ಸಿನಿಮಾ ನಟ ನಟಿಯರು ಎಂದರೆ ಅವರಿಗೆ ದೊಡ್ಡ ಅಭಿಮಾನಿಗಳ ಬಳಗ ಇದ್ದೇ ಇರುತ್ತದೆ. ಅದರಲ್ಲೂ ಕೆಲವರಿಗೆ ತಮ್ಮ ನೆಚ್ಚಿನ ಸ್ಟಾರ್ ಎಂದರೆ ಅತೀವವಾದ ಅಭಿಮಾನ, ಅವರೆಂದರೆ ಒಂದು ಕ್ರೇಜ್ ಇರುತ್ತದೆ. ಇದಕ್ಕಾಗಿಯೇ ತಾವು ಮೆಚ್ಚಿದ ನಟರ ಹೆಸರುಗಳ ಟ್ಯಾಟೂ ಹಾಕಿಸಿಕೊಳ್ಳುವುದು, ಅವರಂತೆ ಹೇರ್ ಸ್ಟೈಲ್ , ಅವರಂತೆ ಡ್ರೆಸ್ ಮಾಡಿಕೊಳ್ಳುವವರನ್ನು ಕೂಡಾ ನಾವು ನೋಡಿದ್ದೇವೆ. ಇನ್ನೂ ಕೆಲವರು ಅಭಿಮಾನ ನಟನನ್ನು ನೋಡಲು ದೂರ ದೂರದ ಊರುಗಳಿಂದ ಬಂದು ಕಾಯುವುದು ಕೂಡಾ ಆಗಾಗ ಮಾದ್ಯಮಗಳಲ್ಲಿ ಸುದ್ದಿಯಾಗುವುದು ಉಂಟು. ನಟರೆಂದರೆ ಜನರಿಗೆ ಯಾವಾಗಲೂ ಒಂದು ಆಸಕ್ತಿ ಇದ್ದೇ ಇದೆ‌.

ಇಂತಹುದೇ ಒಬ್ಬ ಅಭಿಮಾನಿಯ ಅಭಿಮಾನ ಈಗ ಸುದ್ದಿಯಾಗಿ ಎಲ್ಲರ ಗಮನವನ್ನು ಸೆಳೆಯುತ್ತಿದೆ. ತಮ್ಮ ನೆಚ್ಚಿನ ನಟನನ್ನು ನೋಡಬೇಕೆಂದು ಅಭಿಮಾನಿಯೊಬ್ಬರು ಸುಮಾರು 600 ಕಿಮೀ ಗಳ ದೂರವನ್ನು ಸೈಕಲ್ ನಲ್ಲಿ ಕ್ರಮಿಸಿದ್ದಾರೆ. ಆ ಅಭಿಮಾನಿಯ ಹೆಸರು ಭುಪೇನ್ ಲಿಕ್ಸನ್ , ಆತನ ಅಭಿಮಾನ ನಟ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು‌. ಭುಪೇನ್ ಲಿಕ್ಸನ್ ಅವರು 52 ವರ್ಷ ವಯಸ್ಸಿನವರಾಗಿದ್ದು, ಸೈಕಲಿಸ್ಟ್ ಕೂಡಾ ಹೌದು. ಸಲ್ಮಾನ್ ಖಾನ್ ಅವರ ಅಪ್ಪಟ ಅಭಿಮಾನಿ ಭುಪೇನ್ ಲಿಕ್ಸನ್ ಅವರು‌.

ಈ ಬಾರಿ ಫಿಲ್ಮ್‌ಫೇರ್ ಪ್ರಶಸ್ತಿ ಸಮಾರಂಭ ಗುವಹಾಟಿಯಲ್ಲಿ ನಡೆದಿತ್ತು. ಈ ಸಂದರ್ಭದಲ್ಲಿ ಆ ಸಮಾರಂಭದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಭಾಗವಹಿಸಲಿದ್ದಾರೆ ಎಂದು ತಿಳಿದ ಭುಪೇನ್ ಅವರು ಫೆಬ್ರವರಿ 6 ರಂದು ಸೈಕಲ್ ನಲ್ಲಿ ಟಿನ್ಸುಕಿಯಾದ ಜಗುನ್ ಎಂಬಲ್ಲಿಂದ ಪ್ರಯಾಣ ಆರಂಭಿಸಿ ಫೆಬ್ರವರಿ 13 ರಂದು ಗುವಹಾಟಿ ತಲುಪಿದ್ದಾರೆ. ಫೆಬ್ರವರಿ 15 ರಂದು ನಡೆದ ಫಿಲ್ಮ್‌ಫೇರ್ ಸಮಾರಂಭ ನಡೆದಾಗ ಅಲ್ಲಿ ಭುಪೇನ್ ತಮ್ಮ ನೆಚ್ಚಿನ ನಾಯಕ ನಟನನ್ನು ನೋಡಲು ಬಹಳ ಕಾತುರರಾಗಿ ಬಂದಿದ್ದರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here