ಕನ್ನಡ ಸಿನಿಮಾಗಳಲ್ಲಿ ಬಹಳ ಅಂದವಾಗಿ ಕಾಣುವುದು ಎಂದಾಗ ನೆನಪಾಗುವುದು ಮಳೆ ಹಾಡುಗಳು. ಕನ್ನಡ ಸಿನಿಮಾಗಳಿಗೆ, ಅದನ್ನು ನೋಡುವ ಪ್ರೇಕ್ಷಕರಿಗೆ ಕೂಡಾ ಮಳೆ ಹಾಡುಗಳ ಜೊತೆಗೆ ಒಂದು ಮಧುರವಾದ ನಂಟು ಉಂಟೇನೋ ಎನ್ನುವ ಹಾಗೆ ಮಳೆ ಹಾಡುಗಳೆಲ್ಲಾ ಮನಸೂರೆಗೊಂಡಿರುವುದೇ ಸಾಕ್ಷಿಯಾಗಿದೆ‌. ಈಗ ಸ್ಯಾಂಡಲ್ ವುಡ್ ಕರಿಚಿರತೆ ಖ್ಯಾತಿಯ ನಟ, ನಿರ್ದೇಶಕ ದುನಿಯಾ ವಿಜಯ್ ಅವರ ಸಲಗ ಸಿನಿಮಾ ಕೂಡಾ ಮಳೆಯ ಹಾಡೊಂದನ್ನು ಪ್ರೇಕ್ಷಕರಿಗೆ ಕಾಣಿಕೆ ನೀಡಲು ಹೊರಟಿದೆ‌. ಹೌದು ದುನಿಯಾ ವಿಜಯ್ ಅವರು ನಾಯಕ, ನಿರ್ದೇಶಕ ಆಗಿರುವ ಸಲಗ ಸಿನಿಮಾಕ್ಕಾಗಿ ಒಂದು ಮಧುರವಾದ ಮಳೆ ಹಾಡನ್ನು ಚಿತ್ರೀಕರಣ ಮಾಡಿಕೊಂಡು ಬಂದಿದೆ.‌

ಲಾಕ್ ಡೌನ್ ಸಡಿಲಿಕೆ ನಂತರ ಸಿನಿಮಾ ಚಿತ್ರೀಕರಣಕ್ಕೆ ನಿಯಮಗಳ ಅನುಸಾರ ಅನುಮತಿ ಸಿಕ್ಕ ನಂತರ, ತಮ್ಮ ಸಿನಿಮಾದಲ್ಲಿ ಒಂದು ಮೆಲೋಡಿ ಹಾಡಿನ ಅಗತ್ಯವಿದೆಯೆಂದು ವಿಜಯ್ ಅವರು ಒಂದು ಹಾಡನ್ನು ರೆಡಿ ಮಾಡಿಸಿ, ಸಕಲೇಶಪುರದ ಸುತ್ತ ಮುತ್ತ ಮಳೆಯ ಹಿತವಾದ ವಾತಾವರಣದಲ್ಲೊಂದು ಅದ್ಭುತ ಹಾಡಿನ‌ ಚಿತ್ರೀಕರಣವನ್ನು ಥ್ರಿಲ್ಲಿಂಗ್ ಎನಿಸುವ ವಾತಾವರಣದಲ್ಲಿ ನಡೆಸಿ ಬಂದಿದ್ದಾರೆ. ಅವರಿಗೆ ಇದೊಂದು ಹೊಸ ಅನುಭವ ಕೂಡಾ ನೀಡಿದೆ. ಕಾರಣ ಇದೇ ಮೊದಲ ಬಾರಿಗೆ ಕೆಲವೇ ಜನರ ತಂಡದೊಂದಿಗೆ, ಸಕಲೇಶಪುರದ ಸುತ್ತ ಮುತ್ತಲ ಬೆಟ್ಟಗಳ ಸಾಲಲ್ಲಿ ಮಳೆಯಲ್ಲಿ ಚಿತ್ರೀಕರಣ ಮಾಡುವುದು ಒಂದು‌ ಸವಾಲೇ ಆಗಿತ್ತು ಅವರಿಗೆ.

ಡಾನ್ಸ್ ಮಾಸ್ಟರ್ ಇಲ್ಲದೇ, ಮಳೆ, ಜಿಗಣೆಗಳು, ಕೊರೆಯುವ ಚಳಿ, ರಸ್ತೆಗಳ ಮೇಲೆ ಬಿದ್ದಿದ್ದ ಮರಗಳನ್ನು ಪಕ್ಕಕ್ಕೆ ಜರುಗಿಸಿ, ದಾರಿ ಮಾಡಿಕೊಂಡು ಹೋಗಿ, ನಾಲ್ಕೈದು ದಿನಗಳು ಶೂಟಿಂಗ್ ಮಾಡಿದ್ದು, ಮಳೆ ಜೋರಾದಾಗ ಮರಗಳ ಕೆಳಗೆ ನಿಂತು ಕಾದಿದ್ದು ಎಲ್ಲಾ ಕೂಡಾ ಒಂದು ಅದ್ಭುತ ಅನುಭವ ಎಂದಿದ್ದಾರೆ ದುನಿಯಾ ವಿಜಯ್ ಅವರು. ಚಿತ್ರೀಕರಣಕ್ಕೆ ಹೋಗುವಾಗ ಎಲ್ಲರೂ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಹೋಗಿದ್ದರು ಎನ್ನಲಾಗಿದೆ.‌ ಕೊರೊನಾ ಸೋಂಕು ಕಡಿಮೆ ಖರ್ಚಿನಲ್ಲಿ ಚಿತ್ರೀಕರಣ ಮಾಡುವ ಹೊಸ ಪಾಠವನ್ನು ಸ್ಯಾಂಡಲ್ ವುಡ್ ಗೆ ಕಲಿಸಿದೆ ಎನ್ನುತ್ತಾರೆ ವಿಜಯ್ ಅವರು. ಸಲಗ ಸಿನಿಮಾ ಈಗಾಗಲೇ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿದೆ ಎನ್ನಲಾಗಿದ್ದು, ಇನ್ನು ತೆರೆಯ ಮೇಲೆ ಬರಲು ಸಜ್ಜಾಗಿದೆ‌.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here