ಟಗರು ಚಿತ್ರದ ಭರ್ಜರಿ ಯಶಸ್ಸು ಇನ್ನೂ ಸಾಗುತ್ತಿರುವಾಗಲೇ ಹ್ಯಾಟ್ರಿಕ್ ಹೀರೋ ಸೆಂಚುರಿ ಸ್ಟಾರ್ ಡಾ. ಶಿವರಾಜ್​ಕುಮಾರ್ ಅಭಿನಯದ ರುಸ್ತುಂ ಚಿತ್ರಕ್ಕೆ ಇದೇ ಡಾ.ರಾಜ್‍ಕುಮಾರ್ ಜನ್ಮದಿನಕ್ಕೆ ಉಡುಗೊರೆಯಾಗಿ ಏಪ್ರಿಲ್ 24ರಂದು ಭರ್ಜರಿಯಾಗಿ ಚಾಲನೆ ಸಿಗಲಿದೆ.

ಕನ್ನಡ ಮಾತ್ರವಲ್ಲದೇ ಹಿಂದಿ ಮತ್ತು ತೆಲುಗು ಇಂಡಸ್ಟ್ರಿಯಲ್ಲಿ ಸಾಕಷ್ಟು ಹೆಸರು ಮಾಡಿರುವ ಫೈಟ್ ಮಾಸ್ಟರ್ ರವಿವರ್ಮ ಇದೇ ಮೊದಲ ಬಾರಿಗೆ ಈ ಚಿತ್ರದ ಮೂಲಕ ನಿರ್ದೇಶನಕ್ಕೆ ಇಳಿದಿರುವುದರಿಂದ ಈಗಾಗಲೇ ನಿರೀಕ್ಷೆಗಳು ಗರಿಗೆದರಿವೆ. ಶಿವಣ್ಣಗೆ ನಾಯಕಿಯಾಗಿ ಶ್ರದ್ಧಾ ಶ್ರೀನಾಥ್ ನಟಿಸಲಿರುವುದು ಕೂಡ ಕನ್ಪಮ್ರ್.

ಆದರೆ, ಈ ಚಿತ್ರದಲ್ಲಿ ಖಳ ಪಾತ್ರಗಳಿಗೂ ಸಹ ಸಾಕಷ್ಟು ಪ್ರಾಮುಖ್ಯತೆ ಇದ್ದು, ಅದಕ್ಕಾಗಿ ಬಾಲಿವುಡ್ ಕಲಾವಿದರನ್ನೂ ಅಪ್ರೋಚ್ ಮಾಡಿತ್ತು ಚಿತ್ರತಂಡ. ಆದರೆ, ಇದೀಗ ವಿಲನ್ ಪಾತ್ರಗಳಿಗೆ ದಕ್ಷಿಣ ಭಾರತದ ಖ್ಯಾತ ಕಲಾವಿದರು ಆಯ್ಕೆಯಾಗಿದ್ದಾರೆ ಎನ್ನಲಾಗುತ್ತಿದೆ.

ತಮಿಳು, ತೆಲುಗು, ಮಲಯಾಳಂನಲ್ಲಿ ನಟಿಸಿರುವ ಹರೀಶ್ ಉತ್ತಮನ್,ಥೇರಿ ಸೇರಿ ಸಾಕಷ್ಟು ಸಿನಿಮಾಗಳಲ್ಲಿ ಬಣ್ಣ ಹಚ್ಚಿರುವ ಹಾಗೂ ಅನೇಕ ತಮಿಳು ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿರುವ ಹಿರಿಯ ನಿರ್ದೇಶಕ ಜೆ. ಮಹೇಂದ್ರನ್ ಹಾಗೂ ಕನ್ನಡದ ಹೊಸ ಪ್ರತಿಭೆ ಅರ್ಜುನ್ ಗೌಡ ರುಸ್ತುಂನಲ್ಲಿ ಖಳರಾಗಿ ಅಬ್ಬರಿಸಲು ಸಜ್ಜಾಗಿದ್ದಾರೆ.

ಮಫ್ತಿ ಮತ್ತು ಟಗರು ಚಿತ್ರಗಳ ಬ್ಯಾಕ್ ಟು ಬ್ಯಾಕ್ ಯಶಸ್ಸಿನ ಸಂಭ್ರಮದಲ್ಲಿರುವ ಶಿವರಾಜ್​ಕುಮಾರ್ ರುಸ್ತುಂನಲ್ಲಿ ಮತ್ತೊಮ್ಮೆ ಖಾಕಿ ಧರಿಸಲಿದ್ದಾರೆ. ಜಯಣ್ಣ-ಭೋಗೆಂದ್ರ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ ಈ ಸಿನಿಮಾಕ್ಕೆ ಅನೂಪ್ ಸೀಳಿನ್ ಸಂಗೀತದ ಹೊಣೆ ಹೊತ್ತಿದ್ದಾರೆ.

ಇತ್ತೀಚಿನ ಬ್ಲಾಕ್‌ಬಸ್ಟರ್ ಸಿನಿಮಾ ಟಗರು ನಂತರ ಮತ್ತೊಮ್ಮೆ ಶಿವಣ್ಣನ ಸಿನಿಮಾಕ್ಕೆ ಕ್ಯಾಮರಾ ಹಿಡಿಯಲಿದ್ದಾರೆ ಮಹೇನ್ ಸಿಂಹ ಅವರು ಕ್ಯಾಮರಾ ವರ್ಕ್ ಮಾಡಲಿದ್ದಾರೆ.ಇದೇ 24 ರ ಅಣ್ಣಾವ್ರ ಜನ್ಮದಿನಕ್ಕೆ ಮುಹೂರ್ತ ಆಗುತ್ತಿರುವ ರುಸ್ತುಂ ಗೆ ಮೇ ಎರಡನೇ ವಾರದಿಂದ ಚಿತ್ರೀಕರಣ ಆರಂಭವಾಗಲಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here