ಚೀನಾದಲ್ಲಿ ಕೊರೊನಾ ವೈರಸ್ ಪತ್ತೆ ಆಗೋದಕ್ಕೂ ಮೊದಲು ಅದರ ಬಗ್ಗೆ ಕರ್ನಾಟಕದ ಖ್ಯಾತ ಜ್ಯೋತಿಷಿಗಳು ಒಬ್ಬರು ಹೇಳಿದ್ದರು ಎನ್ನುವ ವಿಡಿಯೋ ಒಂದು ಈಗ ಎಲ್ಲರ ಗಮನವನ್ನು ಸೆಳೆದಿದೆ. ಈ ಖ್ಯಾತ ಜ್ಯೋತಿಷಿಗಳ ಹೆಸರು ಸಚ್ಚಿದಾನಂದ ಬಾಬಾ ಗುರೂಜಿಗಳು. ಇವರು ತಮ್ಮ ಯೂ ಟ್ಯೂಬ್ ವಿಡಿಯೋದಲ್ಲಿ ಡಿಸೆಂಬರ್ ಮೂರನೇ ವಾರದಲ್ಲಿ ವೈರಸ್ ಒಂದರ ಬಗ್ಗೆ ಮಾತನಾಡಿರುವುದು ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಅವರು ಡಿಸೆಂಬರ್ 25 ರ ಸೂರ್ಯಗ್ರಹಣ ದ ನಂತರ ಹೊಸ ವೈರಸ್ ಒಂದು ಹುಟ್ಟಿಕೊಳ್ಳಲಿದೆ ಎಂದು ಹೇಳಿರುವ ಮಾತು ಈಗ ಹಲವರ ಗಮನವನ್ನು ಸೆಳೆದಿದೆ.

ಸಚ್ಚಿದಾನಂದ ಬಾಬಾ ಗುರೂಜಿ ಅವರು ತಮ್ಮ ವಿಡಿಯೋದಲ್ಲಿ ಹಲವು ವಿಷಯಗಳನ್ನು ಮಾತನಾಡಿದ್ದರೆ. ಇನ್ನು ಈ ವಿಡಿಯೋ ನೋಡಿದ ಹಲವರು ವೈರಸ್ ಬಗ್ಗೆ ಹೇಳಿದ್ದೀರಿ ಅದು ಕೊನೆ ಯಾವಾಗ ಆಗುತ್ತದೆ, ಅದರ ಬಗ್ಗೆ ಕೂಡಾ ತಿಳಿಸಿ ಎಂದಿದ್ದಾರೆ. ಅದಕ್ಕೆ ಉತ್ತರವಾಗಿ ಅವರು ಈಗ ಮತ್ತೊಂದು ವಿಡಿಯೋ ಮೂಲಕ ಅನೇಕ ವಿಚಾರಗಳನ್ನು ಜನರ ಮುಂದೆ ಇಟ್ಟಿದ್ದಾರೆ. ಅವರ ಈ ವಿಡಿಯೋ ನೋಡಿದವರು ಕೂಡಾ ಯೂ ಟ್ಯೂಬ್ ನ ವಿಡಿಯೋ ನಂತರ ಕಾಮೆಂಟ್ ಸೆಕ್ಷನ್ ನಲ್ಲಿ ಅವರಿಗೆ ಧನ್ಯವಾದಗಳನ್ನು ಕೂಡಾ ಹೇಳುತ್ತಿರುವುದನ್ನು ನಾವು ನೋಡಬಹುದಾಗಿದೆ.

ಅವರ ವಿಡಿಯೋದಲ್ಲಿ ಅವರು ಈ ವೈರಸ್ ಕುರಿತಾಗಿ ಕೆಲವು ಹೊಸ ವಿಚಾರಗಳನ್ನು ಕೂಡಾ ತಿಳಿಸಿದ್ದಾರೆ. ಅವರು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಹಲವು ಮಾಹಿತಿಗಳನ್ನು ತಮ್ಮ ವಿಡಿಯೋ ಮೂಲಕ ರವಾನೆ ಮಾಡಿದ್ದು, ಈ ವೈರಸ್ ಬಗ್ಗೆ ಅವರ ಮಾತು ಸತ್ಯವೋ ಮಿಥ್ಯ ವೋ ಆದರೆ ಸದ್ಯಕ್ಕೆ ಜ್ಯೋತಿಷ್ಯ ನಂಬುವವರಿಗೆ ಈ ವೀಡಿಯೋ ಸಾಕಷ್ಟು ಕುತೂಹಲ ಹಾಗೂ ಆಸಕ್ತಿಯನ್ನು ಕೆರಳಿಸಿರುವುದು ಕೂಡಾ ನಿಜವಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here