ಇಂದು ಸದನದಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ವಿಸ್ವಾಸ ಮತ ಸಾಬೀತು ಮಾಡಿದರು. ಈ ವೇಳೆ ಹಲವಾರು ವಿಷಯಗಳು ಸದನದಲ್ಲಿ ಚರ್ಚೆಯಾದವು. ಮುಂದಿನ ಮೂರು ತಿಂಗಳಿಗೆ ಮಾತ್ರ ಲೇಖಾನುದಾನವನ್ನು ಅಂಗೀಕರಿಸುತ್ತೇವೆ. ಉಳಿದ ಆರು ತಿಂಗಳಿಗೆ ಪ್ರತ್ಯೇಕ ಲೇಖಾನುದಾನ ಮಂಡಿಸುತ್ತೇವೆ ಎಂದು ಮುಖ್ಯಮಂತ್ರಿ ಬಿ ಎಸ್  ಯಡಿಯೂರಪ್ಪ ಹೇಳಿದರು. ಮೈತ್ರಿ ಸರ್ಕಾರದ ಈ ವಿಧೇಯಕದಲ್ಲಿ ಯಾವುದೇ ಬದಲಾವಣೆಯೂ ಇಲ್ಲದೇ ಮಂಡಿಸುತ್ತಿರುವುದಾಗಿ ವಿಧಾನಸಭೆಯಲ್ಲಿ ಯಡಿಯೂರಪ್ಪ ಘೋಷಣೆ ಮಾಡಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರು  ಲೇಖಾನುದಾನ ಮೂರು ತಿಂಗಳಿಗೆ ಮಾತ್ರ ಎಂಬ  ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದರು. ಮುಂದಿನ 8 ತಿಂಗಳಿಗೂ ಅನ್ವಯ ಮಾಡಿ ಹಣಕಾಸು ವಿಧೇಯಕದಂತೇ ಪೂರಕ ಬಜೆಟ್‌ಗೂ ಅನುಮೋದನೆ ನೀಡುವಂತೆ ಕೋರಿದ ಸಿಎಂ ನಡೆಗೆ ಸಿದ್ದರಾಮಯ್ಯ ಆಕ್ಷೇಪ ಪಡಿಸಿದರು . ಈ ಬಗ್ಗೆ ಮುಂದಿನ ತಿಂಗಳು ಅಧಿವೇಶನ ಕರೆದು ಚರ್ಚೆ ನಡೆಸುವಂತೆ ಒತ್ತಾಯಪೂರಕ ಬಜೆಟ್‌ ಮೇಲೆ ಚರ್ಚೆ ನಡೆಸಿಯೇ ಅಂಗೀಕರಿಸಬೇಕು ಎಂದು ಸಿದ್ದರಾಮಯ್ಯ ಯಡಿಯೂರಪ್ಪ ವಿರುದ್ಧ ಮಾತನಾಡಿದಾಗ ಮದ್ಯೆ

ಪ್ರವೇಶಿಸಿದ ಜೆಡಿಎಸ್ ಪಕ್ಷದ ಶಾಸಕ ಜಿ. ಟಿ. ದೇವೇಗೌಡ ಅವರು ಯಡಿಯೂರಪ್ಪ ಅವರ ಪರ ಮಾತನಾಡಿ ಸಿದ್ದರಾಮಯ್ಯ ಅವರ ಇರುವ ಅಸಮಾಧಾನ ಮತ್ತೆ ಹೊರಹಾಕಿದ್ದಾರೆ..ಸದನದಲ್ಲಿ ಯಡಿಯೂರಪ್ಪ ಪರ ಮಾತನಾಡಿದ ಜಿ ಟಿ. ದೇವೇಗೌಡ ಅವರು ಸಿದ್ದರಾಮಯ್ಯ ಅವರಿಗೆ “ಅವರೇನು ಹೊಸದಾಗಿ ಮಾಡುತ್ತಿಲ್ಲ ನಮ್ಮ ಸರ್ಕಾರ ಮಾಡುತ್ತಿರುವುದನ್ನೇ ಮುಂದುವರಿಸುತ್ತೇವೆ ಎನ್ನುತ್ತಿದ್ದಾರೆ ” ಎಂದು ಟಾಂಗ್ ಕೊಟ್ಟರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here