ಶಿವಸೇನಾ ಯುವ ಮುಖಂಡ, ಶಾಸಕ ಆದಿತ್ಯ ಠಾಕ್ರೆಯ ಭದ್ರತೆಯನ್ನು ‘ಝಡ್’ ಶ್ರೇಣಿಗೆ ಏರಿಸಲಾಗಿದೆ. ಇದೇ ವೇಳೆ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಭದ್ರತೆಯನ್ನು ಕಡಿತಗೊಳಿಸಿ ‘ಎಕ್ಸ್’ ಶ್ರೇಣಿಯನ್ನು ತೆಗೆದು ಹಾಕಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯಸಭಾ ಮಾಜಿ ಸದಸ್ಯ ಸಚಿನ್ ತೆಂಡೂಲ್ಕರ್ ಅವರು ನಿವಾಸದಿಂದ ಹೊರ ಹೋಗುವ ಸಂದರ್ಭದಲ್ಲಿ ಪೊಲೀಸ್ ಎಸ್ಕಾರ್ಟ್ ನೀಡಲಾಗುವುದು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ತೆಂಡೂಲ್ಕರ್‌ಗೆ ಈ ಹಿಂದೆ ಎಕ್ಸ್ ಕೆಟಗರಿಯ ಪೊಲೀಸರು ದಿನದ ೨೪ ಗಂಟೆಯೂ ಭದ್ರತೆ ಒದಗಿಸುತ್ತಿದ್ದರು. ಇದೀಗ ಮಹಾರಾಷ್ಟ್ರ ಸರ್ಕಾರದ ಸಮಿತಿ ಬೆದರಿಕೆಯ ಪುನರ್ ಪರಿಶೀಲನೆಯ ಬಳಿಕ ಭದ್ರತೆಯಲ್ಲಿ ಬದಲಾವಣೆ ಮಾಡುವ ಬಗ್ಗೆ ಶಿಫಾರಸು ಮಾಡಿದೆ. ಇತ್ತೀಚೆಗೆ ನಡೆದ ಸಭೆಯಲ್ಲಿ ತೆಂಡೂಲ್ಕರ್, ಠಾಕ್ರೆ ಸೇರಿದಂತೆ ಸುಮಾರು ೯೦ ಮಂದಿ ಭದ್ರತೆ ಬಗ್ಗೆ ವಿಮರ್ಶೆ ನಡೆಸಲಾಗಿತ್ತು.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪುತ್ರ, ಶಾಸಕ ಆದಿತ್ಯ ಠಾಕ್ರೆಗೆ ಝಡ್ ಭದ್ರತೆ ನೀಡಲಾಗಿದೆ. ಈ ಮೊದಲು ೨೯ ವರ್ಷದ ಠಾಕ್ರೆಗೆ ವೈ ಪ್ಲಸ್ ಭದ್ರತೆ ನೀಡಲಾಗಿತ್ತು. ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅವರಿಗೆ ಝಡ್ ಪ್ಲಸ್ ಭದ್ರತೆ ಮುಂದುವರಿಸಲಾಗಿದೆ. ಸಂಬಂಧಿ ಅಜಿತ್ ಪವಾರ್‌ಗೆ ಝಡ್ ಕೆಟಗರಿ ಭದ್ರತೆ ನೀಡಲಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here