ದುನಿಯಾ ವಿಜಯ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ, ಅವರೇ ನಾಯಕ ನಟನಾಗಿ ಕೂಡಾ ನಟಿಸಿರುವ ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ ‘ಸಲಗ’ ಸಿನಿಮಾದ ನಾಲ್ಕು ಕ್ವಾಟರ್ ಕುಡಿದ್ರೂ ಸ್ಟಡಿಯಾಗೆ ನಿಲ್ತಿದ್ಯಲ್ಲ ಸೂರಿ ಅಣ್ಣ  ಸಾಂಗ್ ಯೂಟ್ಯೂಬ್ ನಲ್ಲಿ​ ಬಿಡುಗಡೆ ಆಗಿದೆ. ಸಲಗ ಚಿತ್ರದ ಆಲ್ಬಮ್ ಸಾಂಗ್ಸ್ ನಿನ್ನೆ ಬಿಡುಗಡೆ ಮಾಡಲಾಗಿದ್ದು, ಹಾಡುಗಳ ಬಿಡುಗಡೆ ಸಮಾರಂಭದಲ್ಲಿ ಹ್ಯಾಟ್ರಿಕ್​ ಹೀರೋ ಶಿವಣ್ಣ ಅವರು ಪಾಲ್ಗೊಂಡು ಸಲಗ ಸಿನಿಮಾದ ಹಾಡುಗಳನ್ನು  ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ. ಇನ್ನು ಇಂದು ಸಲಗ ಸಿನಿಮಾದ ಮೊದಲ ಹಾಡು ಸೂರಿ ಅಣ್ಣಾ ಈಗಾಗಲೇ ಬಿಡುಗಡೆ ಆಗಿದೆ.  ಸಂಗೀತ ನಿರ್ದೇಶಕ ಚರಣ್​ ರಾಜ್ ​ ಅವರ ಅದ್ಭುತ ಕಂಪೋಸಿಂಗ್ ನಲ್ಲಿ ಈ ಹಾಡು ಮೂಡಿ ಬಂದಿದ್ದರೆ, ಹಾಡನ್ನು ಸೊಗಸಾಗಿ ಹಾಡಿದ್ದಾರೆ ತಮಿಳಿನ‌ ಆ್ಯಂಟನಿ ದಾಸ್.

ಸಲಗ ಧ್ವನಿ ಸುರಳಿ ಬಿಡುಗಡೆ ಮಾಡಿದ ನಂತರ ಶಿವಣ್ಣ ಅವರು ಮಾತನಾಡುತ್ತಾ ಸಲಗ ಸಿನಿಮಾದ ಈ ಮೊದಲ ಹಾಡು, ಸೂರಿ ಅಣ್ಣ ಸಕತ್ ಕಿಕ್ ಕೊಡೋ ಹಾಡಾಗಿದೆ. ಟಗರು ಸಿನಿಮಾದಲ್ಲಿ ಹಾಡನ್ನು ಕೇಳಿದ ನಂತರ ಚರಣ್ ರಾಜ್  ಅವರ ಕಂಪೋಸಿಂಗ್ ಬಹಳ ಇಷ್ಟವಾಗಿತ್ತು. ಅವರು ಮಾಡಿದ ಹಾಡು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆಯಿತು ಎನ್ನುತ್ತಾ, ಈಗ ಅವರ ಕಂಪೋಸಿಂಗ್ ನಲ್ಲಿ ಮೂಡಿ ಬಂದಿರುವ ಸೂರಿ ಅಣ್ಣ ಹಾಡು ಕೂಡಾ ಅಷ್ಟೇ ಅದ್ಭುತವಾಗಿದ್ದು, ಕಿಕ್ ಕೊಡುವ ಈ ಹಾಡು ಖಂಡಿತ ಸೂಪರ್ ಹಿಟ್ ಆಗುತ್ತದೆ ಎಂದು ಶಿವಣ್ಣ ತಮ್ಮ ಮೆಚ್ಚುಗೆಯನ್ನು ಸೂಚಿಸಿದ್ದಾರೆ.

ಸಲಗ ಸಿನಿಮಾದ ಈ ಹಾಡು ಇಂದು ಯೂಟ್ಯೂಬ್ ನಲ್ಲಿ ಕೂಡಾ ಬಿಡುಗಡೆಯಾಗಿದೆ. ಸಲಗ ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಸಾಕಷ್ಟು ಸದ್ದು, ಸುದ್ದಿ ಮಾಡಿದ್ದು, ಈ ಸಿನಿಮಾದಲ್ಲಿ ದುನಿಯಾ ವಿಜಯ್ ಅವರ ಜೊತೆ ಡಾಲಿ ಧನಂಜಯ್, ಸಂಜನಾ ಆನಂದ್, ಕಾಕ್ರೋಚ್ ಖ್ಯಾತಿಯ ಸುದೀ ಅವರು ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ನಮ್ಮ‌ ಮುಂದೆ ಬರುತ್ತಿದ್ದಾರೆ. ಸಿನಿಮಾ ವೀನಸ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಮೂಡಿ ಬಂದಿದ್ದು, ಕೆ.ಪಿ.ಶ್ರೀಕಾಂತ್ ಅವರು ಈ ಚಿತ್ರದ ನಿರ್ಮಾಪಕರಾಗಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here