ಕನ್ನಡ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾ ರುಸ್ತುಂ. ಡಾ.ಶಿವರಾಜಕುಮಾರ್ ಅವರು ಖಡಕ್ ಪೋಲಿಸ್ ಅವತಾರದಲ್ಲಿ ಕಾಣಿಸಿಕೊಂಡಿರುವ ರುಸ್ತುಂ ಚಿತ್ರದ ಮೊದಲ ಟ್ರೈಲರ್ ಇಂದು ರಿಲೀಸ್ ಆಗಿದ್ದು ಯೂಟ್ಯೂಬ್‌ನಲ್ಲಿ ರುಸ್ತುಂ ಟ್ರೈಲರ್ ಸಂಚಲನ ಹುಟ್ಟಿಸುತ್ತಿದೆ‌. ಇದೇ ಮೊದಲ ಬಾರಿ ಬಾಲಿವುಡ್ ನ ಖ್ಯಾತ ನಟ ವಿವೇಕ್ ಓಬೆರಾಯ್ ಕನ್ನಡದಲ್ಲಿ ನಟಿಸಿರುವ ರುಸ್ತುಂ ಚಿತ್ರಕ್ಕೆ ಭಾರತದ ಖ್ಯಾತ ಸಾಹಸ ನಿರ್ದೇಶಕ ರವಿವರ್ಮ ಮೊದಲ ಬಾರಿ ನಿರ್ದೇಶನದ ಜವಬ್ದಾರಿ ಹೊತ್ತಿದ್ದಾರೆ. ರುಸ್ತುಂ ಚಿತ್ರದ ಟ್ರೈಲರ್ ನೋಡುತ್ತಿದ್ದರೇ ಇದೊಂದು ಬ್ಲಾಕ್‌ಬಸ್ಟರ್ ಸಿನಿಮಾ ಆಗುವ ಸೂಚನೆ ಸಿಗುತ್ತಿದೆ.

ಶಿವರಾಜಕುಮಾರ್ ಅವರು ಈ ಹಿಂದೆ ಪೋಲೀಸ್ ಅವತಾರದಲ್ಲಿ ಮಿಂಚಿದ್ದ ಟಗರು ಇಂಡಸ್ಟ್ರಿ ಹಿಟ್ ಆಗಿತ್ತು. ಇದೀಗ ರುಸ್ತುಂ ಮತ್ತೆ ಅದೇ ಸಾಲಿಗೆ ಸೇರುತ್ತದೆ ಎನ್ನುತ್ತಿದ್ದಾರೆ ರುಸ್ತುಂ ಟ್ರೈಲರ್ ವೀಕ್ಷಕರ ಸಿರುವ ಅಭಿಮಾನಿಗಳು. ರುಸ್ತುಂ ಚಿತ್ರದ ಟ್ರೈಲರ್ ನಲ್ಲಿ ಬರುವ ಶಿವಣ್ಣ ನ ಸಂಭಾಷಣೆ ಗಳು ಕೆಲವೇ ನಿಮಿಷದಲ್ಲಿ ಟ್ರೆಂಡ್ ಹುಟ್ಟು ಹಾಕಿವೆ‌. ಟ್ರೈಲರ್ ನಲ್ಲಿ ಶಿವಣ್ಣ ರುಸ್ತುಂ ಚಿತ್ರಕ್ಕಾಗಿ ಹಾಕಿರುವ ಎಫೆಕ್ಟ್ ಎದ್ದು ಕಾಣುತ್ತದೆ.

ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಶಿವಣ್ಣ ಜೊತೆ ಕಾಣಿಸಿಕೊಂಡಿರುವ ವಿವೇಕ್ ಓಬೆರಾಯ್ ಅವರ ಪಾತ್ರ ಸಹ ನೋಡುಗರಿಗೆ ಕಿಕ್ ಕೊಡುವಂತಿದ್ದು ರುಸ್ತುಂ ಚಿತ್ರ ತೆರೆಗೆ ಬಂದ ನಂತರ ಒಂದು ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡುವ ಎಲ್ಲಾ ಸೂಚನೆಗಳು ಟ್ರೈಲರ್ ನಲ್ಲಿ ಕಾಣುತ್ತಿವೆ. ರುಸ್ತುಂ ಚಿತ್ರದಲ್ಲಿ ಶಿವಣ್ಣ ಅವರಿಗೆ ನಾಯಕಿಯಾಗಿ ಶ್ರದ್ಧಾ ಶ್ರೀನಾಥ್ ಅಭಿನಯಿಸಿದ್ದಾರೆ. ವಿಶೇಷ ಪಾತ್ರದಲ್ಲಿ ರಚಿತಾ ರಾಮ್ ಸಹ ಅಭಿನಯಿಸಿದ್ದು ಬಹುಶಃ ಮೇ ತಿಂಗಳ ಅಂತ್ಯದಲ್ಲಿ ರುಸ್ತುಂ ತೆರೆಗೆ ಬರುವ ಸಾಧ್ಯತೆ ಇದೆ. ರುಸ್ತುಂ ಚಿತ್ರದ ಸಖತ್ ಟ್ರೈಲರ್ ಇಲ್ಲಿದೆ ನೋಡಿ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here