ದಕ್ಷಿಣ ಭಾರತದ ಚಿತ್ರರಂಗದಲ್ಲಿ 57 ವರ್ಷ ದಾಟಿದರೂ ಜನಪ್ರಿಯತೆ ಹಾಗೂ ಸಕ್ಸಸ್ ದೃಷ್ಟಿಯಿಂದ ಸೂಪರ್‌ಸ್ಟಾರ್ ಪಟ್ಟ ಉಳಿಸಿಕೊಂಡು ಪ್ರತಿಯೊಂದು ಚಿತ್ರಕ್ಕಾಗಿ ಕಾಯುತ್ತಿರುವ ಕೆಲವೇ ನಟರಲ್ಲಿ ನಮ್ಮ ಕನ್ನಡದ ಸ್ಯಾಂಡಲ್ ವುಡ್ ಕಿಂಗ್ ಡಾ.ಶಿವಣ್ಣ ಪ್ರಮುಖರು. ಬಹುಶಃ ಸ್ಯಾಂಡಲ್ ವುಡ್ ನಲ್ಲಿ ಶಿವರಾಜಕುಮಾರ್ ಅವರು ಕಳೆದ ಮೂರು ದಶಕಗಳಲ್ಲಿ ನಟಿಸಿರುವ ಚಿತ್ರಗಳು‌ ಹಾಗೂ ಚಿತ್ರಗಳ ಸಕ್ಸಸ್ ಬೇರೆ ಯಾವ ನಟರೂ ಮಾಡಿಲ್ಲ. ಡಾ.ಶಿವರಾಜಕುಮಾರ್ ಇದೀಗ ಸದ್ಯ ರುಸ್ತುಂ , ದ್ರೋಣ , ಆನಂದ್ ಚಿತ್ರಗಳ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಅಂಧನ ಪಾತ್ರದಲ್ಲಿ ನಟಿಸಿರುವ ಬಹುನಿರೀಕ್ಷೆಯ ಕವಚ ಏಪ್ರಿಲ್ 5 ರಂದು ತೆರೆಗೆ ಬರುತ್ತಿದೆ.ಇನ್ನು  ಇದರ ನಡುವೆಯೇ ನೆನ್ನೆಯಿಂದ ಡಾ.ಶಿವರಾಜಕುಮಾರ್ ಅಭಿನಯದ ರುಸ್ತುಂ ಚಿತ್ರದ ಹಾಡಿನ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿವೆ.

ಹೇಳಿ ಕೇಳಿ  ಡಾನ್ಸ್ ವಿಚಾರದಲ್ಲಿ ಕರುನಾಡ ಚಕ್ರವರ್ತಿ ಡಾ. ಶಿವರಾಜ್​ಕುಮಾರ್ ಎಲ್ಲರಿಗಿಂತ ಒಂದು ಕೈ ಮುಂದೆ. 50 ಪ್ಲಸ್ ವಯಸ್ಸಾದರೂ ನವಯುವಕರನ್ನು ನಾಚಿಸುವಂತೆ ಸ್ಟೆಪ್ ಹಾಕುತ್ತಾರೆ. ಕಳೆದ ವರ್ಷ ತೆರೆಕಂಡ ಟಗರು ಚಿತ್ರದಲ್ಲಿ ಶಿವಣ್ಣ ಹಾಕಿದ್ದ ಸ್ಟೆಪ್ಸ್ ಸ್ಯಾಂಡಲ್ ವುಡ್ ನಲ್ಲಿ ಸಂಚಲನ ಸೃಷ್ಟಿಸಿತ್ತು‌ . ಇದೀಗ ‘ರುಸ್ತುಂ’ ಸಿನಿಮಾದಲ್ಲಿ ಕಲರ್​ಫುಲ್ ಕಾಸ್ಟ್ಯೂಮ್‌ ತೊಟ್ಟು ಡ್ಯುಯೆಟ್ ಹಾಡಿಗೆ ಶಿವಣ್ಣ ಹೆಜ್ಜೆ ಹಾಕಿದ್ದಾರೆ. ವಿಶೇಷ ಎಂದರೆ ರುಸ್ತುಂ ಸಿನಿಮಾಗಾಗಿ ಶಿವಣ್ಣ ಹಾಕಿರುವ ಸ್ಟೈಲೀಶ್ ಗೆಟಪ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿವೆ. ಶಿವಣ್ಣ ಅವರಿಗೆ ನಾಯಕಿ ಶ್ರದ್ಧಾ ಶ್ರೀನಾಥ್ ಸಾಥ್ ನೀಡಿದ್ದಾರೆ.

