ಪಾಕಿಸ್ತಾನ ತಂಡದ ಕ್ರಿಕೆಟಿಗ ಶಾಹಿದ್ ಅಫ್ರಿಧಿ ಮತ್ತೆ ಭಾರತದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನ ಹೇಳಿಕೆ ಮುಂದುವರಿಸಿದ್ದಾರೆ . ಕಾಶ್ಮೀರ ವಿಚಾರವಾಗಿ ಶಾಹಿದ್ ಅಫ್ರಿಧಿ  ವಿವಾದಾತ್ಮಕ ಹೇಳಿಕೆ ನೀಡಿ ಎಲುಬಿಲ್ಲದ ನಾಲಿಗೆಯನ್ನು ಹರಿಬಿಟ್ಟಿದ್ದಾರೆ.ಇತ್ತೀಚೆಗೆ ಕೊರೊನಾ ವೈರಸ್‌ ಕಷ್ಟದ ಸಮಯದಲ್ಲಿ ಬಡಬಗ್ಗರಿಗೆ ದವಸಧಾನ್ಯ ಮತ್ತು ದಿನಬಳಕೆಯ ಸಾಮಗ್ರಿಗಳನ್ನು ವಿತರಿಸಿ ಸಮಾಜಿಕ ಕಳಕಳಿ ಮೆರದಿದ್ದ ಅಫ್ರಿದಿ, ತಮ್ಮ ಫೌಂಡೇಷನ್‌ಗೆ ನೆರವಾಗುವಂತೆ ಭಾರತದ ಸ್ಟಾರ್ ಕ್ರಿಕೆಟರ್ಸ್‌ ಯುವರಾಜ್‌ ಸಿಂಗ್ ಮತ್ತು ಹರ್ಭಜನ್‌ ಸಿಂಗ್‌ ಅವರ ಬಳಿ ಅಂಗಲಾಚಿದ್ದರು. ಇದಕ್ಕೆ ಭಾರತೀಯ ಕ್ರಿಕೆಟರ್ಸ್‌ ಸಹಕರಿಸಿದ್ದು ಭಾರಿ ವಿವಾದ ಎಬ್ಬಿಸಿತ್ತು.ಅಷ್ಟೇ ಅಲ್ಲದೆ ಅಫ್ರಿದೆಗೆ ನೆರವಾದ ಕಾರಣಕ್ಕೆ ಹರ್ಭಜನ್‌ ಮತ್ತು ಯುವರಾಜ್ ಅವರನ್ನು ಸೋಷಿಯಲ್‌ ಮೀಡಿಯಾಗಳಲ್ಲಿ ಅಭಿಮಾನಿಗಳು ಜಾಡಿಸಿದ್ದರು.

ಇದೀಗ ಪಾಕ್‌ ಆಕ್ರಮಿತ ಕಾಶ್ಮೀರ ಭಾಗಕ್ಕೆ (ಕಾನೂನು ಬಾಹೀರವಾಗಿ ಪಾಕಿಸ್ತಾನ ಆಕ್ರಮಿಸಿಕೊಂಡಿರುವ ಕಾಶ್ಮೀರದ ಭಾಗ) ಭೇಟಿ ನೀಡಿರುವ ಅಫ್ರಿದಿ ಭಾರತದ ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ.ಈ ವಿಡಿಯೋಗೆ ಭಾರತೀಯ ಅಭಿಮಾನಿಗಳು ಯುವಿ ಮತ್ತು ಹರ್ಭಜನ್‌ ಸಿಂಗ್‌ ಅವರನ್ನು ಟ್ಯಾಗ್‌ ಮಾಡಿ ಮಾನವೀಯತೆ ಎಂಬ ಮುಖವಾಡ ತೊಟ್ಟು ನಟಿಸುವಂತಹ ಈ ರೀತಿಯ ವ್ಯಕ್ತಿಗಳ ಬೆಂಬಲಕ್ಕೆ ಈಗಲೂ ನಿಲ್ಲುತ್ತೀರಾ? ಎಂದೆಲ್ಲಾ ಪ್ರಶ್ನಿಸಿದ್ದಾರೆ.”