ಈಗ ಎಲ್ಲಿ ನೋಡಿದರೂ ಕನ್ನಡ ಚಿತ್ರರಂಗದ ನಟರ ಹಾಗೂ ಕನ್ನಡ ನಿರ್ಮಾಪಕರ ಮನೆಯ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡುತ್ತಿರುವ ಸುದ್ದಿ.ಇದನ್ನು ರಾಜಕೀಯ ಪ್ರೇರಿತ ಅಂತಾ ಕೆಲ ಅಭಿಮಾನಿಗಳು ಮತ್ತು ಇನ್ನು ಕೆಲವು ರಾಜಕಾರಣಿಗಳು ಹೇಳುತ್ತಿದ್ದಾರೆ. ಇದು ಅಪ್ಪಟ ಸುಳ್ಳು ಎಂದು ಕೆಲ ಮೂಲಗಳಿಂದ ತಿಳಿದು ಬಂದಿದೆ. ಆದಾಯ ತೆರಿಗೆ ಅಧಿಕಾರಿಗಳು ಕನ್ನಡ ನಟರ ಹಾಗೂ ಕನ್ನಡ ನಿರ್ಮಾಪಕರ ಮೇಲೆ ಹಾಗೂ ವಿತರಕರ ಮೇಲೆ ದಾಳಿ ಮಾಡಲು ಪ್ರಮುಖ ಕಾರಣವೇ ಒಂದು ಡೈರಿ. ಆ ಡೈರಿ ಯಾವುದು ಅಂತಾ ನಿಮಗೆ ಆಶ್ಚರ್ಯವಾಗ ಬಹುದು. ಇದು ನಿಜ ಎಂದು ಕೆಲ ಮೂಲಗಳಿಂದ ಕೇಳಿ ಬರುತ್ತಿರುವ ಮಾತು.

ಕನ್ನಡದಲ್ಲಿ ಹೆಸರಾಂತ ನಿರ್ಮಾಪಕರು ಹಾಗೂ ವಿತರಕರು .ಇವರು ಸುಮಾರು ಕರ್ನಾಟಕದಲ್ಲಿ ಇರುವ 209 ಚಿತ್ರ ಮಂದಿರಗಳು ಇವರ ಮುಷ್ಟಿಯಲ್ಲಿ ಇದೆ.ಇವರು ಸುಮಾರು ಚಿತ್ರಗಳಿಗೆ ಬಂಡವಾಳವನ್ನು ಹೂಡಿದ್ದಾರೆ.ಹಾಗೂ ಹಲವಾರು ಚಿತ್ರಗಳನ್ನು ವಿತರಣೆ ಮಾಡಿದ್ದಾರೆ.ಇವರನ್ನು ಆದಾಯ ತರಿಗೆ ಅಧಿಕಾರಿಗಳು ದಾಳಿ ಮಾಡಿದಾಗ ಅವರ ಹತ್ತಿರ ಒಂದು ಡೈರಿ ಪತ್ತೆ ಹಚ್ವಿದ್ದಾರೆ.ಅದರಲ್ಲಿ ಕನ್ನಡ ಚಿತ್ರ ನಾಯಕರ ಸಂಭಾವನೆ ಯಾವ ಚಿತ್ರಕ್ಕೆ ಎಷ್ಟು ಬಂಡವಾಳವನ್ನು ಹೂಡಿದ್ದಾರೆ, ಯಾವ ಚಿತ್ರಕ್ಕೆ ಪೈನಾಶಿಯರ ನೀಡಲಾಗಿದೆ.ಯಾವ ನಟ ಯಾವ ಉಧ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ.ಯಾವ ನಟರ ಆಸ್ತಿ ಎಲ್ಲಲ್ಲಿ ಇದೆ ಎಂಬುದನ್ನು ಆ ಡೈರಿಯಲ್ಲಿ ಬರೆದಿದ್ದರು ಎನ್ನಲಾಗಿದೆ.‌ ಆ ಡೈರಿ ಯಾರದು.?

ಆ ಡೈರಿ ಕನ್ನಡದ ಖ್ಯಾತ ನಿರ್ಮಾಪಕರು ಹಾಗೂ ಖ್ಯಾತ ವಿತರಕರಾದ ಜಯಣ್ಣ ಇವರ ಆಫೀಸಿನ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿದಾಗ ಈ ಡೈರಿ ಸಿಕ್ಕಿದೆ ಇದರ ಆದಾರದ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದಾರೆ ಇದಕ್ಕೂ ರಾಜಕೀಯಕ್ಕೂ ಯಾವುದೆ ಸಂಭದವಿಲ್ಲ ಎಂದು ತಿಳಿದು ಬಂದಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here