ಸೆಲೆಬ್ರಿಟಿಗಳ ಅದರಲ್ಲೂ ವಿಶೇಷವಾಗಿ ಸಿನಿಮಾ ನಟ ನಟಿಯರಿಗೆ ಆಗಾಗ ಕೆಲವರು ತಮ್ಮ ಹುಚ್ಚಾಟಗಳಿಂದ ತೊಂದರೆ ಕೊಡುವುದು ಉಂಟು. ಅದಕ್ಕಾಗಿ ಕೆಲವೊಮ್ಮೆ ಚಲನಚಿತ್ರಗಳಿಂದ ಐಡಿಯಾ ತೆಗೆದುಕೊಂಡು ನಿಜ ಜೀವನದಲ್ಲಿ ಜಾರಿಗೆ ತರುವುದೂ ಉಂಟು. ಇಂತಹುದೇ ಒಂದು ಆಘಾತಕಾರಿ ಘಟನೆಯೊಂದರಲ್ಲಿ, ಉತ್ತರ ಪ್ರದೇಶದ ಗಾಜಿಯಾಬಾದ್‌ನ 16 ವರ್ಷದ ಬಾಲಕನ ಮೇಲೆ ಮುಂಬೈ ಪೊಲೀಸರಿಗೆ ವಂಚನೆಯ ಈ ಮೇಲ್ ಕಳುಹಿಸಿದ್ದಕ್ಕಾಗಿ ಪ್ರಕರಣ ದಾಖಲಾಗಿದೆ. ಈ ಬಾಲಕ ಬಾಂದ್ರಾದಲ್ಲಿರುವ ಬಾಲಿವುಡ್ ನಟ ಸಲ್ಮಾನ್ ಖಾನ್‌ ಅವರ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನಲ್ಲಿ ಬಾಂಬ್ ಸ್ಫೋಟಿಸಲು ಸಿದ್ಥತೆ ನಡೆಸಲಾಗಿದೆ ಎಂದು ಮೇಲ್ ಮಾಡಿದ್ದಾನೆ.

ಮೇಲ್ ನಲ್ಲಿ ಸಲ್ಮಾನ್ ಖಾನ್ ಅವರ ಗ್ಯಾಲಕ್ಸಿ ಅಪಾರ್ಟ್ ಮೆಂಟ್ ನಲ್ಲಿ ಇಟ್ಟಿರುವ ಬಾಂಬ್ ಇನ್ನು ಎರಡು ಗಂಟೆಗಳಲ್ಲಿ ಸ್ಪೋಟವಾಗಲಿದ್ದು, ಸಾಧ್ಯವಾದರೆ ಹೋಗಿ ತಡೆಯಿರಿ ಎಂದು ಮೇಲ್ ಮಾಡಿದ್ದಾನೆ. ಇಂತಹುದೊಂದು ಮೇಲ್ ಸ್ವೀಕರಿಸಿದ್ದ ಪೋಲಿಸರು ಕೂಡಲೇ ಬಾಂಬ್ ನಿಷ್ಕ್ರಿಯ ದಳ, ಪೋಲಿಸ್ ದಳದೊಂದಿಗೆ ಸ್ಥಳಕ್ಕೆ ಧಾವಿಸಿದ್ದಾರೆ. ಸಲ್ಮಾನ್ ಖಾನ್ ಅವರು ತಮ್ಮ ದಬಾಂಗ್ 3 ಸಿನಿಮಾ ಪ್ರಮೋಷನ್ ನಲ್ಲಿ ಹೊರಗಿದ್ದ ಕಾರಣ ಅವರು ಮನೆಯಲ್ಲಿ ಇರಲಿಲ್ಲ. ಪೋಲಿಸರು ಅವರ ಕುಟುಂಬ ಸದಸ್ಯರನ್ನು ಶೀಘ್ರವಾಗಿ ಮನೆಯಿಂದ ಹೊರ ಕರೆ ತಂದಿದ್ದಾರೆ. ಸಲ್ಮಾನ್ ಅವರ ತಂಗಿ ಗರ್ಭಿಣಿಯಾಗಿದ್ದು ಮೊದಲು ಆಕೆಯನ್ನು ಸುರಕ್ಷಿತ ಸ್ಥಾನಕ್ಕೆ ಕರೆದೊಯ್ದಿದ್ದಾರೆ.

ಅನಂತರ ಮನೆಯೆಲ್ಲಾ ಬಾಂಬ್ ಸ್ಕ್ವಾಡ್ ಸುಮಾರು ನಾಲ್ಕು ಗಂಟೆಗಳ ಕಾಲ ಪರಿಶೀಲನೆ ನಂತರ ಬಾಂಬ್ ಪತ್ತೆಯಾಗದೆ, ಮೇಲ್ ಮಾಡಿದ ಗಾಜಿಯಾಬಾದ್ ನ ವ್ಯಕ್ತಿಯನ್ನು ಪತ್ತೆ ಮಾಡಲು ಟೆಕ್ನಿಕಲ್ ಇಂಟಲಿಜೆನ್ಸ್ ನ ಟೀಮ್ ಹೊರಟಾಗ ತಿಳಿದದ್ದು ಆ ಮೇಲ್ ಕಳಿಸಿದ್ದು ಒಬ್ಬ ಬಾಲಕನೆಂದು. ಆದರೆ ಆತ ಮನೆಯಲ್ಲಿ ಇರಲಿಲ್ಲ. ಅವನ ಅನುಪಸ್ಥಿತಿಯ ಕಾರಣ ತಂಡವು ಆತನ ಸಹೋದರನನ್ನು ಭೇಟಿಯಾಯಿತು, ಅವರು ಸಲಹೆ ಇಮೇಲ್ ಬಗ್ಗೆ ಉಲ್ಲೇಖಿಸಿದ್ದಾರೆ. ಅವರ ಹಿರಿಯ ಸಹೋದರ ಕೂಡಾ ಅಡ್ವೋಕೇಟ್ ಆಗಿದ್ದು ತಮ್ಮನನ್ನು ಮನೆಗೆ ಕರೆಸಿದ್ದಾರೆ. ಯಾರದೋ ಮಾತು ಕೇಳಿದ್ದಾಗಿ ಆತ ಹೀಗೆ ಮಾಡಿದ್ದಾಗಿ ಹೇಳಿದ್ದಾನೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here