ಇಂಟೆರ್‌ನೆಟ್ ಸೆನ್ಸೇಷನಲ್ ಸಿಂಗರ್,‌ ಪ್ರಸ್ತುತ ಬಾಲಿವುಡ್ ನ ಗಾಯಕಿ ಕೂಡಾ ಆಗಿರುವ ರಾನು ಮಂಡಾಲ್ ಅವರು ಇತ್ತೀಚಿಗೆ‌ ಮತ್ತೆ ಮತ್ತೆ ಸೋಷಿಯಲ್ ಮೀಡಿಯಾಗಳಲ್ಲಿ ತೀವ್ರ ಚರ್ಚೆಗೆ ಗುರಿಯಾಗುತ್ತಿದ್ದಾರೆ. ಆದರೆ ಅವರು ಸುದ್ದಿ ಆಗುತ್ತಿರುವುದು ತಮ್ಮ ಹಾಡುಗಳಿಗಾಗಿ ಅಲ್ಲ. ಬದಲಿಗೆ ಇತ್ತೀಚಿನ ಅವರ ಮಾತು ಹಾಗೂ ವರ್ತನೆಯಿಂದ. ಈಗ ಸದ್ಯಕ್ಕೆ ರಾನು ಮೇಕಪ್ ಹಾಕಿಕೊಂಡು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಕೆಲವರು ಅದಾಗಲೇ ಇದನ್ನು ಸಿಕ್ಕಾಪಟ್ಟೆ ಟ್ರೋಲ್ ಕೂಡಾ ಮಾಡಲು ಆರಂಭಿಸಿದ್ದಾರೆ.

ರಾನು ಕೆಲವು ದಿನಗಳ ಹಿಂದೆ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಲು ಬಂದ ವೇಳೆಯಲ್ಲಿ ಡಿಸೈನರ್ ಡ್ರೆಸ್ ಧರಿಸಿ ಸ್ವಲ್ಪ ಹೆಚ್ಚಾಗಿಯೇ ಮೇಕಪ್ ಮಾಡಿಕೊಂಡು ಎಲ್ಲರ ಗಮನ ತನ್ನತ್ತ ಸೆಳೆದಿದ್ದರು. ರಾನು ಅವರ ಈ ಮೇಕಪ್ ಮಾಡಿಕೊಂಡಿರು ಫೋಟೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಟ್ರೋಲ್ ಮಾಡಲು ಆರಂಭಿಸಿದ್ದಾರೆ. ಕೆಲವರು ಈ ಫೋಟೋವನ್ನು ಎಡಿಟ್ ಕೂಡಾ ಮಾಡಿ ಹಂಚಿಕೊಂಡಿದ್ದಾರೆ. ರಾನು ಅವರ ಫೋಟೋ ನೋಡಿದ ಮಂದಿ ಅದರ ಬಗ್ಗೆ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಸಿಕ್ಕಾಪಟ್ಟೆ ಡಿಫರೆಂಟ್ ಆಗಿ ಕಾಣುತ್ತಿರುವ ರಾನು ಇದೀಗ ಮತ್ತೆ ಸುದ್ದಿಯಾಗಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೇ ರಾನುವನ್ನು ಮಹಿಳಾ ಅಭಿಮಾನಿಯೊಬ್ಬರು ನೋಡಿ ಅವರ ಕೈ ಹಿಡಿದು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾದಾಗ, ರಾನು ಅಭಿಮಾನಿಯ ವರ್ತನೆ ನೋಡಿ ಬೇಸರದಿಂದ ರೇಗಾಡಿದ್ದರು. ಕೈ ಹಿಡಿದಿದ್ದನ್ನು ವಿರೋಧ ಮಾಡಿದ್ದರು. ಆ ವಿಡಿಯೋ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈಗ ರಾನುವಿನ ಈ ಫೋಟೋ ಸದ್ಯಕ್ಕೆ ಜನರ ಗಮನ ಸೆಳೆಯುತ್ತಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here