ಹ್ಯಾಟ್ರಿಕ್ ಹೀರೋ ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಅವರ ಬಹು ನಿರೀಕ್ಷಿತ ಸಿನಿಮಾ ರುಸ್ತುಂ ಶುಕ್ರವಾರ ಬಿಡುಡೆಯಾಗಿದೆ. ಬಿಡುಗಡೆಯಾಗಿ ಎಲ್ಲಾ ಕಡೆ ಭರ್ಜರಿ ಪ್ರದರ್ಶನವನ್ನು ಕಾಣುತ್ತಿದೆ.. ರುಸ್ತುಂ ಚಿತ್ರದಲ್ಲಿ ಕಾಲಿವುಡ್ ನ ದಿಗ್ಗಜ ನಿರ್ದೇಶಕರಲ್ಲಿ ಒಬ್ಬರಾಗಿ ಹೆಸರು ಗಳಿಸಿರುವ ಮಹೇಂದ್ರನ್ ಅವರು ಗೃಹ ಮಂತ್ರಿ ದುರ್ಗಾ ಪ್ರಸಾದ್ ಪಾತ್ರವನ್ನು ನಿಭಾಯಿಸಿದ್ದರು. ಆದರೆ ವಿಧಿ ವಿಪರ್ಯಾಸ ಏನೆಂದರೆ ಸಿನಿಮಾ ಶುಕ್ರವಾರ ಬಿಡುಗಡೆಯಾದರೆ, ಮಹೇಂದ್ರನ್ ಅವರು ಕಳೆದ ಏಪ್ರಿಲ್ ೨ ರಂದು ಇಹಲೋಕ ತ್ಯಜಿಸಿದ್ದಾರೆ. ವಿಶೇಷ ಎಂದರೆ ಶಿವಣ್ಣನ ಚಿತ್ರದಲ್ಲಿ ಇಷ್ಟಪಟ್ಟು ಮಹೇಂದ್ರನ್ ಅವರು ನಟಿಸಿದ್ದರು.ಆದರೆ ರುಸ್ತುಂ ತೆರೆಗೆ ಬಂದು ಯಶಸ್ಸು ಪಡೆದ ಸಂಭ್ರಮ ಹಂಚಿಕೊಳ್ಳಲು ಇಂದು ಮಹೇಂದ್ರನ್ ಅವರೇ ಇಲ್ಲ..  ಶಿವರಾಜ್ ಕುಮಾರ್ ಅವರ ಅಭಿನಯದ ರುಸ್ತುಂ ಚಿತ್ರವೇ ಮಹೇಂದ್ರನ್ ಅವರ ಕೊನೆಯ ಸಿನಿಮವಾಗಿದೆ‌‌‌.

ಮಹೇಂದ್ರನ್ ಅವರಿಗೆ 79 ವರ್ಷ ವಯಸ್ಸಾಗಿತ್ತು. ಅವರು ತಮಿಳು ಚಿತ್ರರಂಗದಲ್ಲಿ ಕಥೆ ,ಚಿತ್ರಕಥೆ ಹಾಗೂ ನಿರ್ದೇಶನದಲ್ಲಿ ಬಹಳಷ್ಟು ಅನುಭವವನ್ನು ಪಡೆದವರು. ತಮ್ಮ ಚಿತ್ರ ಜಗತ್ತಿನ ಜೀವನವನ್ನು ಅವರು ಒಬ್ಬ ಕಥೆಗಾರನಾಗಿ ಅರವತ್ತರ ದಶಕದಲ್ಲಿ ಆರಂಭಿಸಿದ್ದರು. ಮುಳ್ಳುಮ್ ಮಲರಂ, ಜಾನಿ, ನೆಂಜಾಥೈ ಕಿಳಾದೆ ಯಂತಹ ದೊಡ್ಡ ದೊಡ್ಡ ಸಿನಿಮಾಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡ ಇವರು ಇತ್ತೀಚಿಗೆ ರಜನಿಕಾಂತ್ ಅಭಿನಯದ ಪೇಟಾ ಹಾಗೂ ಸೇತು ಪತಿಯವರ ಹೊಸ ಸಿನಿಮಾವೊಂದರಲ್ಲಿ ಕೂಡಾ ನಟಿಸಿದ್ದರು.

ರುಸ್ತುಂ ಚಿತ್ರದಲ್ಲಿ ಗೃಹಮಂತ್ರಿಯ ಪಾತ್ರದಲ್ಲಿ ನಟಿಸದ್ದಾರೆ. ಇದು ಖಳನ ಪಾತ್ರವಾಗಿದ್ದು ಚಿತ್ರದಲ್ಲಿ ಮಕ್ಳಳನ್ನು ವ್ಯಾಪಾರ ಮಾಡುವ ಅಕ್ರಮ ದಂಧೆ, ಕಣ್ಣು ಮತ್ತು ಕಿಡ್ನಿಗಳನ್ನು ಕಾನೂನು ಬಾಹಿರವಾಗಿ ವಿದೇಶಕ್ಕೆ ಮಾರಾಟ ಮಾಡುವ ಕಿರಾತಕ ಹಾಗೂ ಕ್ರೂರಿಯಾಗಿ ಅವರು ನಟಿಸಿದ್ದಾರೆ. ಆದರೆ ಅಂತ್ಯದಲ್ಲಿ ಖಳನಿಗೆ ಸೋಲೆಂಬುದು ಕಟ್ಟಿಟ್ಟ ಬುತ್ತಿ ಎಂಬಂತೆ, ನಾಯಕನ ಜಾಲದಲ್ಲಿ ಬಿದ್ದು , ಪ್ರಾಣವನ್ನು ಕಳೆದು ಕೊಳ್ಳುವ ಪಾತ್ರದಲ್ಲಿ ನಟಿಸಿ ಎಲ್ಲರನ್ನು ಮೆಚ್ಚಿಸಿದ ಅವರು ರುಸ್ತುಂ ನ ಯಶಸ್ಸಿನ ಸವಿ ಅನುಭವಿಸಲು ಇಲ್ಲವೆಂಬದು ಒಂದು ವಿಷಾದ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here