ದುನಿಯಾ ವಿಜಯ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಸಲಗ ಚಿತ್ರದ ಟೀಸರ್ ದುನಿಯಾ ವಿಜಯ್ ಅವರ ಜನ್ಮದಿನದ ಪ್ರಯುಕ್ತ ಯೂಟ್ಯೂಬ್ ನಲ್ಲಿ ಬಿಡುಗಡೆ ಆಗಿ ಕೆಲವೇ ಕ್ಷಣಗಳಲ್ಲಿ ಟ್ರೆಂಡ್ ಸೃಷ್ಟಿಸಿದೆ. ಪಕ್ಕ ಮಾಸ್ ಫೀಲ್ ಇರುವ ಈ ಟೀಸರ್ ನೋಡುಗರಿಗೆ ಸಕತ್ ಎಂಟರ್ಟ್ರೈನ್ಮೆಂಟ್ ಫೀಲ್ ಕೊಡುತ್ತಿದ್ದು ಟೀಸರ್ ನೋಡಿದ ಅಭಿಮಾನಿಗಳು ವಾವ್ ಎನ್ನುತ್ತಿದ್ದಾರೆ. K.P.ಶ್ರೀಕಾಂತ್ ನಿರ್ಮಾಣ ಮಾಡುತ್ತಿರುವ ಸಲಗ ಚಿತ್ರಕ್ಕೆ ದುನಿಯಾ ವಿಜಯ್ ಅವರೇ ಮೊದಲ ಬಾರಿಗೆ ನಿರ್ದೇಶನ  ಮಾಡಿರುವುದು ಸಲಗ ಚಿತ್ರದ ಪ್ರಮುಖ ಆಕರ್ಷಣೆ.

ಬೆಂಗಳೂರು ಭೂಗತ ಲೋಕದ ಹೊಸ ಅನಾವರಣವನ್ನು ದುನಿಯಾ ವಿಜಯ್ ಅವರು ಹೊಸ ರೀತಿಯಲ್ಲಿ ಹೇಳ ಹೊರಟಿರುವುದು ಟೀಸರ್ ನಲ್ಲಿ ಕಾಣುತ್ತಿದ್ದು, ನಿರ್ದೇಶನದ ಜವಾಬ್ದಾರಿ ಹೊತ್ತ ಮೊದಲ ಬಾರಿಯೇ ದುನಿಯಾ ವಿಜಯ್ ಅವರು ದೊಡ್ಡ ಮಟ್ಟದಲ್ಲಿ ಗೆಲುವು ಕಾಣುವುದು ನಿಶ್ಚಿತ ಎನ್ನುತ್ತಿದ್ದಾರೆ ಟೀಸರ್ ನೋಡಿದ ಸಿನಿರಸಿಕರು. ಒಟ್ಟಿನಲ್ಲಿ ದುನಿಯಾ ವಿಜಯ್ ಜನ್ಮದಿನಕ್ಕೆ ಅಭಿಮಾನಿಗಳಿಗೆ ಭರ್ಜರಿ ಉಡುಗೊರೆಯನ್ನೇ ನೀಡಿದ್ದಾರೆ ಎನ್ನಬಹುದು.

ಇನ್ನು ಟೀಸರ್ ನಲ್ಲಿ ಬರುವ ಡೈಲಾಗ್ ಗಳು ಪಡ್ಡೆ ಹುಡುಗರ ಹಾಟ್ ಫೆವರೇಟ್ ಆಗುವುದು ಖಚಿತ. ಸಲಗ ಟೀಸರ್ ನಲ್ಲಿ ಬರುವ ಹಿನ್ನೆಲೆ ಸಂಗೀತ ಮತ್ತೊಂದು ಹೈಲೈಟ್ ಎನ್ನಬಹುದು. ದುನಿಯಾ ವಿಜಯ್ ಜೊತೆಗೆ ಡಾಲಿ ಧನಂಜಯ ಮತ್ತು ಸಂಜನಾ ಆನಂದ್,  ಕಾಕ್ರೋಜ್ ಸುಧಿ ಸೇರಿ ಹಲವಾರು ಕಲಾವಿದರು ಟೀಸರ್ ನಲ್ಲಿ ಮಿಂಚಿದ್ದು ಸಲಗ ಟೀಸರ್ ಸಧ್ಯ ಎಲ್ಲೆಡೆ ವೈರಲ್ ಆಗುತ್ತಿದೆ..

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here