ಸ್ಯಾಂಡಲ್ ವುಡ್ ನ ಬ್ಯುಸಿ ನಟಿಯಾಗಿರುವ ಹರಿ ಪ್ರಿಯಾ ಅವರು ಸೂಜಿ ದಾರ ಸಿನಿಮಾದ ನಂತರ ಈಗ ಮತ್ತೊಂದು ಬಾರಿ ಸಿನಿಮಾವೊಂದರ ಕಾರಣದಿಂದಾಗಿ ವಿವಾದಕ್ಕೆ ಗುರಿಯಾಗಿದ್ದಾರೆ. ಸೂಜಿ ದಾರ ಸಿನಿಮಾ ಬಿಡುಗಡೆಯಾದಾಗ ಸದ್ಯಕ್ಕೆ ಬಿಗ್ ಬಾಸ್ ಮನೆಯಲ್ಲಿರುವ ಚೈತ್ರ ಕೊಟ್ಟೂರು ಅವರಿಗೆ ಆ ಸಿನಿಮಾದಲ್ಲಿ ಹೆಚ್ಚು ಪ್ರಾಮುಖ್ಯತೆ ನೀಡಿ, ನನ್ನ ಪಾತ್ರಕ್ಕೆ ಕಡಿಮೆ ಪ್ರಾಮುಖ್ಯತೆ ನೀಡಲಾಗಿದೆ ಎಂದೂ, ಚೈತ್ರ ಕೊಟ್ಟೂರು ಬಂದರೆ ನಾನು ಸಿನಿಮಾ ಪ್ರಚಾರಕ್ಕೆ ಬರುವುದಿಲ್ಲ ಎಂದು ಹರಿ ಪ್ರಿಯಾ ಹೇಳಿದ್ದು ಸುದ್ದಿಯಾಗಿ, ಹರಿಪ್ರಿಯಾ ನನ್ನಿಂದಾಗಿ ಚೈತ್ರ ಕೊಟ್ಟೂರು ಬಿಗ್ ಬಾಸ್ ಗೆ ಹೋದರು ಎಂದು ಕೂಡಾ ಹೇಳಿದ್ದು ಗಮನಿಸಬಹುದು.

ಈ ವಿವಾದ ಇನ್ನೂ ಮರೆಯುವ ಮೊದಲೇ ಅವರ ಹೊಸ ಸಿನಿಮಾ ಬಿಡುಗಡೆಯಾಗಿ 25 ದಿನಗಳನ್ನು ಮುಗಿಸಿ ಮುನ್ನುಗ್ಗಿರುವ ಕನ್ನಡ್ ಗೊತ್ತಿಲ್ಲ ಸಿನಿಮಾದ
ನಿರ್ದೇಶಕರಾದ ಮಯೂರ್ ರಾಘವೇಂದ್ರ ಅವರು ಹರಿಪ್ರಿಯಾ ಅವರ ಬಗ್ಗೆ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಹರಿಪ್ರಿಯಾ ಹಾಗೂ ಹಿರಿಯ ನಟಿ ಸುಧಾರಾಣಿ ಅವರು ಪ್ರಮುಖ ಪಾತ್ರದಲ್ಲಿರುವ ಈ ಸಿನಿಮಾದ ಯಾವುದೇ ಪ್ರಮೋಷನ್ ಗೂ ನಟಿ ಹರಿಪ್ರಿಯಾ ಬಂದಿಲ್ಲ ಎಂಬುದು ನಿರ್ದೇಶಕರ ಅಳಲಾಗಿದೆ. ಅವರು ತಮ್ಮ ಕಥಾ ಸಂಗಮ ಸಿನಿಮಾದ ಪ್ರಮೋಷನ್ ನಲ್ಲಿ ಪಾಲ್ಗೊಳ್ಳುತ್ತಾರೆ ಆದರೆ ಕನ್ನಡ್ ಗೊತ್ತಿಲ್ಲ ಸಿನಿಮಾದ ಪ್ರಮೋಷನ್ ಗೆ ಬರುವುದಿಲ್ಲ.

ನಿರ್ದೇಶಕ ಮಯೂರ್ ಅವರು ಮೊನ್ನ ರಾತ್ರಿ 11 ರ ವೇಳೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಿನಿಮಾದ ಲೀಡ್ (ಹರಿಪ್ರಿಯಾ) ಅವರು ಸಿನಿಮಾದ ಪ್ರಮೋಷನ್ ಗೆ ಬರದೇ ಇದ್ದರೂ ಕೂಡ ನಮ್ಮ ಸಿನಿಮಾ 25 ವಾರಗಳ ಕಡೆ ಸಾಗುತ್ತಿದೆ.. ನನ್ನ ನಿರ್ಮಾಪಕರಿಗೆ, ಸಿನಿಮಾ ತಂಡಕ್ಕೆ ಹಾಗೂ ಪ್ರೇಕ್ಷಕರಿಗೆ ಧನ್ಯವಾದಗಳು ಎಂದು ತಿಳಿಸುವ ಪೋಸ್ಟ್ ಒಂದನ್ನು ಮಾಡಿದ್ದಾರೆ. ಇನ್ನು ಹರಿಪ್ರಿಯ ಅವರು ಹೊಸಬರ ಸಿನಿಮಾಗಳ ಪ್ರಮೋಷನ್ ಗೆ ಬರುವುದಿಲ್ಲ ಎಂಬುದಾಗಿ ಕೂಡಾ ಹೇಳಲಾಗುತ್ತಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here