ಕೆಲವು ಸ್ವಾಮೀಜಿಗಳ ಜೊತೆ ಗ್ರಾಮದಲ್ಲಿ ಜಾಗೃತಿ ಮೂಡಿಸುವುದಾಗಿ, ಗ್ರಾಮವನ್ನು ದತ್ತು ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಕಾಳಿ ಮಠದ ಋಷಿ ಕುಮಾರ ಸ್ವಾಮಿಗಳು ಗ್ರಾಮಕ್ಕೆ ಭೇಟಿ ನೀಡಿದಾಗ ಊರಿನ ಎಲ್ಲಾ ಹಿಂದುಗಳು ಆಲಯಕ್ಕೆ ಬಂದು ಪೂಜೆ ಅಲ್ಲಿಸಿದ್ದು ಮಾತ್ರವಲ್ಲದೇ ಮತಾಂತರ ಹೊಂದಿದ್ದ ಕುಟುಂಬಗಳು ಮತ್ತೆ ಹಿಂದೂ ಧರ್ಮಕ್ಕೆ ಸೇರ್ಪಡೆಯಾಗಿದ್ದಾರೆ .

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here