ಇದೊಂದು ಸುಂದರ ಗ್ರಾಮ. ಇಲ್ಲಿಗೆ ಭೇಟಿ ನೀಡುವ ಬಯಕೆ ನನಗೆ ಬಹಳ ದಿನಗಳಿಂದ ಇತ್ತು. ಈಗ ಇಲ್ಲಿಗ ಬಂದು ಬಹಳ ಸಂತಸವಾಗಿದೆ. ಆದರೆ ವಿಶ್ವದಲ್ಲಿ ಇಂದು ಕೊರೊನಾ ವೈರಸ್‌ ಎಂಬ ಮಹಾಮಾರಿ ಹಬ್ಬಿರುವ ಕಾರಣ ನನ್ನ ಭೇಟಿ ತಡವಾಯಿತು. ಆದರೆ, ಇದಕ್ಕಿಂತಲೂ ದೊಡ್ಡ ರೋಗ ಮೋದಿ ಅವರ ಆಲೋಚನೆಯಾಗಿದೆ. ಧರ್ಮದ ಹೆಸರಲ್ಲಿ ರಾಜಕೀಯ ಮಾಡುವ ರೋಗ ಅವರಿಗೆ ಅಂಟಿದೆ,” ಎಂದಿದ್ದಾರೆ.ಇಷ್ಟಕ್ಕೆ ಸುಮ್ಮನಾಗದ ಮಾಜಿ ಕ್ರಿಕೆಟಿಗ ತಮ್ಮ ಎಲುಬಿಲ್ಲದ ನಾಲಿಗೆಯನ್ನು ಮತ್ತಷ್ಟು ಹರಿಬಿಟ್ಟು ಭಾರತೀಯ ಸೇನೆಯನ್ನು ಅಣಕಿಸಿದ್ದಾರೆ.

“ಕಾಶ್ಮೀರದಲ್ಲಿರುವ ನಮ್ಮ ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರೊಡನೆ ಮೋದಿ ಅನ್ಯಾಯ ಮಾಡುತ್ತಿದ್ದಾರೆ. ಇವೆಲ್ಲದಕ್ಕೂ ಅವರು ಈ ಜಗತ್ತಿನಲ್ಲಿ ಮಾತ್ರವಲ್ಲ, ಆ ದೇವರ ಎದುರು ಕೂಡ ಉತ್ತರಿಸಬೇಕು. ಮೋದಿ ಬಹಳ ಧೈರ್ಯವಂತ ಎಂದು ಪೋಸ್‌ ಕೊಡುತ್ತಾರೆ, ಆದರೆ ಅಷ್ಟೇ ಹೆದರುಪುಕ್ಕಲ. ಏಕೆಂದರೆ ಇಷ್ಟು ಚಿಕ್ಕ ಕಾಶ್ಮೀರ ಸಲುವಾಗಿ 7 ಲಕ್ಷ ಸೈನಿಕರನ್ನು ಗಡಿಯಲ್ಲಿ ಒಗ್ಗೂಡಿಸಿದ್ದಾರೆ. ಅಂದಹಾಗೆ ಪಾಕಿಸ್ತಾನದ ಸಂಪೂರ್ಣ ಸೇನೆಯ ಸಂಖ್ಯಾ ಬಲ 7 ಲಕ್ಷ ಆಗಿದೆ. ಆದರೆ, ನಮ್ಮ 7 ಲಕ್ಷ ಸೈನಿಕರ ಹಿಂದೆ 22 ಕೋಟಿ ಪಾಕಿಸ್ತಾನಿಗಳ ಬೆಂಬಲವಿದೆ ಎಂಬುದು ಮೋದಿಗೆ ತಿಳಿದಿಲ್ಲ. ನಾವೆಲ್ಲರೂ ನಮ್ಮ ಸೈನಿಕರ ಬೆಂಬಲಕ್ಕಿದ್ದೇವೆ. ನಮ್ಮ ಸೈನಿಕರು ಮತ್ತು ಹುತಾತ್ಮರಿಗೆ ನನ್ನ ಸೆಲ್ಯೂಟ್. ಪಾಕ್‌ ಸೈನಿಕರಿಗೆ ಸಾತ್‌ ನೀಡುತ್ತಿರುವ ಸ್ಥಳೀಯ ಸಮುದಾಯಕ್ಕೂ ನನ್ನ ಸಲಾಮ್,” ಎಂದು ಅರಚಿದ್ದಾರೆ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here