ಕಿಚ್ಚ  ಸುದೀಪ್ ಸ್ಯಾಂಡಲ್ ವುಡ್ ಮಾತ್ರವಲ್ಲದೆ ಇತರೆ ಭಾಷೆಗಳಲ್ಲಿ ಕೂಡಾ ತಮ್ಮ ನಟನೆಯ ಛಾಪನ್ನು ಮೂಡಿಸಿದವರು, ಅಲ್ಲಿನ ಹಿರಿಯ ಹಾಗೂ ಅನುಭವಿ ನಟರಿಂದ ಮೆಚ್ಚುಗೆ ಕೂಡಾ ಪಡೆದುಕೊಂಡ ನಟ ಎಂಬುದು ಈಗಾಗಲೇ ಎಲ್ಲರಿಗೂ ತಿಳಿದಿರುವ ವಿಷಯ. ಈಗ ಸದ್ಯಕ್ಕೆ ಅವರು ದಕ್ಷಿಣದಲ್ಲಿ ಮೆಗಸ್ಟಾರ್ ಚಿರಂಜೀವಿ ಅವರ ನಟನೆಯ ಬಹು ನಿರೀಕ್ಷಿತ ಹಾಗೂ ಭಾರಿ ವೆಚ್ಚದಲ್ಲಿ ನಿರ್ಮಾಣ ಹಂತದಲ್ಲಿರುವ ಸೈರಾ ನರಸಿಂಹರೆಡ್ಡಿ ಚಿತ್ರದಲ್ಲಿ ನಟಿಸುತ್ತಿದ್ದರೆ , ಅತ್ತ ಬಾಲಿವುಡ್‌ನಲ್ಲಿ ಸಲ್ಮಾನ್ ಖಾನ್ ಅವರ ದಬಾಂಗ್ 3 ನಲ್ಲಿ ಕೂಡಾ ಒಂದು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

ಸುದೀಪ್ ಅವರು ತಮ್ಮ ಹಲವು ಸಂತೋಷದ ವಿಚಾರಗಳನ್ನು, ಸಿನಿಮಾ ಅನುಭವಗಳನ್ನು, ವಿಶೇಷ ಮಾಹಿತಿಗಳನ್ನು ಹಾಗೂ ಇನ್ನಿತರೆ ವಿಷಯಗಳನ್ನು ತಮ್ಮ ಟ್ವಿಟರ್ ಖಾತೆಯ ಮೂಲಕ ಫೋಟೋಗಳು, ಸ್ಟೇಟಸ್ ಹಾಗೂ ವಿವರಗಳನ್ನು ನೀಡುವ ಬರಹಗಳ ಮೂಲಕ ಅಭಿಮಾನಿಗಳು ಹಾಗೂ ಸಿನಿ ರಸಿಕರ ‌ಜೊತೆ ಹಂಚಿಕೊಳ್ಳುತ್ತಾ ಇರುತ್ತಾರೆ. ಈಗ ಅವರು ಸಲ್ಮಾನ್ ಖಾನ್ ಅವರೊಂದಿಗೆ ತಾವಿರುವ ಫೋಟೋ ಒಂದನ್ನು ಟ್ವೀಟ್ ಮಾಡಿದ್ದು, ಅದರಲ್ಲಿ ಸಲ್ಮಾನ್ ಖಾನ್ ಬಗ್ಗೆ ಒಂದೆರಡು ಸಾಲುಗಳನ್ನು ಬರೆದುಕೊಂಡಿದ್ದಾರೆ.

ಅವರು ತಮ್ಮ ಟ್ವೀಟ್ ನಲ್ಲಿ, ಇಲ್ಲ ಇದು ಮತ್ತೊಂದು ಪೋಸ್ಟರ್ ಅಲ್ಲ …ಆತ ಯಾರನ್ನಾದರೂ ಇಷ್ಟಪಟ್ಟರೆ ಅವರೊಂದಿಗೆ ಹೇಗೆ ಬಾಂಧವ್ಯ ಬೆಸೆದುಕೊಳ್ಳುತ್ತಾರೆ ಎಂಬುದಕ್ಕೆ ಇದೊಂದು ಉದಾಹರಣೆ ಎಂಬಂತೆ ಅವರು ಹಾಕಿರುವ ಫೋಟೋ ಬಗ್ಗೆ ಹೇಳಿದ್ದಾರೆ. ಅಲ್ಲದೆ ಸಲ್ಮಾನ್ ಖಾನ್ ಅವರಿಗೆ ಧನ್ಯವಾದಗಳನ್ನು ಹೇಳುತ್ತಾ, ಸರ್ ನಿಮ್ಮ ಜೀವನದಲ್ಲಿ ನೀವು ನನಗೆ ನೀಡಿದ ಸ್ಥಾನಕ್ಕಾಗಿ ನಾನು ನಿಜಕ್ಕೂ ಹರಸಲ್ಪಟ್ಟಿದ್ದೇನೆ ಎಂದು ಹೇಳಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here