ರವಿಚಂದ್ರನ್ ಅವರ ಜೊತೆ ಶ್ರೀರಾಮಚಂದ್ರ, ಹ್ಯಾಟ್ರಿಕ್ ಹೀರೋ ಶಿವಣ್ಣನ ಜೊತೆ ಗಡಿಬಿಡಿ ಅಳಿಯ ಸಿನಿಮಾಗಳಲ್ಲಿ ನಟಿಸಿದ್ದ ನಟಿ ಮೋಹಿನಿ ಯನ್ನು ಯಾರು ಹೇಗೆ ತಾನೇ ಮರೆಯಲು ಸಾಧ್ಯ. ತನ್ನ ಮೋಹಕ ಕಣ್ಣುಗಳಿಂದ, ಮುದ‌ ನೀಡುವ ನಟನೆಯಿಂದ ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಮಲೆಯಾಳಂ ನಲ್ಲಿ ಕೂಡಾ ಹೆಸರಾದ ನಟಿ ಮೋಹಿನಿ. ಈಕೆ ಹುಟ್ಟಿದ್ದು ಬ್ರಾಹ್ಮಣ ಕುಟುಂಬದಲ್ಲಿ. ಮೂಲ ಹೆಸರು ಮಹಾಲಕ್ಷ್ಮಿ ಶ್ರೀನಿವಾಸನ್. ಆದರೆ ಸಿನಿಮಾ ರಂಗಕ್ಕೆ ಪರಿಚಯವಾದ ಮೇಲೆ ಅವರ ಹೆಸರು ಮೋಹಿನಿ ಎಂದು ಬದಲಾಯಿತು. ಆದರೆ ಈಗ ಅವರು ಮೋಹಿನಿಯಾಗಿಲ್ಲ.‌ ಬದಲಿಗೆ ಮೋಹಿನಿ ಕ್ರಿಸ್ಟಿನಾ ಶ್ರೀನಿವಾಸನ್ ಹೆಸರಿನಿಂದ ಗುರುತಿಸಲ್ಪಡುತ್ತಾರೆ.

ನಟಿ ಮೋಹಿನಿ ದಕ್ಷಿಣದ ಸುಮಾರು 100 ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು 1999 ರಲ್ಲಿ ಭರತ್ ಅವರನ್ನು ಮದುವೆಯಾದರು. ಅವರು ಇಬ್ಬರು ಗಂಡು ಮಕ್ಕಳ‌ ತಾಯಿ.‌ ಮೊದಲ ಮಗ ಅನಿರುದ್ ನಿಗೆ ಈಗ 17 ವರ್ಷ. ಎರಡನೆಯ ಮಗ ಅದ್ವೈತ್. ಮದುವೆಯ ನಂತರ ಅಮೆರಿಕಾಗೆ ತೆರಳಿದ ಮೋಹಿನಿಯವರು ಅಲ್ಲೆ ನೆಲೆಯೂರಿದವರು. ಆದರೆ
ಅಲ್ಲಿ ಅವರಿಗೆ ಕೆಲವು ದೈಹಿಕವಾಗಿ ತೊಂದರೆಯಾಗಿ, ಒಂದು ಹಂತದಲ್ಲಿ ಗಂಡನ ಮನೆಯವರು ಆಕೆಗೆ ವಿಚ್ಛೇದನ ನೀಡುವಂತೆ ಭರತ್ ಅವರಿಗೆ ಹೇಳಿದರು. ಅನಂತರ ಅವರ ಪತಿ ಹಾಗೂ ಮೋಹಿನಿ ಇಬ್ಬರೂ ಭಾರತಕ್ಕೆ ಮರಳುವ ತೀರ್ಮಾನ ಮಾಡಿದರು.

ಜೀವನದಲ್ಲಿ ಏನೋ‌ ಕಳೆದುಕೊಂಡಂತೆ, ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಮೋಹಿನಿಯವರಿಗೆ, ಸಂಸಾರದಲ್ಲಿ ಉಂಟಾದ ಏರು ಪೇರುಗಳು ಮಾನಸಿಕವಾಗಿ ಕುಗ್ಗಿಸಿತ್ತು. ಕೇರಳದಲ್ಲಿ ಕ್ಯಾಥೋಲಿಕ್ ಚರ್ಚ್ ಗಳ ಭೇಟಿ ಮಾನಸಿಕ ಹಾಗೂ ದೈಹಿಕ ಶಾಂತಿಯನ್ನು ನೀಡಿತು. ಕುಟುಂಬದ ಸ್ಥಿತಿ ಬದಲಾಯಿತು.ಅವರು ಕೊನೆಗೆ ಹಿಂದೂ ಧರ್ಮದಿಂದ 2006 ರಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡರು. ಅಂದಿನಿಂದ ಮೋಹಿನಿ ಕ್ರಿಸ್ಟೀನಾ ಶ್ರೀನಿವಾಸನ್ ಆಗಿದ್ದಾರೆ. ಅಲ್ಲದೆ ಧರ್ಮದಲ್ಲಿ ತಿಳಿಸಿದ ಕೆಲವು ವಿಷಯಗಳ ಅಧ್ಯಯನ ಮಾಡಿದ ಅವರು ಪ್ರಸ್ತುತ ಅಸಹಾಯಕರಾದ, ಮಾನಸಿಕವಾಗಿ , ದೈಹಿಕವಾಗಿ ನೊಂದ ಹೆಣ್ಣು ಮಕ್ಕಳಿಗೆ ಕೌನ್ಸಿಲಿಂಗ್ ನಡೆಸುವ ಉತ್ತಮ ಸೇವೆಯನ್ನು ಮಾಡುತ್ತಿದ್ದಾರೆ. ಅವರ ಪತಿ ಆಕೆ ಧರ್ಮ ಬದಲಿಸಿದ್ದನ್ನು ವಿರೋಧಿಸಲಿಲ್ಲ. ಅಲ್ಲದೆ ಪತ್ನಿಯಲ್ಲಾದ ಮಹತ್ವದ ಬದಲಾವಣೆ ನೋಡಿ ಅವರು ಕೂಡಾ ಕ್ಯಾಥೋಲಿಕ್ ಆಗಿ ಪರಿವರ್ತನೆ ಹೊಂದಿದ್ದಾರೆ. ಧರ್ಮ ಯಾವುದೇ ಆದರೂ ಮೋಹಿನಿ ಅವರು ಅಸಹಾಯಕತೆ ಹೆಣ್ಣು ಮಕ್ಕಳ ಪಾಲಿಗೆ ಆಶಾ ಕಿರಣವಾಗಿದ್ದಾರೆ.ಸುದ್ದಿಮನೆ

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here