ಕನ್ನಡ ಚಿತ್ರರಂಗದ ಬಹುನಿರೀಕ್ಷೆಯ ಸಿನಿಮಾ ರುಸ್ತುಂ. ಕರುನಾಡ ಚಕ್ರವರ್ತಿ ಡಾ.ಶಿವರಾಜಕುಮಾರ್ ಅಭಿನಯದ ಈ ಚಿತ್ರವು ನಾಳೆ ( ಶುಕ್ರವಾರ ) ರಾಜ್ಯಾದ್ಯಂತ ಅದ್ದೂರಿಯಾಗಿ ತೆರೆಗೆ ಬರುತ್ತಿದೆ. ಇದೇ ಮೊದಲ ಬಾರಿಗೆ ಸಾಹಸ ನಿರ್ದೇಶಕ ರವಿವರ್ಮ ನಿರ್ದೇಶನ ಮಾಡಿರುವ ರುಸ್ತುಂ ಚಿತ್ರಕ್ಕಾಗಿ ಶಿವರಾಜಕುಮಾರ್ ಅಭಿಮಾನಿಗಳು ಕಾತುರರಾಗಿದ್ದರು‌  . ಜಯಣ್ಣ ಮತ್ತು ಭೋಗೇಂದ್ರ ಬಿಗ್ ಬಜೆಟ್ ನಲ್ಲಿ ನಿರ್ಮಾಣ ಮಾಡಿರುವ ರುಸ್ತುಂ ಚಿತ್ರವು ಹಲವಾರು ವಿಶೇಷತೆಗಳೊಂದಿಗೆ ತೆರೆಗೆ ಬರುತ್ತಿದ್ದು ಶಿವರಾಜಕುಮಾರ್ ಅಭಿಮಾನಿಗಳ ಸಂಭ್ರಮ ಜೋರಾಗಿದೆ. ಬೆಂಗಳೂರಿನ ಪ್ರಮುಖ ಚಿತ್ರಮಂದಿರಗಳಲ್ಲಿ ಶಿವರಾಜಕುಮಾರ್ ಅಭಿಮಾನಿಗಳು ಹಲವಾರು ವಿಶೇಷ ಸಂಭ್ರಮದ ಕಾರ್ಯಕ್ರಮಗಳನ್ನು ಹಮ್ನಿಕೊಂಡಿದ್ದಾರೆ.

ಬೆಂಗಳೂರಿನ ಸಂತೋಷ್ ಚಿತ್ರಮಂದಿರದಲ್ಲಿ ಶಿವಣ್ಣನ ಬೃಹತ್ ಕಟೌಟ್ ತಲೆ ಎತ್ತಿದೆ. ಊರ್ವಶಿ ಚಿತ್ರಮಂದಿರದಲ್ಲಿ ಟಿಕೆಟ್ ವಿತರಣೆ ಬಿರುಸಿನಿಂದ ಸಾಗಿದೆ.ಇನ್ನು ಗೌಡನ ಪಾಳ್ಯ ಶ್ರೀನಿವಾಸ ಚಿತ್ರಮಂದಿರದಲ್ಲಿ ಅಭಿಮಾನಿಗಳೇ ಲಕ್ಷಾಂತರ ಖರ್ಚು ಮಾಡಿ ವಿಭಿನ್ನವಾಗಿ ರುಸ್ತುಂ ಹಬ್ಬ ಆಚರಿಸುತ್ತಿದ್ದಾರೆ. ಬೆಂಗಳೂರಿನ ಕೆ ಅರ್ ಪುರಂ ಚಿತ್ರಮಂದಿರದಲ್ಲಿ ಸಹ ಶಿವರಾಜಕುಮಾರ್ ಅಭಿಮಾನಿಗಳ ಸಂಘವು ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ.

ಇದರ ಜೊತೆಗೆ ಶಿವಸೈನ್ಯ ತಂಡವು ಸಹ ರಾಜ್ಯದ ಇತರ ಚಿತ್ರಮಂದಿರಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಇನ್ನು ಬೆಂಗಳೂರಿನ ಶ್ರೀನಿವಾಸ ಚಿತ್ರಮಂದಿರ ಸೇರಿದಂತೆ ಹೊಸಪೇಟೆ ಹಾಗೂ ಇತರ ಚಿತ್ರಮಂದಿರಗಳಲ್ಲಿ ರುಸ್ತುಂ ಮುಂಜಾನೆ ಆರು ಗಂಟೆಗೇ ಪ್ರದರ್ಶನ ಆರಂಭವಾಗುತ್ತಿದೆ. ರುಸ್ತುಂ ಚಿತ್ರದಲ್ಲಿ ಶಿವಣ್ಣ , ವಿವೇಕ್ ಓಬೆರಾಯ್ ರಚಿತಾರಾಮ್ ಸ್ರದ್ದಾ ಶ್ರೀನಾಥ್ , ಶಿವಮಣಿ ಸೇರಿ ಹಲವರು ನಟಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here