ಈ ಹಾಡು ಮುಗಿಯುತ್ತಿದ್ದಂತೆಯೇ ಕುಂಬಳಕಾಯಿ ಒಡೆದು ಶೂಟಿಂಗ್ ಮುಗಿಸಿಕೊಳ್ಳಲಿದ್ದಾರೆ ನಿರ್ದೇಶಕ ರವಿವರ್ಮ. ಚಿತ್ರದ ಎರಡನೇ ಭಾಗದಲ್ಲಿ ಬರುವ ಹಾಡಿದು. ಭಾರತೀಯ ಮತ್ತು ಪಾಶ್ಚಾತ್ಯ ಶೈಲಿಯಲ್ಲಿ ಹಾಡನ್ನು ಸೆರೆಹಿಡಿಯುತ್ತಿದ್ದೇವೆ. ಈಗಾಗಲೇ ನಾಲ್ಕು ದಿನದ ಶೂಟಿಂಗ್ ಮುಕ್ತಾಯವಾಗಿದೆ. ಇನ್ನೆರಡು ದಿನದ ಶೂಟಿಂಗ್ ಮುಗಿದರೆ, ಸಿನಿಮಾ ಕಂಪ್ಲೀಟ್ ಆಗಲಿದೆ ಎಂದು ಮಾಹಿತಿ ನೀಡುತ್ತಾರೆ ನಿರ್ದೇಶಕರು. ಕಂಠೀರವ ಸ್ಟುಡಿಯೋದಲ್ಲಿ ಅದ್ದೂರಿ ಸೆಟ್ ನಿರ್ವಿುಸಲಾಗಿದ್ದು, ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಹಾಡಿಗೆ ಕೋರಿಯೋಗ್ರಾಫ್ ಮಾಡುತ್ತಿದ್ದಾರೆ. ಈ ಹಿಂದೆಂದೂ ಕಾಣಿಸದ ರೀತಿಯಲ್ಲಿ ಶಿವಣ್ಣ ಎದುರಾಗಲಿದ್ದು, ವಿಶೇಷವಾಗಿ ಅವರ ಕಾಸ್ಟೂಮ್ ವಿನ್ಯಾಸ ಮಾಡಲಾಗಿದೆಯಂತೆ.

ಅನೂಪ್ ಸೀಳಿನ್ ಸಂಗೀತ, ಮಹೇಂದ್ರ ಸಿಂಹ ಛಾಯಾಗ್ರಹಣ ಮಾಡಿದ್ದಾರೆ.ಇತ್ತೀಚಿನ ದಿನಗಳಲ್ಲಿ ಕನ್ನಡ ಸಿನಿಮಾಗಳು ಬಹುಭಾಷೆಯಲ್ಲಿ ತೆರೆಕಾಣುತ್ತಿವೆ. ಹಾಗಾದರೆ ಆ ಸಾಲಿಗೆ ರುಸ್ತುಂ ಕೂಡ ಸೇರುತ್ತಾ ನಿರ್ಮಾಪಕರಿಗೂ ಬಹುಭಾಷೆಯಲ್ಲಿ ಸಿನಿಮಾ ಬಿಡುಗಡೆ ಮಾಡಬೇಕೆಂಬ ಒಲವಿದೆ. ಆದರೆ, ಸದ್ಯಕ್ಕೆ ಯಾವುದೂ ಅಂತಿಮವಾಗಿಲ್ಲ. ಕನ್ನಡದಲ್ಲಿ ಅಷ್ಟೇ ಅಂದುಕೊಂಡಿದ್ದೇವೆ. ಚಿತ್ರದ ಮೊದಲ ಪ್ರತಿ ಸಿದ್ಧವಾಗುತ್ತಿದ್ದಂತೆ ವಿಚಾರಿಸುತ್ತೇವೆ’ ಎನ್ನುತ್ತಾರೆ ರವಿವರ್ಮ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಕೂಡ ಬಿರುಸಿನಿಂದ ನಡೆಯುತ್ತಿದ್ದು, ಶೀಘ್ರದಲ್ಲೇ ಟ್ರೇಲರ್ ಮೂಲಕ ರುಸ್ತುಂ ನ ಝುಲಕ್ ತೋರಿಸಲಾಗುತ್ತದೆ. ವಿಶೇಷ ಎಂಬಂತೆ ಹಾಡಿನ ಚಿತ್ರೀಕರಣದ ಸ್ಥಳಕ್ಕೆ ನಟ ಪುನೀತ್ ರಾಜ್​ಕುಮಾರ್ ಸಹ ಆಗಮಿಸಿ ಒಂದಷ್ಟು ಸಮಯ ಕಳೆದಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here