ಚಿತ್ರ :- ರುಸ್ತುಂ 

ತಾರಾಗಣ :- ಡಾ.ಶಿವರಾಜಕುಮಾರ್ , ವಿವೇಕ್ ಓಭೆರಾಯ್ , ಶ್ರದ್ಧಾ ಶ್ರೀನಾಥ್ , ರಚಿತಾರಾಮ್ , ಮಯೂರಿ ,ಶಿವರಾಜ್ ಕೆ.ಆರ್.ಪೇಟೆ , ಮುಂತಾದವರು ‌

ನಿರ್ಮಾಣ :- ಜಯಣ್ಣ ಪ್ರೊಡಕ್ಷನ್ಸ್ .

ಕ್ಯಾಮೆರಾ ಕೈ ಚಳಕ :- ಮಹೇನ್ ಸಿಂಹ

ಸಂಗೀತ :- ಅನೂಪ್ ಸೀಳಿನ್

ಚಿತ್ರಕಥೆ – ನಿರ್ದೇಶನ :- ರವಿವರ್ಮ 

ಸುದ್ದಿಮನೆ ರೇಟಿಂಗ್ :-  ★★★★

ರುಸ್ತುಂ ಅಂದ್ರೆ ಅವನೊಬ್ಬ ಪೊಗರು ತುಂಬಿರೋ ರಗಡ್ ಮತ್ತು ಖಡಕ್ ಪೋಲೀಸ್ ಆಫೀಸರ್. ಅವನು ಹಾಕೋ ಸಿಗ್ನೇಚರ್ ಸಂಖೆಗಳಿಗಿಂತ ಅವನ ಎನ್ ಕೌಂಟರ್ ಅಂಕೆಗಳೇ ಜಾಸ್ತಿ. ಈಗಿನ ಕಾಲದಲ್ಲಿ ಗಾಂದಿ ಬೋಧನೆ ನಡೆಯಲ್ಲ ಏನಿದ್ರು ಸುಭಾಷ್ ಚಂದ್ರ ಬೋಸ್ ಥರಾನೆ ಉತ್ತರ ಕೊಡಬೇಕು ಎಂಬುದು ರುಸ್ತುಂ ಅಲಿಯಾಸ್ ಅಭಿಷೇಕ್ ಸಿದ್ದಾಂತ‌. ಭ್ರಷ್ಟ ರಾಜಕಾರಣಿಗಳ ದುಷ್ಟತನವನ್ನ ಪೋಲೀಸ್ ಎಂಬ ಅಸ್ತ್ರ ಬಳಸಿ ಸಂಹರಿಸೋ ಡಾ‌.ಶಿವರಾಜಕುಮಾರ್ ಚಿತ್ರದುದ್ದಕ್ಕೂ ಮಿಂಚಿದ್ದಾರೆ, ರಗಡ್ ಮೀಸೆ ಲುಕ್ ನಲ್ಲಿ ಬಹಳ ಇಷ್ಟವಾಗುವ ಶಿವಣ್ಣ ಸಾಹಸ ದೃಶ್ಯಗಳಲ್ಲಿ ಮೈ ನವಿರೇಳಿಸುತ್ತಾರೆ‌.

