ಲಾಕ್ ಡೌನ್ ಮುಗಿದ ನಂತರ ಜನರು ಏಕಾ ಏಕೀ ರಸ್ತೆಗೆ ಇಳಿಯುವುದನ್ನು ತಡೆಯಬೇಕು ಎಂದು ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲಹೆಯನ್ನು ನೀಡಿದ್ದಾರೆ. ಶುಕ್ರವಾರ ಮೋದಿಯವರು ಭಾರತದ ಪ್ರಮುಖ ಕ್ರೀಡಾಪಟುಗಳ ಜೊತೆಗೆ ವಿಡಿಯೋ ಕಾನ್ಪರೆನ್ಸ್ ನಡೆಸಿದ್ದರು. ಈ ಸಂದರ್ಭದಲ್ಲಿ ನಡೆದ ಸಂವಾದದಲ್ಲಿ ಅನೇಕ ವಿಷಯಗಳ ಕುರಿತಾಗಿ ಮಾತನಾಡಲಾಗಿದೆ‌. ಈ ಸಂವಾದದಲ್ಲಿ ಭಾರತದ ಬಹುತೇಕ ಎಲ್ಲಾ ಅಗ್ರ ಮಾನ್ಯ ಕ್ರೀಡಾಕಾರರು ಭಾಗವಹಿಸಿದ್ದು ವಿಶೇಷ.

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಉಪನಾಯಕ ರೋಹಿತ್ ಶರ್ಮಾ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, ವಿಶ್ವ ಚಾಂಪಿಯನ್ ಶಟ್ಲರ್ ಪಿ.ವಿ.ಸಿಂಧು, ಓಟದ ರಾಣಿ ಎಂದೇ ಖ್ಯಾತರಾದ ಪಿ.ಟಿ.ಉಷಾ, ಚೆಸ್ ದಿಗ್ಗಜ ವಿಶ್ವನಾಥನ್ ಆನಂದ್, ಶೂಟರ್ ಮನು ಬಾಕರ್, ಅಥ್ಲೀಟ್ ಹಿಮಾ ದಾಸ್, ನೀರಜ್ ಚೋಪ್ರಾ ಹೀಗೆ ಒಟ್ಟು 40 ಜನ ಕ್ರೀಡಾಪಟುಗಳು ಈ ವಿಡಿಯೋ ಕಾನ್ಫರೆನ್ಸ್ ನಲ್ಲಿ ಭಾಗವಹಿಸಿದ್ದಾರೆ.

ಅಲ್ಲದೆ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಹು ಅವರು ಕೂಡಾ ಇದರಲ್ಲಿ ಭಾಗವಹಿಸಿದ್ದರು. ಒಂದು ಗಂಟೆಗೂ ಹೆಚ್ಚು ಸಮಯ ನಡೆದ ಸಂವಾದದಲ್ಲಿ ಪ್ರಧಾನಿ ಮೋದಿಯವರು ಕೊರೊನಾ ನಿಯಂತ್ರಣಕ್ಕೆ ಕ್ರೀಡಾಪಟುಗಳ ಸಲಹೆಯನ್ನು ಪಡೆದುಕೊಂಡರು. ಅಲ್ಲದೆ ಮೋದಿಯವರು ಅವರ ಸಲಹೆಗಳನ್ನು ಪರಿಗಣಿಸಲಾಗುವುದು ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಸಚಿನ್ ತೆಂಡೂಲ್ಕರ್ ಅವರು ಕೊರೋನಾ ಸೋಂಕು ನಿಯಂತ್ರಣಕ್ಕೆ ಬಂದ ಬಳಿಕವೂ ನಾನು ನಿಮ್ಮಂತೆಯೇ ಇತತರೊಂದಿಗೆ ಕೈಕುಲುಕುವ ಬದಲಿಗೆ ‘ನಮಸ್ತೆ’ ಎಂದೇ ಪರಸ್ಪರ ಕುಶಲೋಪರಿ ವಿಚಾರಿಸುವುದಾಗಿ ತಿಳಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here