ಪ್ರತಿವಾರ ಕನ್ನಡದಲ್ಲಿ ಹಲವು ಚಿತ್ರಗಳು ಬಿಡುಗಡೆ ಆದರೂ ಕೂಡಾ ಅದರಲ್ಲಿ ಗೆಲ್ಲುವ ಸಿನಿಮಾಗಳ ಸಂಖ್ಯೆ ಬೆರಳಿಣಿಕೆ. ಕನ್ನಡದಲ್ಲಿ ಉತ್ತಮ ಸಿನಿಮಾಗಳು ಬರುವುದಿಲ್ಲವೆಂದು ದೂರುವ ಮಂದಿ, ಸಿನಿಮಾ ಬಂದಾಗ ಅವುಗಳನ್ನು ನೋಡಿ ಪ್ರೋತ್ಸಾಹ ನೀಡಿದಾಗ ಮಾತ್ರ ಅವು ಮತ್ತಷ್ಟು ಉತ್ತಮ ಪ್ರತಿಕ್ರಿಯೆ ಪಡೆದು ಮುಂದೆ ಅಂತಹ ಇನ್ನಷ್ಟು ಸಿನಿಮಾ‌ ಮಾಡಲು ಸ್ಪೂರ್ತಿಯಾಗುತ್ತದೆ. ಆದರೆ ಹಲವು ಸಂದರ್ಭಗಳಲ್ಲಿ ಪ್ರೇಕ್ಷಕರು ಸಿನಿಮಾ ಕಡೆ ಬರದೇ ಹೋಗುವುದು, ಪರ ಭಾಷೆ ಸಿನಿಮಾಗಳ ಹಾವಳಿಯಿಂದ ಅತ್ಯುತ್ತಮ ಕನ್ನಡ ಚಿತ್ರಗಳು ಬೇಗ ಚಿತ್ರಮಂದಿರಗಳಿಂದ ಕಣ್ಮರೆಯಾಗುತ್ತಿವೆ. ಆದರೆ ಈಗ ಸ್ಟಾರ್ ನಟರು ಇದರ ಪರವಾಗಿ ದನಿ ಎತ್ತಿದ್ದಾರೆ.

ಉತ್ತಮ ಚಿತ್ರಗಳು ಸೋಲಬಾರದೆಂದು ಸ್ಯಾಂಡಲ್ ವುಡ್ ನ ಸ್ಟಾರ್ ನಟರು ಆ ಇತ್ತೀಚಿಗೆ ಬಂದಿರುವ ಉತ್ತಮ ಸಿನಿಮಾಗಳ ದನಿಯಾಗಿದ್ದು, ತಾವು ಆ ಸಿನಿಮಾಗಳನ್ನು ನೋಡುವಂತೆ ಪ್ರೇಕ್ಷಕರಲ್ಲಿ ಮನವಿ ಮಾಡುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದ “ದಿಯಾ” ಸಿನಿಮಾ ಚಿತ್ರಮಂದಿರದಿಂದ ಎತ್ತಂಗಡಿ ಆಗಿದ್ದಕ್ಕೆ ಸ್ಟಾರ್ ನಟರಾದ ರಕ್ಷಿತ್ ಶೆಟ್ಟಿ, ರಾಕಿಂಗ್ ಸ್ಟಾರ್ ಯಶ್, ಶ್ರಿ ಮುರಳಿ, ನಿರ್ದೇಶಕ ಪ್ರಶಾಂತ್ ನೀಲ್ ಅವರು ಈ ಸಿನಿಮಾ ಬೆಂಬಲಕ್ಕೆ ನಿಂತಿದ್ದಾರೆ. ಸಿನಿಮಾ ನೋಡುವಂತೆ ಜನರಿಗೆ ಮನವಿ ಮಾಡಿದ್ದಾರೆ.

ಡಾರ್ಲಿಂಗ್ ಕೃಷ್ಣ ಅವರ ಲವ್ ಮಾಕ್ಟೇಲ್ ಸಿನಿಮಾ ಕೂಡಾ ಹೀಗೆ ಉತ್ತಮ ಪ್ರತಿಕ್ರಿಯೆ ಪಡೆಯುವಾಗಲೇ ಸಿನಿಮಾ ಮಂದಿರಗಳಿಂದ ಕಾಣೆಯಾದಾಗ ಕಿಚ್ಚ ಸುದೀಪ್ ಅವರು ಟ್ವಿಟರ್ ಮೂಲಕ ತಮ್ಮ ಅಸಮಾಧಾನ ಹೊರಹಾಕಿದರೆ, ನಂತರ ರಿಯಲ್ ಸ್ಟಾರ್ ಉಪೇಂದ್ರ ಅವರು ಕೂಡಾ ಇದಕ್ಕೆ ಬೆಂಬಲ ನೀಡಿದ್ದಾರೆ. ವಿಜಯ್ ರಾಘವೇಂದ್ರ ಅವರ ಹೊಸ ಗೆಟಪ್ ನ ಮಾಲ್ಗುಡಿ ಡೇಸ್ ಗೂ ಹೀಗೆ ಆಗಿದ್ದು ಪುನೀತ್ ರಾಜ್‍ಕುಮಾರ್, ಶಿವರಾಜ್ ಕುಮಾರ್ ಅವರು ಕೂಡಾ ತಮ್ಮ ಬೆಂಬಲ ನೀಡಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಇದು ನಿಜಕ್ಕೂ ಒಂದು ಉತ್ತಮ ಬೆಳವಣಿಗೆ ಎನ್ನಬಹುದು. ಇನ್ನು ಪ್ರಜ್ವಲ್ ದೇವರಾಜ್ ಅಭಿನಯದ ಜಂಟಲ್ ಮ್ಯಾನ್ ಚಿತ್ರಕ್ಕೆ ದರ್ಶನ್, ರಕ್ಷಿತ್ ಶೆಟ್ಟಿ ಸೇರಿ ಹಲವಾರು ನಟರು ಸಿನಿಮಾ ನೋಡುವಂತೆ ಅಭಿಮಾನಿಗಳಿಗೆ ಕೇಳಿಕೊಂಡಿದ್ದಾರೆ.

ಇದು ಹೀಗೆ ಮುಂದುವರೆದರೆ ನಿಜಕ್ಕೂ ಕನ್ನಡದ ಉತ್ತಮ ಚಿತ್ರಗಳಿಗೆ ಅನ್ಯಾಯವಾಗುವುದಿಲ್ಲ.ಆದರೆ ಈ ನಾಲ್ಕು ಚಿತ್ರಗಳನ್ನು ಕನ್ನಡ ಸಿನಿಮಾ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಹೋಗಿ ನೋಡಿ ಗೆಲ್ಲಿಸಬೇಕಿದೆ. ವಿಶೇಷ ಎಂದರೆ ಒಂದೇ ಬಾರಿ ನಾಲ್ಕು ಸಿನಿಮಾಗಳು ಚಿತ್ರಮಂದಿರಗಲ್ಲಿ ಪ್ರದರ್ಶಿತವಾಗುತ್ತಿದ್ದು ಅದ್ಭುತ ಎನ್ನುವಂತ ವಿಮರ್ಶೆ ಪಡೆದಿವೆ. ಆದರೆ ಇಂತಹ ಅಪರೂಪದ ಚಿತ್ರಗಳನ್ನು ಗೆಲ್ಲಿಸುವುದು ಕನ್ನಡಿಗರ ಜವಾಬ್ದಾರಿ ಆಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here