ರಾಜ್ಯದ ಅತ್ಯಂತ ಶ್ರೀಮಂತ ರಾಜಕಾರಣಿಯಾಗಿರುವ, ಪ್ರಸ್ತುತದಲ್ಲಿ ಅನರ್ಹಗೊಂಡಿರುವ ಶಾಸಕರಾದ ಎಂಟಿಬಿ ನಾಗರಾಜ್ ಅವರು ಈಗ ತಮ್ಮ ಮತ್ತೊಂದು ಇನ್ನಿಂಗ್ಸ್ ಶುರು ಮಾಡಲು ಹೊರಟಿದ್ದಾರೆ. ರಾಜಕೀಯದಲ್ಲಿ ಸದ್ಯಕ್ಕೆ ಸಕ್ರಿಯ ಪಾತ್ರ ವಹಿಸಲು ಸಾಧ್ಯವಿಲ್ಲದ ಕಾರಣ ಅವರು ರಾಜಕೀಯದಿಂದ ತಮ್ಮ ಚಿತ್ತವನ್ನು ಚಿತ್ರರಂಗದತ್ತ ನೆಟ್ಟಿದ್ದಾರೆ ಎಂದು ತಿಳಿದು ಬಂದಿದೆ‌. ಹೊಸಕೋಟೆಯ ಈ ರಾಜಕಾರಣಿ ಈಗ ಸ್ಯಾಂಡಲ್ ವುಡ್ ‌ನ ಕಡೆ ನಡೆಯಲು ನಿರ್ಧಾರ ಮಾಡಿದ್ದಾರೆನ್ನಲಾಗಿದೆ‌. ಎಂಟಿಬಿ ನಾಗರಾಜ್ ಅವರು ಈಗ ಸಿನಿಮಾ ನಿರ್ಮಾಣ ಮಾಡುವ ತಯಾರಿಯನ್ನು ನಡೆಸಿದ್ದಾರೆ ಎನ್ನಲಾಗಿದೆ‌.

ರಾಜಕೀಯದಲ್ಲಿ ನಡೆದ ಬೆಳವಣಿಗೆಗಳಲ್ಲಿ ಮುಂಬಯಿಗೆ ತೆರಳಿದ್ದ ಎಂಟಿಬಿ ನಾಗರಾಜ್‌ ಅವರು ಅಲ್ಲಿ ಮತ್ತೋರ್ವ ಶಾಸಕ, ಸಿನಿಮಾ ನಟರೂ ಆದ ಪಾಟೀಲ್‌ ಜತೆ ಸಮಾಲೋಚನೆಯನ್ನು ನಡೆಸಿದ ನಂತರ ಈ ನಿರ್ಧಾರವನ್ನು ಮಾಡಿದ್ದು, ಸ್ಯಾಂಡಲ್‌ವುಡ್‌ ನಲ್ಲಿ ಚಿತ್ರ ‌ನಿರ್ಮಾಣ ಮಾಡುವ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಬಿಸಿ ಪಾಟೀಲ್‌ ಅವರು ನೀಡಿರುವ ಸಲಹೆಯ ಮೇರೆಗೆ ಸಿನಿ ಮಾಡಲು ನಿರ್ಧಾರ ಮಾಡಿದ್ದಾರೆ.

ಎಂಟಿಬಿ ನಾಗರಾಜ್ ಅವರು ಈಗಾಗಲೇ ಸಾವಿರ ಕೋಟಿ ಒಡೆಯ ಎಂದೇ ಪ್ರಸಿದ್ಧರಾಗಿದ್ದಾರೆ. ಅದೂ ಅಲ್ಲದೆ ಅವರು ಕೆಲವು ದಿನಗಳ‌ ಹಿಂದೆ ಕೋಟಿ ಗಟ್ಟಲೆ ಬೆಲೆಬಾಳುವ ರೋಲ್ಸ್‌ ರಾಯ್ಸ್‌ ಕಾರು ಖರೀದಿಸಿ , ಅದು ಮಾದ್ಯಮಗಳಲ್ಲಿ ಸುದ್ದಿಯಾಗಿತ್ತು. ಅದಾದ ನಂತರ ಈಗ ಮತ್ತೊಮ್ಮೆ ಸ್ಯಾಂಡಲ್ ವುಡ್ ಗೆ ಪ್ರವೇಶ ಮಾಡುತ್ತಿದ್ದಾರೆ ಎಂಬ ವಿಷಯದೊಂದಿಗೆ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here