ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ ಅವರಿಗೆ 2 ವರ್ಷ  ಜೈಲು ಶಿಕ್ಷೆಯನ್ನು ಪ್ರಕಟಿಸಿದೆ .ಹಮ್ ಹಮ್ ಸಾಥ್ ಹೈ ಚಿತ್ರೀಕರಣದ ದಮಯದಲ್ಲಿ 1998 ರಲ್ಲಿ ಸಲ್ಮಾನ್ ಖಾನ್ ಎರಡು ಕೃಷ್ಣಮೃಗಗಳನ್ನು ಭೇಟೆಯಾಡಿ ಕೊಂದಿದ್ದರು.

ಜೋದ್ ಪುರದ ಸಿಜೆಎಂ ಕೋರ್ಟ್ ಸಲ್ಮಾನ್‌ ಖಾನ್ ಅವರನ್ನು ಧೋಷಿ ಎಂದು ಆದೇಶ ನೀಡಿದೆ.ವನ್ಯಜೀವಿ ಸಂರಕ್ಷಣ ಕಾಯ್ದೆಯ ಸೆಕ್ಷನ್ 51 ರ ಪ್ರಕಾರ ಸಲ್ಮಾನ್ ಖಾನ್ ಅವರಿಗೆ ಕನಿಷ್ಟ ಶಿಕ್ಷೆ ನೀಡಬೇಕೆಂದು ಸರ್ಕಾರಿ ವಕೀಲರು ರಾಜಾಸ್ಥಾನದ ಜೋಧ್ ಪುರದ ಸಿಜೆಎಂ ಕೋರ್ಟ್ ಗೆ ಮನವಿ ಸಲ್ಲಿಸಿದ್ದರು.

ಕನಿಷ್ಠ ಆರು ವರ್ಷ ಸಲ್ಮಾನ್ ಖಾನ್ ಅವರಿಗೆ ಶಿಕ್ಷೆ ನೀಡಬೇಕು ಎಂದು ವಕೀಲರು ಮನವಿ ನೀಡಿದ್ದರು.ಇನ್ನು ಸಲ್ಮಾನ್ ಖಾನ್ ಅವರಿಗೆ ಒಂದು ವರ್ಷದಿಂದ ಆರು ವರ್ಷ ಶಿಕ್ಷೆ ವಿಧಿಸಬಹುದಾಗಿತ್ತು.

ಹಮ್ ಹಮ್ ಸಾಥ್ ಹೈ ಚಿತ್ರೀಕರಣದ ಸಮಯದಲ್ಲಿ ಸಲ್ಮಾನ್ ಖಾನ್ ಜೊತೆಯಾಗಿ ದ್ದ ಸೈಫ್ ಆಲಿ ಖಾನ್ ,ಸೋನಾಲಿ ಬೇಂದ್ರೆ ,ಟಬು , ಇವರನ್ನು ಶಿಕ್ಷೆಯಿಂದ ಮುಕ್ತಿಗೊಳಿಸಲಾಗಿದೆ.ಇನ್ನು ಸಲ್ಮಾನ್ ಖಾನ್ ಪರ ವಕೀಲರು ಮತ್ತು ಸರ್ಕಾರಿ ಪರ ವಕೀಲರ ಪ್ರತಿವಾದಗಳನ್ನು ಆಲಿಸಿದ ಜೋಧಪುರ ಸಿ ಜೆ ಎಂ ಕೋರ್ಟ್ ನ ನ್ಯಾಯಾಧೀಶರಾದ ದೇವ್ ಕುಮಾರ್ ಖತ್ರಿ ಅವರು ಈ ತೀರ್ಪು ಪ್ರಕಟಿಸಿದರು‌.

ಇನ್ನು ಮೂರು ವರ್ಷಕ್ಕಿಂತ ಕಡಿಮೆ ಅವಧಿಯ ಶಿಕ್ಷೆ ಇದಾಗಿರುವುದರಿಂದ ಸಲ್ಮಾನ್ ಖಾನ್ ಅವರಿಗೆ ಇಂದೇ ಜಾಮೀನು ಸಿಕ್ಕಿದೆ.ಹೀಗಾಗಿ ಈ ಶಿಕ್ಷೆ ಸಲ್ಮಾನ್ ಖಾನ್ ಅವರ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ.ಅವರು ಜಾಮೀನು ದೊರೆಯುವುದರಿಂದ ಅವರು ದಿನನಿತ್ಯ ಚಿತ್ರೀಕರಣದಲ್ಲಿ ಭಾಗವಹಿಸಬಹುದಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here