ನಟಿ ಸಮಂತಾ ತೆಲುಗು ಮತ್ತು ತಮಿಳಿನಲ್ಲಿ ಸಾಕಷ್ಟು ಬಿಜಿಯಾಗಿರುವ ನಟಿ‌. ಸಮಂತಾ ಅವರು ಚಂದನವನಕ್ಕೂ ಕಾಲಿಡುತ್ತಾರೆ ಅನ್ನೋ ಮಾತುಗಳು ಗಾಂಧೀನಗರದಲ್ಲಿ ಕೇಳಿ ಬರುತ್ತಿತ್ತು. ಆದರೆ ಯಾವ ಸಿನಿಮಾಕ್ಕಾಗಿ ಅವರು ಬರಲಿದ್ದಾರೆ ಎಂಬುದು ಮಾತ್ರ ತಿಳಿದಿರಲಿಲ್ಲ‌. ಆದರೆ ಈಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಸಮಂತಾ ಅಕ್ಕಿನೇನಿ ‘ಫ್ಯಾಂಟಮ್ ಸಿನಿಮಾದಲ್ಲಿ ‘ಕಿಚ್ಚ’ ಸುದೀಪ್​ಗೆ ಜೋಡಿಯಾಗಿ ಸ್ಯಾಂಡಲ್ ವುಡ್ ಕಡೆ ಬರಲಿದ್ದಾರೆಂದು ಈಗ ಹೊಸ ಸುದ್ದಿಯೊಂದು ಕೇಳಿ ಬಂದಿದೆ. ನಟಿ ಸಮಂತಾ ದಕ್ಷಿಣದ ಸ್ಟಾರ್ ನಟಿ ಎನಿಸಿದ್ದರೂ ಕೂಡಾ ಇನ್ನೂ ಕನ್ನಡದಲ್ಲಿ ನಟಿಸಿರಲಿಲ್ಲ.‌ ಬಾಲಿವುಡ್ ನಿಂದ ಬಂದ ಅವಕಾಶವನ್ನು ಅವರೇ ನಿರಾಕರಿಸದ್ದರು ಕೂಡಾ.‌

ಇವೆಲ್ಲವುಗಳ ನಡುವೆ ಈಗ ಅವರನ್ನು ಕನ್ನಡಕ್ಕೆ ಪರಿಚಯಿಸುವ, ಕನ್ನಡ ಸಿನಿಮಾ ರಂಗಕ್ಕೆ ಕರೆ ತರುವ ಪ್ರಯತ್ನವನ್ನು ಮಾಡುತ್ತಿದೆ ಫ್ಯಾಂಟಮ್ ಚಿತ್ರ ತಂಡ. ಚಿತ್ರದ ನಿರ್ವಾಪಕ ಜಾಕ್ ಮಂಜು, ಸಮಂತಾ ಅವರನ್ನು ಈ ಸಿನಿಮಾಕ್ಕಾಗಿ ಅಪ್ರೋಚ್ ಮಾಡುವ ಸಿದ್ಧತೆಯಲ್ಲಿದ್ದು, ಒಂದು ಎಲ್ಲವೂ ಅಂದುಕೊಂಡಂತೆ ಆದರೆ ಸಮಂತಾ ಕನ್ನಡ ಚಿತ್ರದಲ್ಲಿ ನಟಿಸುವುದು ಖಚಿತವಾದಂತೆ ಎನ್ನಲಾಗಿದೆ. ಫ್ಯಾಂಟಮ್ ಸಿನಿಮಾದ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿರುವುದು ರಂಗಿತರಂಗ ಹಾಗೂ ರಾಜರಥ ಸಿನಿಮಾಗಳ ನಿರ್ದೇಶಕ ಅನೂಪ್ ಭಂಡಾರಿಯವರು.

ಈ ಹಿಂದೆ ಇವರು ಕಿಚ್ಛ ಸುದೀಪ್ ಜತೆಗೆ ‘ಬಿಲ್ಲ ರಂಗ ಭಾಷ’ ಸಿನಿಮಾ ಮಾಡುವುದಾಗಿ ಹೇಳಿದ್ದು ಮಾತ್ರವಲ್ಲದೆ, ಅದರ ಫಸ್ಟ್​ಲುಕ್ ಸಹ ಬಿಡುಗಡೆ ಮಾಡಿದ್ದರು. ಆದರೆ ಕಾರಣಾಂತರಗಳಿಂದ ಆ ಸಿನಿಮಾ ಮುಂದಕ್ಕೆ ಹೋದುದರಿಂದ ಅದರ ಬದಲು ಫ್ಯಾಂಟಮ್ ಚಿತ್ರ ಸೆಟ್ಟೇರಿತು. ಕಿಚ್ಛ ಸುದೀಪ್ ಅವರು ಪ್ರಸ್ತುತ ‘ಕೋಟಿಗೊಬ್ಬ 3’ ಶೂಟಿಂಗ್​ನಲ್ಲಿ ಬ್ಯುಸಿಯಿದ್ದು, ಅದು ಮುಗಿದ ನಂತರ ಅವರ ಹೊಸ ಸಿನಿಮಾ ಫ್ಯಾಂಟಮ್ ಆರಂಭವಾಗಲಿದೆ ಎನ್ನಲಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here