ಸಂಸದೆ ಸುಮಲತ ಅವರ ಬಗ್ಗೆ ಕೇಂದ್ರ ಸಚಿವರಾದ ಸದಾನಂದ ಗೌಡ ಅವರು ಹೊಗಳುತ್ತಾ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ರಾಜಕೀಯದಲ್ಲಿ ಇಲ್ಲದಿದ್ದರೂ ಸುಮಲತಾ ಅಂಬರೀಶ್ ಅವರ ಪ್ರಬುದ್ಧತೆಯನ್ನು ನೋಡಿ ಜೆಡಿಎಸ್‍ನವರು ಕಲಿಯಬೇಕಾಗಿದೆ ಎಂದು ಅವರು ಹೇಳಿದ್ದಾರೆ. ಮಾದ್ಯಮಗಳ ಜೊತೆ ಮಾತುಗಳನ್ನು ಹಂಚಿಕೊಂಡ ಅವರು ಸಂಪುಟ ವಿಸ್ತರಣೆಯನ್ನು ಸರ್ಕಾರ ಬೀಳಲು ಹಾಕುತ್ತಿರುವ ಅಡಿಗಲ್ಲು ಎಂದು ಕರೆದಿದ್ದಾರೆ. ಸರ್ಕಾರದಲ್ಲಿ ಅವರವರೇ ಜಗಳಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರವನ್ನು ಉಳಿಸಿಕೊಳ್ಳುವ ಅವರ ಪ್ರಯತ್ನ ಅವರನ್ನು ಮುಳುಗಿಸುತ್ತದೆಂದು ಅವರು ತಿಳಿಸಿದ್ದಾರೆ.

ರಾಜ್ಯದಲ್ಲಿ ಒಂದೆಡೆ ಬರಗಾಲವಿದ್ದರೆ, ಮತ್ತೊಂದೆಡೆ ‌ನೀರಿಗೆ ಕೊರತೆಯಾಗಿದೆ. ಆದರೆ ರಾಜ್ಯ ಸರ್ಕಾರ ಈ ಸಮಸ್ಯೆಗಳ ಕುರಿತಾಗಿ ಯಾವುದೇ ರೀತಿಯಲ್ಲೂ ಸರಿಯಾಗಿ ಗಮನವಹಿಸುತ್ತಿಲ್ಲ. ಬಡವರ ಜೀವನ ದಿನೇ ದಿನೇ ದುಸ್ತರವಾಗುತ್ತಿದೆ. ಕ್ಷೇತ್ರದ ಬಗ್ಗೆ ಗಮನವಹಿಸಬೇಕಾದವರು ಅದಾರ ಮನೆಯಲ್ಲಿ ಕುಳಿತಿದ್ದಾರೆ ಎಂಬುದು ಗೊತ್ತಿಲ್ಲ ಎಂದು, ಕ್ಷೇತ್ರಗಳ ಕಡೆ ಗಮನವಹಿಸಿದ ಸಚಿವರನ್ನು ಟೀಕಿಸಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜನರು ತಾವು ಅವರನ್ನು ರಿಜೆಕ್ಟ್ ಮಾಡಿದ್ದೇವೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಚುನಾವಣಾ ಫಲಿತಾಂಶದ ಬಗ್ಗೆ ಹೇಳಿದ್ದಾರೆ.

ಇದೆಲ್ಲವನ್ನು ಹೇಳುತ್ತಾ ಸದಾನಂದ ಗೌಡರು ಸುಮಲತ ಅವರು ತಾನು ಯಾವುದೇ ಪಕ್ಷವನ್ನು ಸೇರುವುದಿಲ್ಲ ಹಾಗೂ ಯಾರ ಬಳಿಯೂ ಭಿಕ್ಷೆ ಬೇಡಲ್ಲವೆಂದು ಹೇಳಿದ್ದಾರೆ. ಸುಮಲತ ಅವರ ನಡಿಗೆಯನ್ನು ನೋಡಿಯಾದರೂ ಜೆಡಿಎಸ್ ನವರು ಕಲಿಯಬೇಕಾಗಿದೆ ಎಂದವರು ಸಲಹೆಯನ್ನು ನೀಡಿದ್ದಾರೆ. ಅಲ್ಲದೆ ಅವರು ಜೆಡಿಎಸ್ ಈ ಜನ್ಮ ಪೂರ್ತಿ ಕೂಡಾ ಸುಮಲತಾ ಅವರಿಂದ ಕಲಿಯಲು ಸಾಧ್ಯವಿಲ್ಲವೆಂದು ಟೀಕಿಸಿದ್ದಾರೆ. ಕಡೆಯ ಪಕ್ಷ ಸ್ವಲ್ಪನಾದರೂ ಬುದ್ಧಿ ಕಲಿಯಿರಿ ಎಂದ ಅವರು ಮಂಡ್ಯದ ಜನರು ಚುನಾವಣಾ ಫಲಿತಾಂಶದ ಮೂಲಕ ಈಗಾಗಲೇ ಕಪಾಳಮೋಕ್ಷ ಮಾಡಿದ್ದಾರೆ. ಆದರೂ ಕೂಡಾ ಇನ್ನೂ ಬುದ್ಧಿ ಬಂದಿಲ್ಲ ಎಂದು ಟೀಕಿಸುತ್ತಾ ಮೈತ್ರಿ ನಾಯಕರ ಬಗ್ಗೆ ಮಾತನಾಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here