ದುನಿಯಾ ವಿಜಯ್ ಅವರು ನಾಯಕನಾಗಿ, ಮೊಟ್ಟ ಮೊದಲ ಬಾರಿಗೆ ನಿರ್ದೇಶನ ಜವಾಬ್ದಾರಿಯನ್ನು ಹೊತ್ತು ನಿರ್ದೇಶಿಸುತ್ತಿರುವ ಬಹು ನಿರೀಕ್ಷಿತ ಸಿನಿಮಾ‌ “ಸಲಗ”. ಕೆ.ಪಿ. ಶ್ರೀಕಾಂತ್ ನಿರ್ಮಾಣದ ಸಲಗ ಚಿತ್ರವು ಚಿತ್ರೀಕರಣದ ಹಂತದಲ್ಲೇ ಸಾಕಷ್ಟು ವಿಶೇಷತೆಗಳಿಂದ ಸುದ್ದಿಯಾಗುತ್ತಿದೆ. ಈಗ ಸಲಗ ಚಿತ್ರತಂಡದಿಂದ  ಮತ್ತೊಂದು ವಿಶೇಷ ಮತ್ತು ಆಸಕ್ತಿಕರ ವಿಚಾರವು ಹೊರ ಬಂದಿದೆ. ಅದೇನೆಂದರೆ ಹಲವಾರು ವರ್ಷಗಳ ಬಳಿಕ ಕನ್ನಡದ ಖ್ಯಾತ ಆಡಿಯೋ ಕಂಪನಿ ಅಶ್ವಿನಿ ಆಡಿಯೋ ಕಂಪನಿ ರೀ ಲಾಂಚ್ ಆಗುತ್ತಿದೆ. ಹೌದು ಅಶ್ವಿನಿ ಆಡಿಯೋ ಮೂಲಕ ಕನ್ನಡದ ಅದೆಷ್ಟೋ ಸೂಪರ್ ಹಿಟ್ ಸಿನಿಮಾಗಳ ಆಡಿಯೋ ಲಾಂಚ್ ಆಗಿತ್ತು. ಆದರೆ ಕೆಲವು ವರ್ಷಗಳಿಂದ ಯಾವುದೇ ಆಡಿಯೋ ಬಿಡುಗಡೆ ಮಾಡಿರಲಿಲ್ಲ.

ಆದರೆ ಇದೀಗ ಮತ್ತೊಮ್ಮೆ ರೀ ಲಾಂಚ್ ಆಗಲು ಹೊರಟಿದೆ ಅಶ್ವಿನಿ ಆಡಿಯೋಸ್. ಈ ಆಡಿಯೋ ಕಂಪನಿ ಕನ್ನಡದ ಎವರ್ ಗ್ರೀನ್ ಬ್ಲಾಕ್ ಬಸ್ಟರ್ ಆಗಿದ್ದ ಜೋಗಿ ನಿರ್ಮಾಣ ಮಾಡಿದ್ದ ಅಶ್ವಿನಿ ರಾಮ್ ಪ್ರಸಾದ್ ಅವರದ್ದು . ಪ್ರಸ್ತುತ ದುನಿಯಾ ವಿಜಯ್ ಅವರ ಸಲಗ ಹುಟ್ಟಿಸಿರುವ ಕ್ರೇಜ್ ಗೆ ನೋಡಿ ಮನಸೋತು ತಮ್ಮ ಆಡಿಯೋ ಕಂಪನಿ ಮೂಲಕ ಸಲಗ ಧ್ವನಿಸುರಳಿ ಹೊರತರಲು ಸಜ್ಜಾಗಿದೆ ಅಶ್ವಿನಿ ಕಂಪನಿ  ಸಲಗ ಹುಟ್ಟಿಸಿರುವ ಕ್ರೇಜ್ ಗೆ ಅಶ್ವಿನಿ ಕಂಪನಿ ಹೆಚ್ಚಿನ ದಾಖಲೆಯ ಮೊತ್ತ ನೀಡಿದೆ ಎಂದು ತಿಳಿದು ಬಂದಿದೆ . ಟಗರು ಸಿನಿಮಾಕ್ಕೆ ಸಂಗೀತ ನಿರ್ದೇಶನ ಮಾಡಿ ಸುಪ್ರಸಿದ್ಧರಾದ ಚರಣ್ ರಾಜ್ ಅವರೇ ಸಲಗ ಚಿತ್ರಕ್ಕೂ ಸಂಗೀತ ಸಂಯೋಜನೆ ಮಾಡಿದ್ದಾರೆ.

ಚರಣ್ ರಾಜ್ ಅವರು ಸಂಗೀತ ನಿರ್ದೇಶನ ಮಾಡಿರುವ ಹಿನ್ನೆಲೆಯಲ್ಲಿ ಸಲಗ ಹಾಡುಗಳ ಮೇಲೆ ನಿರೀಕ್ಷೆ ಹೆಚ್ಚಾಗಿದೆ ಎನ್ನಲಾಗಿದೆ. ದುನಿಯಾ ವಿಜಯ್ ಅವರ ಈ ಹೊಸ ಸಿನಿಮಾ ಈಗಾಗಲೇ ಸಾಕಷ್ಟು ಸದ್ದು ಮಾಡುತ್ತಿದ್ದು, ಅಭಿಮಾನಿಗಳಲ್ಲಿ ಈಗಾಗಲೇ ಸಿನಿಮಾದ ಬಗ್ಗೆ  ಕಾತುರ ಹಾಗೂ ಕುತೂಹಲಗಳನ್ನು ಹುಟ್ಟು ಹಾಕಿದ್ದು ಎಲ್ಲರೂ ಚಿತ್ರ ಬೇಗ ಬಿಡುಗಡೆಯಾಗಲಿ ಎಂಬ ನಿರೀಕ್ಷೆಯನ್ನು ಮಾಡುತ್ತಿದ್ದಾರೆ.ಅಭಿಮಾನಿಗಳ ನಿರೀಕ್ಷೆ ತಣಿಸಲು ಸಲಗ ಚಿತ್ರತಂಡ ಸಹ ಸಿದ್ದವಾಗಿದ್ದು ಇದೇ 18 ರಂದು ಸಲಗ ಚಿತ್ರದ ಮೇಕಿಂಗ್ ವೀಡಿಯೊ ಅಶ್ವಿನಿ ಆಡಿಯೋ ಮೂಲಕ ಬಿಡುಗಡೆಯಾಗುತ್ತಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here