ಜಯಣ್ಣ ಕಂಬೈನ್ಸ್ ನಿರ್ಮಾಣದ ಭಾರತೀಯ ಚಿತ್ರರಂಗದಲ್ಲಿ ಹೆಸರುಗಳಿಸಿರುವ ಕನ್ನಡ ಪ್ರಖ್ಯಾತ ಸಾಹಸ ನಿರ್ದೇಶಕ ಕೆ ರವಿವರ್ಮ ನಿರ್ದೇಶನದ ಮೊದಲ ಚಿತ್ರ ರುಸ್ತುಂ. ಕರುನಾಡ ಚಕ್ರವರ್ತಿ ಡಾ.ಶಿವರಾಜಕುಮಾರ್ ಅವರು ರುಸ್ತುಂ ಚಿತ್ರದ ನಾಯಕರಾಗಿ ನಟಿಸುತ್ತಿರುವು ಎಲ್ಲರಿಗೂ ಗೊತ್ತಿರುವ ವಿಚಾರವೇ ಸರಿ. ಇತ್ತೀಚಿನ ಬ್ಲಾಕ್‌ಬಸ್ಟರ್ ಚಿತ್ರ ಟಗರು ಚಿತ್ರದಲ್ಲಿ ಪೋಲೀಸ್ ಅಧಿಕಾರಿಯಾಗಿ ಮಿಂಚಿದ್ದ ಸ್ಯಾಂಡಲ್ ವುಡ್ ಕಿಂಗ್ ಶಿವಣ್ಣ ಇದೀಗ ರುಸ್ತುಂ ಚಿತ್ರದಲ್ಲಿ ಮತ್ತೊಮ್ಮೆ ಪೋಲೀಸ್ ಪಾತ್ರದಲ್ಲಿ  ಕಾಣಿಸಿಕೊಳ್ಳಿಸುತ್ತಿದ್ದಾರೆ.ಈಗಾಗಲೇ ಸತತವಾಗಿ ಚಿತ್ರೀಕರಣದಲ್ಲಿ ನಿರತವಾಗಿರುವ ರುಸ್ತುಂ ಚಿತ್ರದಲ್ಲಿ ಇದೀಗ ಬಾಲಿವುಡ್ ನ ಸೂಪರ್‌ಸ್ಟಾರ್ ಒಬ್ಬರು ಅಭಿನಯಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ಈ ಮೂಲಕ ಇದೇ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿರುವುದು ಮತ್ಯಾರೂ ಅಲ್ಲ ಬಾಲಿವುಡ್ ನ ಸೆನ್ಸೇಸನ್ ಸ್ಟಾರ್ ವಿವೇಕ್ ಓಬರಾಯ್.ಹೌದು ವಿವೇಕ್ ಒಬರಾಯ್ ಇದೇ ಮೊದಲ ಬಾರಿಗೆ ಕನ್ನಡ ಚಿತ್ರದಲ್ಲಿ ನಟಿಸುತ್ತಿದ್ದಾರೆ.ವಿವೇಕ್ ಒಬರಾಯ್ ಅವರ ಪಾತ್ರದ ಬಗ್ಗೆ ಇನ್ನೂ ಯಾವ ಗುಟ್ಟನ್ಬು ನಿರ್ದೇಶಕ ರವಿವರ್ಮ ಬಿಟ್ಟು ಕೊಟ್ಟಿಲ್ಲ. ಆದರೆ ವಿವೇಕ್ ಒಬರಾಯ್ ಅವರು ರುಸ್ತುಂ ಚಿತ್ರದಲ್ಲಿ ಡಾ.ಶಿವರಾಜಕುಮಾರ್ ಅವರ ಜೊತೆ ನಟಿಸುವುದು ಗ್ಯಾರಂಟಿಯಾಗಿದ್ದು ಈ ವಿಷಯವನ್ನು ಸ್ವತಃ ನಿರ್ದೇಶಕ ರವಿವರ್ಮ ಅವರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ರುಸ್ತುಂ ಒಂದು ಸಾಸಹ ಭರಿತ ಆಕ್ಸನ್ ಜೊತೆಗೆ ಫ್ಯಾಮಿಲಿ ಸೆಂಟಿಮೆಂಟ್ ಇರುವ ಚಿತ್ರವಾಗಿದೆ ಎಂದು ರವಿವರ್ಮ ಈ ಹಿಂದೆ  ತಿಳಿಸಿದ್ದರು .ಇದೀಗ ಶಿವರಾಜಕುಮಾರ್ ಜೊತೆ ವಿವೇಕ್ ಒಬರಾಯ್ ಸಹ ರುಸ್ತುಂ ಚಿತ್ರದಲ್ಲಿ ಅಭಿನಯಿಸುತ್ತಿರುವುದು ಅಭಿಮಾನಿಗಳಿಗೆ ರುಸ್ತುಂ ಚಿತ್ರದ ಮೇಲೆ ಇನ್ನೂ ನಿರೀಕ್ಷೆ ಹೆಚ್ಚಾಗುವಂತೆ ಮಾಡಿದೆ.ಜಯಣ್ಣ ಮತ್ತು ಭೋಗೇಂದ್ರ ಅವರು ರುಸ್ತುಂ ಚಿತ್ರದ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದು ಇದೊಂದು ಬಿಗ್ ಬಜೆಟ್ ನ ಚಿತ್ರವಾಗಿದೆ ಎಂದು ರುಸ್ತುಂ ಟೀಮ್ ಹೇಳಿದೆ.

Photos credit :- Ravivarma Facebook Page

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here