ಇಡೀ ದೇಶದಲ್ಲಿ ಕೊರೊನಾ ವೈರಸ್ ಸೋಂಕು ಹರಡಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಇಡೀ ದೇಶವನ್ನು 21 ದಿನಗಳ ಕಾಲ ಲಾಕ್ ಡೌನ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸೆಲೆಬ್ರಿಟಿಗಳು ತಮ್ಮ ಅಭಿಮಾನಿಗಳಿಗೆ ಮನೆಯಲ್ಲೇ ಇರಿ ಎಂದು ಟ್ವಿಟರ್ ಹಾಗೂ ಇನ್ನಿತರೆ ಸಾಮಾಜಿಕ ಜಾಲತಾಣಗಳ ಮೂಲಕ ಮನವಿಯನ್ನು ಮಾಡುತ್ತಿದ್ದಾರೆ. ಬಾಲಿವುಡ್ ನ ಹಿರಿಯ ನಟ ಅಮಿತಾಬ್ ಬಚ್ಚನ್ ಅವರು “ಪ್ರಧಾನಿ ಅವರು ತಮ್ಮ ಕೈಗಳನ್ನು ನಮ್ರತೆಯಿಂದ ಮಡಚಿ, ಆದೇಶವನ್ನು ನೀಡಿದ್ದಾರೆ. ಯಾವಾಗಲೂ ನೀವು ಮತ್ತು ನಾವು ಇದನ್ನು ಪಾಲಿಸೋಣ.‌21 ದಿನಗಳ ಈ ರೆಸಲ್ಯೂಶನ್ ಪಾಲಿಸೋಣ, ಕರೋನಾವನ್ನು ಸಮಾಧಿ ಮಾಡೋಣ ಎಂದಿದ್ದಾರೆ.

ಸಚಿನ್ ತೆಂಡೂಲ್ಕರ್ ಅವರು, “ಸರಳವಾದ ಕೆಲಸಗಳನ್ನು ಮಾಡಲು ಸಾಮಾನ್ಯವಾಗಿ ಕಷ್ಟ, ಏಕೆಂದರೆ ಅದಕ್ಕೆ ಸ್ಥಿರವಾದ ಶಿಸ್ತು ಮತ್ತು ನಿರ್ಣಯದ ಅಗತ್ಯವಿರುತ್ತದೆ. ಮಾನ್ಯ ಪಿ.ಎಂ.ನರೇಂದ್ರ ಮೋದಿಯವರು ನಮ್ಮನ್ನು 21 ದಿನಗಳವರೆಗೆ ಮನೆಗಲ್ಲಿ ಇರುವಂತೆ ಹೇಳಿದ್ದಾರೆ. ಈ ಸರಳ ಕಾರ್ಯವು ಲಕ್ಷಾಂತರ ಜೀವಗಳನ್ನು ಉಳಿಸುತ್ತದೆ. COVID19 ವಿರುದ್ಧದ ಈ ಯುದ್ಧದಲ್ಲಿ ಎಲ್ಲರೂ ಒಂದಾಗೋಣ ಎಂದಿದ್ದಾರೆ.

ವೀರೇಂದ್ರ ಸೆಹ್ವಾಗ್ ಅವರು ತಮ್ಮ ಟ್ವೀಟ್ ನಲ್ಲಿ “ಈ 21 ದಿನಗಳು ನಮ್ಮ ರಾಷ್ಟ್ರದ ಇತಿಹಾಸದಲ್ಲಿ ಬಹಳ ಮುಖ್ಯವಾದವು ಮತ್ತು ನಮ್ಮಲ್ಲಿ ಪ್ರತಿಯೊಬ್ಬರೂ ನಮ್ಮ ಮನೆಗಳಲ್ಲಿ ಉಳಿಯುವ ಮೂಲಕ ಮತ್ತು ಜನರಿಂದ ದೂರವನ್ನು ಕಾಪಾಡಿಕೊಳ್ಳುವ ಮೂಲಕ ನಮ್ಮ ಪಾತ್ರವನ್ನು ವಹಿಸಬಹುದು. ದಯವಿಟ್ಟು ಅದನ್ನು ಕಟ್ಟುನಿಟ್ಟಾಗಿ ಪಾಲಿಸಿ ಮತ್ತು ನಾವು ಈ ಪರಿಸ್ಥಿತಿಯನ್ನು ಶೀಘ್ರದಲ್ಲೇ ನಿವಾರಿಸಬಹುದು” ಎಂದಿದ್ದಾರೆ.

ವಿರಾಟ್ ಕೊಹ್ಲಿಯವರು, “ನಮ್ಮ ಗೌರವಾನ್ವಿತ ಪ್ರಧಾನಿಯಾಗಿ, ಶ್ರೀ ಮೋದಿಜಿ ಅವರು ಘೋಷಿಸಿರುವಂತೆ, ಮುಂದಿನ 21 ದಿನಗಳವರೆಗೆ ಇಡೀ ದೇಶವು ಲಾಕ್ ಡೌನ್ ಆಗಿದೆ. ನನ್ನ ವಿನಂತಿಯು ಒಂದೇ ಆಗಿರುತ್ತದೆ, ದಯವಿಟ್ಟು ಮನೆಯಲ್ಲಿಯೇ ಇರಿ. ಸಾಮಾಜಿಕ ಡಿಸ್ಟಾನ್ಸಿಂಗ್ ಕೋವಿಡ್ 19 ರ ಏಕೈಕ ಪರಿಹಾರವಾಗಿದೆ.”ಎಂದು ಹೇಳಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here