ಬಾಲಿವುಡ್ ನಟ ಸುಶಾಂತ್ ಅವರ ಸಾವಿನ ನಂತರ ಬಾಲಿವುಡ್ ನಲ್ಲಿ ಕುಟುಂಬ ರಾಜಕೀಯ, ಸ್ಟಾರ್ ಗಳ ಮಕ್ಕಳಿಗೆ ಮಣೆ ಹಾಕುವ ನೆಪೊಟಿಸಂ ಬಗ್ಗೆ ದೊಡ್ಡ ವಿರೋಧವೊಂದು ವ್ಯಕ್ತವಾಗುತ್ತಿದ್ದು, ಹೇಗೆ ಸ್ಟಾರ್ ಗಳ ಮಕ್ಕಳ ಸಿನಿಮಾಗಳು ಫ್ಲಾಪ್ ಆದರೂ ಅವರಿಗೆ ಸಾಲು ಸಾಲು ಸಿನಿಮಾಗಳು, ಪ್ರಶಸ್ತಿಗಳು ಸಿಗುತ್ತವೆ ಎಂಬ ಚರ್ಚೆಗಳು ತೀವ್ರಗೊಂಡಿದ್ದು, ಸ್ಟಾರ್ ಕಿಡ್ಸ್ ಗಳ ಪ್ರಮೋಟರ್ ಕರಣ್ ಜೋಹರ್, ನಟಿ ಆಲಿಯಾ ಭಟ್, ಸಲ್ಮಾನ್ ಖಾನ್ ಹಾಗೂ ಇನ್ನಿತರೆ ಸ್ಟಾರ್ ಗಳ ವಿರುದ್ಧ ದನಿ ಎತ್ತಿದ್ದಾರೆ ಹಲವು ನಟ ನಟಿಯರು ಹಾಗೂ ನಿರ್ದೇಶಕರು. ಸಾಮಾಜಿಕ ಜಾಲತಾಣಗಳಲ್ಲಿ ಕೂಡಾ ಆಲಿಯಾ, ಸೋನಂ ಕಪೂರ್, ಕರಣ್ ಜೋಹರ್, ಸಲ್ಮಾನ್ ಖಾನ್ ರಂತಹ ನಟರ ಫಾಲೋಯರ್ಸ್ ಸಂಖ್ಯೆ ಕೂಡಾ ಏಕಾ ಏಕೀ ತಗ್ಗುತ್ತಿದೆ.

ಸುಶಾಂತ್ ಸಾವಿನ ನಂತರ ಇಷ್ಟೆಲ್ಲಾ ನಡೆಯುವಾಗಲೇ ಕರಣ್ ಜೋಹರ್ ತಮ್ಮ ಟ್ವಿಟರ್ ನಲ್ಲಿ ಎಂಟು ಖಾತೆಗಳನ್ನು ಬಿಟ್ಟು ಉಳಿದೆಲ್ಲವನ್ನು ಅನ್ ಫಾಲೋ ಮಾಡಿದ್ದಾರೆ. ಇನ್ನು ಸಲ್ಮಾನ್ ಖಾನ್ ಮೌನ ಮುರಿದು ಟ್ವೀಟ್ ಒಂದನ್ನು ಮಾಡಿದ್ದಾರೆ. ಬಾಲಿವುಡ್‌ ನಟ ಸುಶಾಂತ್ ಆತ್ಮಹತ್ಯೆಯಲ್ಲ, ಅದೊಂದು ಕೊಲೆ ಎಂದು ಆರೋಪಿಸಿದ ಅಭಿಮಾನಿಗಳು, ಸಿನಿ ಪ್ರಿಯರು ಸುಶಾಂತ್ ಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಒಂದು ಆನ್ಲೈನ್ ಅಭಿಯಾನವನ್ನು ನಡೆಸುತ್ತಿದ್ದು ಈ ವಿಚಾರವಾಗಿ ಸಲ್ಮಾನ್ ಖಾನ್ ಟ್ವೀಟ್ ಒಂದನ್ನು ಮಾಡಿದ್ದಾರೆ.

ನಾನು ನನ್ನ ಎಲ್ಲಾ ಅಭಿಮಾನಿಗಳಲ್ಲಿ ವಿನಂತಿ ಮಾಡುತ್ತಿದ್ದೇನೆ, ಎಲ್ಲರೂ ಸುಶಾಂತ್ ಅಭಿಮಾನಿಗಳ ಜೊತೆ ನಿಲ್ಲಿ , ಅವರ ಸಾವಿಗೆ ನ್ಯಾಯ ಒದಗಿಸಲು ದಯವಿಟ್ಟು ನೀವೆಲ್ಲಾ ಸುಶಾಂತ್ ಅಭಿಮಾನಿಗಳು ಹಾಗೂ ಕುಟುಂಬದ ಜೊತೆ ನಿಲ್ಲಬೇಕು. ಸುಶಾಂತ್ ಅಭಿಮಾನಿಗಳು ಬಳಸಿದ ಭಾಷೆ ಅಥವಾ ಶಾಪವು ಮುಖ್ಯವಲ್ಲ. ಅದರ ಹಿಂದಿನ ಭಾವನೆ ಮುಖ್ಯ ಅದನ್ನು ಪರಿಗಣಿಸಿ. ಏಕೆಂದರೆ ಪ್ರೀತಿ ಪಾತ್ರರನ್ನು ಕಳೆದುಕೊಂಡ ನೋವು ಬಹಳ ಇರುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here