ಮುಜೆ ಆರೆಸ್ಟ್ ಬೋಲೆ ತೋ ಅಲರ್ಜಿ , ಎನ್ ಕೌಂಟರ್ ಬೋಲೆ ತೊ ಎನರ್ಜಿ ಎನ್ನುವ ಡೈಲಾಗ್ ಗಳು ಪ್ರೇಕ್ಷಕರ ಶಿಳ್ಳೆ ಗಿಟ್ಟಿಸುತ್ತವೆ. ಔಟ್ ಅಂಡ್ ಔಟ್ ಪಕ್ಕಾ ಮಾಸ್ ಅವತಾರದಲ್ಲಿ ಶಿವರಾಜಕುಮಾರ್ ರುಸ್ತುಂ ವಿಜೃಂಬಿಸಿದ್ದಾರೆ‌. ಚಿತ್ರದ ಪ್ರಮುಖ ಪಾತ್ರದಲ್ಲಿ ಬಾಲಿವುಡ್ ನಟ ವಿವೇಕ್ ಓಬೇರಾಯ್ ಕಾಣಿಸಿಕೊಂಡಿದ್ದು ಒಬೆರಾಯ್ ಪಾತ್ರ ಮನಗೆಲ್ಲುತ್ತದೆ‌‌. ನಾಯಕಿಯಾಗಿ ಶ್ರದ್ದಾ ಶ್ರೀನಾಥ್, ರಚಿತಾ ರಾಮ್, ಶಿವರಾಜ್ ಕೆ.ಆರ್ ಪೇಟೆ , ಜೆ.ಮಹೇಂದ್ರನ್ ತಮಗೆ ಸಿಕ್ಕ ಅವಕಾಶವನ್ನು ಬಳಸಿಕೊಂಡಿದ್ದಾರೆ. ತಂಗಿಯಾಗಿ ಚಿತ್ರದುದ್ದಕ್ಕೂ ಮಯೂರಿ ಮಿಂಚಿದ್ದರೆ .ಇದೇ ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳಿರುವ ಸಾಹಸ ನಿರ್ದೇಶಕ ರವಿವರ್ಮ ತಮ್ಮ ಮೊದಲ ಪ್ರಯತ್ನದಲ್ಲೆ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿದ್ದಾರೆ.

ಚಿತ್ರದ ಆರಂಭದಲ್ಲಿ ನಾಯಕ ಆಗಮನ ಕೊಂಚ ನಿಧಾನ ಎನಿಸಿದರೂ ಶಿವರಾಜಕುಮಾರ್ ಬೆಳ್ಳಿ ಪರದೆ ಅಲಂಕರಿಸುತ್ತದ್ದಂತೆ ರುಸ್ತುಂ ಬುಲೆಟ್ ವೇಗ ಪಡೆಯುತ್ತದೆ‌. ಬಿಹಾರದಲ್ಲಿ ರುಸ್ತುಂ ಕಣ್ಣಿಗೆ ಹಬ್ಬ ನೀಡುತ್ತಾನೆ ಸಾಹಸ ದೃಶ್ಯಗಳಲ್ಲಿ ಅದ್ದೂರಿಯಾಗಿ ಚಿತ್ರೀಕರಿಸಿರುವ ಛಾಯಾಗ್ರಹಕ ಮಹೇನ್ ಸಿಂಹ ಕೈಚಳಕ ಚಿತ್ರದ ಉದ್ದಕ್ಕೂ ಕಣ್ಣಿಗೆ ಹಬ್ಬ ಕೊಡುತ್ತದೆ. ದೀಪು ಎಸ್ ಸಂಕಲನ ಅನುಪ್ ಸೀಳಿನ್ ಹಿನ್ನೆಲೆ ಸಂಗೀತ ಮನರಂಜಿಸುತ್ತದೆ‌. ಬಹುತೇಕ ಎಲ್ಲಾ ಪಾತ್ರಗಳಲ್ಲೂ ಶಿವರಾಜಕುಮಾರ್ ಅವರನ್ನು ನೋಡಿರುವ ಪ್ರೇಕ್ಷಕರು ರುಸ್ತುಂ ಮೂಲಕ ಮಾಸ್ ಪೋಲಿಸ್ ಅಧಿಕಾರಿಯಾಗಿ ಮನಸ್ಪೂರ್ತಿ ತೆರೆಮೇಲೆ ಎಂಜಾಯ್ ಮಾಡಬಹುದು. ರವಿವರ್ಮನ ಸಾಹಸಗಾದೆ ಮೆಚ್ಚಿಕೊಳ್ಳಲು ಅಡ್ಡಿಯಿಲ್ಲ. ಕುಟುಂಬ ಸಮೇತ ನೋಡಿ ಎಂಜಾಯ್ ಮಾಡಿ.

ಸುದ್ದಿಮನೆ ರೇಟಿಂಗ್ :-  ★★★★

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here