ಶಬರಿಮಲೆಯ ಅಯ್ಯಪ್ಪ ದೇವಾಲಯ ಪ್ರವೇಶಿಸಲು ೪೦ರ ಹರೆಯದ ಕನಕದುರ್ಗಾ ಹಾಗೂ ಸಿಂಧು ಅವರಿಗೆ ಅವಕಾಶ ನೀಡಿದ್ದರಿಂದಲೇ ಲೋಕಸಭಾ ಚುನಾವಣೆಯಲ್ಲಿ ಕೇರಳದ ಆಡಳಿತಾರೂಢ ಎಲ್‌ಡಿಎಫ್‌ಗೆ ಸೋಲಾಯಿತು ಎಂದು ಸಿಪಿಎಂ ಇದೇ ಮೊದಲ ಬಾರಿಗೆ ಒಪ್ಪಿಕೊಂಡಿದೆ. ಸಿಪಿಎಂನ ಕೇಂದ್ರೀಯ ಸಮಿತಿ ಚುನಾವಣೆಯಲ್ಲಿ ತನಗಾಗಿರುವ ಸೋಲಿನ ಕುರಿತು ಮೌಲ್ಯಮಾಪನ ಮಾಡಿ ವರದಿ ತಯಾರಿಸಿದ ನಂತರ ನಡೆದ ಸಮಿತಿ ಸಭೆಯಲ್ಲಿ ಆ ಬಗ್ಗೆ ಚರ್ಚಿಸಲಾಗಿತ್ತು. ಈ ವರದಿಯ ಕೆಲವಂಶಗಳು ಕೇರಳದ ಮಲೆಯಾಳಂ ಪತ್ರಿಕೆಯೊಂದರಲ್ಲಿ ಪ್ರಕಟವಾಗಿದೆ.

ಕಳೆದ ಜನವರಿ ಒಂದರಂದು ಆಡಳಿತಾರೂಢ ಎಲ್‌ಡಿಎಫ್ ಸದಸ್ಯರು ಮಹಿಳೆಯರ ಮಾನವ ಸರಪಳಿ ನಿರ್ಮಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಅದರ ಮರುದಿನವೇ ಇಬ್ಬರು ಮಹಿಳೆಯರು ಶಬರಿಮಲೆ ಗುಡ್ಡ ಹತ್ತಿ ದೇವರ ದರ್ಶನ ಮಾಡಿದ್ದರು. ಈ ಪ್ರಕರಣವನ್ನು ವಿರೋಧಪಕ್ಷವಾದ ಯುಡಿಎಫ್ ಹಾಗೂ ಬಿಜೆಪಿ ಚುನಾವಣಾ ಪ್ರಚಾರಗಳಲ್ಲಿ ಪ್ರಮಖವಾಗಿ ಬಳಸಿಕೊಂಡಿದ್ದರಿಂದ ಪಕ್ಷದ ಮೇಲೆ ಸಹಾನುಭೂತಿ ತೋರಿಸಿದ್ದವರ ಮೇಲೆ ಅದು ಅತೀವ ಪರಿಣಾಮ ಬೀರಿತು ಎಂದು ವರದಿಯಲ್ಲಿ ಹೇಳಲಾಗಿದೆ.

ಸುಪ್ರೀಂಕೋರ್ಟ್ ಕಳೆದ ಸೆಪ್ಟಂಬರ್ ೨೮ರಂದು ಎಲ್ಲಾ ವರ್ಗದ ಮಹಿಳೆಯರಿಗೂ ಶಬರಿಮಲೆ ದೇವಾಲಯ ಪ್ರವೇಶಿಸಲು ಅವಕಾಶ ನೀಡುವ ಆದೇಶ ಹೊರಡಿಸಿತ್ತು. ಇದಾದ ಬಳಿಕ ಎಲ್‌ಡಿಎಫ್ ಸರ್ಕಾರ ಸುಪ್ರೀಂ ಆದೇಶ ಜಾರಿಗೆ ತರುವುದಾಗಿ ಘೋಷಿಸಿದ ನಂತರ ರಾಜ್ಯಾದ್ಯಂತ ಭಾರೀ ಪ್ರತಿಭಟನೆ ಕಂಡುಬಂದಿತ್ತು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here