ಕನ್ನಡ ಸಿನಿಮಾ ರಂಗದಲ್ಲಿ ತನ್ನದೇ ಆದ ಹೆಸರು, ಸ್ಥಾನ ಪಡೆದು ಅಗ್ರ ನಾಯಕಿಯಾಗಿ ಮೆರೆದವರು ನಟಿ ಮಂಜುಳಾ. ಸಂಪತ್ತಿಗೆ ಸವಾಲ್ ನಲ್ಲಿ ಅಣ್ಣಾವ್ರಿಗೆ ನಾಯಕಿಯಾಗಿ ಜಂಭದ ಹೆಣ್ಣಾಗಿ ನಟಿಸಿ ಹೆಸರಾದ ಈ ನಟಿ ಅನಂತರ ಸ್ಯಾಂಡಲ್ ವುಡ್ ಅಗ್ರ ನಾಯಕರೆಲ್ಲರ ಜೊತೆ ತೆರೆ ಹಂಚಿಕೊಂಡಿವರು. ಸೂಪರ್ ಸ್ಟಾರ್ ಆಗಿ ಚಿತ್ರರಂಗದಲ್ಲಿ ಹೊಳೆದವರು. ಆದರೆ ಇಷ್ಟೆಲ್ಲಾ ಹೆಸರಾದ ಮಂಜುಳ ಅವರ ಜೀವನ ಮಾತ್ರ ಬಹಳ ಬೇಗ ಮುಗಿದು ಹೋಯಿತು. 32 ನೇ ವಯಸ್ಸಿಗೆ ತನ್ನ ಜೀವನ ಯಾತ್ರೆಯನ್ನು ಮುಗಿಸಿ ಹೋದ ನಟಿ, ನಾಡಿನ ಸಿನಿ ರಸಿಕರ ಮನಸ್ಸಿನಲ್ಲಿ ಮಾತ್ರ ಮಧುರ ಮಂಜುಳ ಗಾನವಾಗಿ ಉಳಿದಿದ್ದಾರೆ.

ಮಂಜುಳ ಅವರ ಎಲ್ಲರನ್ನು ಅಗಲಿದ ಮೇಲೆ ತುಮಕೂರು ಜಿಲ್ಲೆಯ ಸಿರಾ ಬಳಿಯ ಹೊನ್ನೇನಹಳ್ಳಿಯಲ್ಲಿ ಅವರ ಸಮಾಧಿಯನ್ನು ಮಾಡಲಾಗಿತ್ತು. ಚಿತ್ರ ರಂಗದ ಅಗ್ರ ಗಣ್ಯ ನಾಯಕಿಯಾದ ಮೆರೆದ ಅವರ ಸಮಾಧಿಯನ್ನು ಸ್ಮಾರಕವಾಗಿ ನಿರ್ಮಾಣ ಮಾಡಲಾಗಿದೆಯೇ ಅಥವಾ ಅದಕ್ಕೊಂದು ಸೂಕ್ತ ವ್ಯವಸ್ಥೆ ಮಾಡಲಾಗಿದೆಯೇ ಎಂದರೆ ನಿಜಕ್ಕೂ ಇಲ್ಲ. ಎಷ್ಟೋ ಜನರಿಗೆ ಅವರ ಸಮಾಧಿ ಇರುವ ಜಾಗ ಕೂಡಾ ಗೊತ್ತಿಲ್ಲ. ಮಂಜುಳ ಅವರು ನಿಧನರಾದಾಗ ಅವರನ್ನು ಸಮಾಧಿ ಮಾಡಿದ ಸ್ಥಳ ಒಂದು ತೋಟವಾಗಿತ್ತು.

ಆದರೆ ದಶಕಗಳ ನಂತರ ಇಂದು ಮಂಜುಳ ಅವರ ಸಮಾಧಿ ಇದ್ದ ಜಾಗದಲ್ಲಿ ಸಮಾಧಿ ಎಲ್ಲಿದೆ ಎಂದು ಹುಡುಕುವ ಪರಿಸ್ಥಿತಿ ಬಂದಿದೆ. ಆ ಜಾಗದಲ್ಲಿ ಲೇ ಔಟ್ ಆಗಿದೆ. ಸ್ಥಳೀಯರ ಒತ್ತಡದಿಂದಾಗಿ ಆ ಸ್ಥಳದ ಮಾಲಿಕ ಮಂಜುಳ ಅವರ ಸಮಾಧಿಯ ಸುತ್ತ ಕಾಂಪೌಂಡ್ ನಿರ್ಮಾಣ ಮಾಡಿದ್ದಾರೆ. ಇಲ್ಲದೇ ಹೋಗಿದ್ದರೆ ಬಹುಶಃ ಈ ಹಿರಿಯ ನಟಿಯ ಸಮಾಧಿಯು ನಾಮವಶೇಷ ಕೂಡಾ ಇರುತ್ತಿರಲಿಲ್ಲ. ಕನ್ನಡ ಚಿತ್ರರಂಗದಲ್ಲಿ ಅಪಾರ ಸಾಧನೆಯನ್ನು ಮಾಡಿದ ಈ ನಟಿಯ ಸಮಾಧಿಯನ್ನು ರಕ್ಷಣೆ ಮಾಡುವ ಕಾರ್ಯಕ್ಕೆ ಮುಂದಾದರೆ ನಿಜಕ್ಕೂ ಅದೇ ಹಿರಿಯ ನಟಿಗೆ ಕೊಡುವ ಗೌರವ ಎನಿಸುತ್ತದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here