ಕನ್ನಡ ಚಿತ್ರರಂಗದಲ್ಲಿ ದುನಿಯಾ ಚಿತ್ರದ ಮೂಲಕ ಮೊದಲ ಬಾರಿಗೆ ನಾಯಕನಟನಾಗಿ ನಟಿಸಿದ್ದ ದುನಿಯಾ ವಿಜಯ್ ಮೊದಲ ಸಿನಿಮಾದಲ್ಲೇ ಕನ್ನಡಿಗರಿಗೆ ಚಿರಪರಿಚಿತ ನಟರಾಗಿ ಜನಪ್ರಿಯತೆ ಪಡೆದರು. ಹಾಗೆ ನೋಡಿದರೆ ದುನಿಯಾ ವಿಜಯ್ ಏಕಾಏಕಿ ನಾಯಕನಟನಾದವರಲ್ಲ..ದುನಿಯಾ ಸಿನಿಮಾಕ್ಕೂ ಮೊದಲೇ ಹಲವಾರು ಸಿನಿಮಾಗಳಲ್ಲಿ ಸಹ ಕಲಾವಿದರಾಗಿ ದುನಿಯಾ ವಿಜಯ್ ಅಭಿನಯಿಸುತ್ತಿದ್ದರು. ಒಂದೊಂದೇ ಮೆಟ್ಟಿಲು ದುನಿಯಾ ಸಿನಿಮಾಗೆ ಅಡಿಗಲ್ಲಾಗಿತ್ತು‌ . ದುನಿಯಾ ಬಂದ ನಂತರ ವಿಜಯ್ ಕನ್ನಡಿಗರ ಪ್ರೀತಿಯ ಕರಿಚಿರತೆ ಆಗಿ ಬಿಟ್ಟರು. ಜನಪ್ರಿಯ ನಟರಾಗಿ ಬೆಳೆದ ದುನಿಯಾ ವಿಜಯ್ ನಂತರ ಸಿನಿಮಾ ನಿರ್ಮಾಪಕರು ಸಹ ಆದರು. ಕಷ್ಟ ಎಂದವರಿಗೆ ಕಾಣದಂತೆ ಸಹಾಯಕ್ಕೆ ದುನಿಯಾ ವಿಜಯ್  ನಿಂತ ಉದಾಹರಣೆಗಳು ಸಾಕಷ್ಟಿವೆ.

ಈಗ ದುನಿಯಾ ವಿಜಯ್ ತಮ್ಮ ವೃತ್ತಿ ಜೀವನದಲ್ಲಿ ಮತ್ತೊಂದು ಮಜಲು ಸೃಷ್ಟಿಸಲು ಹೊರಟಿದ್ದಾರೆ‌.. ಖಾಸಗಿ ಜೀವನದ ಏಳು ಬೀಳು ಗಳ ನಡುವೆ ಅಭಿಮಾನಿಗಳಿಗಾಗಿ ಮತ್ತೆ ಸೆಟೆದು ನಿಲ್ಲಲು ದುನಿಯಾ ವಿಜಯ್ ಸಕಲ ಸಿದ್ಧತೆ ನಡೆಸುತ್ತಿದ್ದಾರೆ. ದುನಿಯಾ ವಿಜಯ್ ಅವರು ಸದ್ಯಕ್ಕೆ ಕೇರಳದಲ್ಲಿ, ಒಂದು ಸಿನಿಮಾದ ಚರ್ಚೆಯಲ್ಲಿ ಇದ್ದಾರೆ.ಈ ಬಾರಿ ಅವರು ಒಬ್ಬ ನಟನಾಗಿ ಮಾತ್ರವಲ್ಲದೆ ಒಬ್ಬ ನಿರ್ದೇಶಕನಾಗಿ , ಮೊದಲ ಬಾರಿಗೆ ಚಿತ್ರವೊಂದನ್ನು ನಿರ್ದೇಶನ ಮಾಡಲು ಹೊರಟಿದ್ದಾರೆ.‌ ವಿಜಯ್ ಅವರು ಈಗ ಕನ್ನಡದ ಸೂಪರ್ ಹಿಟ್ ಚಿತ್ರ ಟಗರು ಸಿನಿಮಾದ ತಾಂತ್ರಿಕ ವರ್ಗದ ಹಾಗೂ ನಿರ್ಮಾಪಕರ ಜೊತೆ ಕೈ ಜೋಡಿಸಿದ್ದಾರೆ. ಟಗರು ಚಿತ್ರ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದ ತಂಡ ಈಗ ವಿಜಯ್ ಅವರಿಗೆ ಸಾಥ್ ನೀಡುತ್ತಿದ್ದು, ವಿಜಯ್ ಅವರ ಹೊಸ ಸಿನಿಮಾ‌ ‘ಸಲಗ’ ಕ್ಕೆ ಭರ್ಜರಿಯಾದ ಶುಭಾರಂಭ ಮಾಡಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುವತ್ತ ವಿಜಯ್ ತಮ್ಮ ಗಮನ ಹರಿಸಿದ್ದಾರೆ.

ನಾನೊಬ್ಬ ನಟನಾಗಬೇಕೆಂದು ಕೊಂಡಿದ್ದೆ , ನಂತರ ನಾಯಕನಾದೆ. ಯಾವುದೊಂದು ಮೊದಲೇ ಪ್ಲಾನ್ ಮಾಡಿದ್ದಲ್ಲ ಎನ್ನುವ ವಿಜಯ್ ಅವರು ತಮ್ಮ ಹೊಸ ಚಿತ್ರಕ್ಕಾಗಿ ಬಹಳಷ್ಟು ರೀಸರ್ಚ್ ನಡೆಸಿದ್ದಾರೆ. ಭೂಗತ ಜಗತ್ತಿನ ಕೆಲವರನ್ನು, ಕೆಲವು IAS ಹಾಗೂ IPS ಅಧಿಕಾರಿಗಳನ್ನು ಕೂಡಾ ಭೇಟಿ ಮಾಡಿದ್ದಾರೆ. ಒಬ್ಬ ಅಮಾಯಕನು ಭೂಗತ ಲೋಕದಲ್ಲಿ ಕಳೆದು ಹೋದರೆ ನಡೆಯುವ ವಾಸ್ತವಗಳನ್ನು ತೆರೆಯ ಮೇಲೆ ಆವಿಷ್ಕರಿಸುವ ಚಿತ್ರವಾಗಲಿದೆ ಸಲಗ. ವಿಜಯ್ ಅವರು ಇದೊಂದು ಸತ್ಯ ಘಟನೆಗಳ ಆಧಾರದಲ್ಲಿ ರೂಪುಗೊಂಡ ಕಾಲ್ಪನಿಕ ಚಿತ್ರ ಎಂದಿದ್ದು, ಇದನ್ನು ಎಲ್ಲಾ ಪ್ರಾಮಾಣಿಕ IAS ಹಾಗೂ IPS ಅಧಿಕಾರಿಗಳಿಗೆ ಸಮರ್ಪಣೆ ಎಂದು ಹೇಳಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here