ಸ್ಯಾಂಡಲ್‍ವುಡ್ ನಟಿ ವಿಜಯಲಕ್ಷ್ಮೀ ಅವರಿಗೆ ಆರೋಗ್ಯ ಸಮಸ್ಯೆಯ ಕಾರಣದಿಂದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಷಯ ಎಲ್ಲರಿಗೂ ತಿಳಿದಿದೆ. ಅಲ್ಲದೆ ಅವರ ಸಹೋದರಿ ಆರ್ಥಿಕ ನೆರವನ್ನು ಕೋರಿದ್ದರು. ಅದಾದ ನಂತರ ಚಿತ್ರರಂಗದ ಕೆಲವರು ಆಸ್ಪತ್ರೆಗೆ ಭೇಟಿ ನೀಡಿ ಅವರಿಗೆ ಸಹಾಯ ಹಸ್ತವನ್ನು ಚಾಚಿದ್ದರು. ಸುದೀಪ್ ಹಾಗೂ ಮುರುಳಿ ಇಬ್ಬರೂ ನಾಯಕ ನಟರು ವಿಜಯಲಕ್ಷ್ಮಿ ಅವರನ್ನು ಭೇಟಿ ಮಾಡಿದ್ದರು‌. ಈ ಎಲ್ಲಾ ಸಂಗತಿಗಳ ಮಧ್ಯೆ ಈಗ ವಿಜಯಲಕ್ಷ್ಮಿ ತಮಗೆ ನಟನೊಬ್ಬನಿಂದ ಲೈಂಗಿಕ ಕಿರುಕುಳ ಉಂಟಾಗುತ್ತಿದೆ ಎಂದು ಆರೋಪ ಮಾಡುತ್ತಾ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಅವರ ಈ ಸಂಚಲನ ಹೇಳಿಕೆ ಎಲ್ಲರ ಗಮನವನ್ನು ತನ್ನತ್ತ ಸೆಳೆದಿದೆ. ಇಂತಹ ಒಂದು ದೂರನ್ನು ಯಾರೊಬ್ಬರೂ ನಿರೀಕ್ಷೆ ಮಾಡಿರಲಿಲ್ಲ ಎಂದೇ ಹೇಳಬಹುದಾಗಿದೆ.

ವಿಜಯಲಕ್ಷ್ಮಿ ಅವರು ಸದ್ಯಕ್ಕೆ ದೂರು ನೀಡಿರುವ ಆ ನಟನ ಹೆಸರು ರವಿಪ್ರಕಾಶ್. ಅವರ ವಿರುದ್ಧವೇ ವಿಜಯಲಕ್ಷ್ಮೀ ಲೈಂಗಿಕ ಕಿರುಕುಳದ ಆರೋಪವನ್ನು ಹೊರಿಸಿದ್ದಾರೆ. ಕೇವಲ ಆರೋಪವಷ್ಟೇ ಅಲ್ಲದೇ ಅದಕ್ಕೆ ಸಂಬಂಧಿಸಿದಂತೆ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ರವಿಪ್ರಕಾಶ್ ವಿರುದ್ಧ ದೂರು ಕೂಡಾ ನೀಡಿದ್ದಾರೆ ನಟಿ ವಿಜಯಲಕ್ಷ್ಮಿ ಅವರು. ನಾನು ಕಳೆದ ಕೆಲ ದಿನಗಳಿಂದ ಆನಾರೋಗ್ಯ ಸಮಸ್ಯೆಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರ್ಥಿಕ ಸಮಸ್ಯೆಯಿಂದಾಗಿ ನನಗೆ ಹಣಕಾಸಿನ ನೆರವು ನೀಡಿ ಅಂತ ಸ್ಯಾಂಡಲ್‍ವುಡ್ ನ ಸ್ಟಾರ್ ನಟರಿಗೆ ಮನವಿ ಮಾಡಿಕೊಂಡಿದ್ದೆ. ಅದಕ್ಕೆ ಪ್ರತಿಕ್ರಿಯೆ ನೀಡಿದ ನಟ ರವಿಪ್ರಕಾಶ್ ಅವರು ಫೆಬ್ರವರಿ 27ರಂದು ಮಲ್ಯ ಆಸ್ಪತ್ರೆಗೆ ಬಂದು, ನನಗೆ ಒಂದು ಲಕ್ಷ ನಗದು ಸೇರಿದಂತೆ ಅವಶ್ಯವಿರುವ ಬಟ್ಟೆ, ಊಟ, ತಿಂಡಿ ಸೇರಿದಂತೆ ಅವಶ್ಯಕ ವಸ್ತುಗಳನ್ನು ನೀಡಿದ್ದರು.

ಆದರೆ ಇದಾದ ನಂತರ ಅವರು ಪ್ರತಿದಿನ ಆಸ್ಪತ್ರೆಯ ಐಸಿಯೂಗೆ ಬರುವುದು, ಪದೇ ಪದೇ ನನಗೆ ಫೋನ್ ಹಾಗೂ ಮಸೇಜ್ ಮಾಡುವುದದು ಸೇರಿದಂತೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂಬುದು ಈಗ ನಟಿ ಮಾಡಿರುವ ಆರೋಪವಾಗಿದೆ. ರಚಿಪ್ರಕಾಶ್ ಅವರ ಮೇಲೆ ದೂರು ದಾಖಲಾದ ಹಿನ್ನೆಲೆಯಲ್ಲಿ ಅದನ್ನು ತಿಳಿದ ನಟ ಶಾಕ್ ಆಗಿದ್ದಾರೆ. ಮಾಧ್ಯಮಗಳಲ್ಲಿ ತನಗೆ ಹಣದ ಸಹಾಯ ಮಾಡಿ ಅಂತಾ ಕೇಳುತ್ತಿದ್ದ ವಿಡಿಯೋ ನೋಡಿ, ಅವರಿಗೆ ಏನಾದರೂ ಸಹಾಯವಾಗಲಿ ಎಂದು ಒಂದು ಲಕ್ಷ ಹಣ ಸಹಾಯ ಮಾಡಿದೆ. ಅವರಿಗೆ ಹಾಕೋಕೆ ಬಟ್ಟೆ ಸಹ ಇರಲಿಲ್ಲ. ಆದರೆ ಸಂಕಷ್ಟದಲ್ಲಿದ್ದ ಅವರಿಗೆ ಊಟ, ಬಟ್ಟೆ, ಹಣ್ಣು, ಮಾತ್ರೆ ಎಂದು ಸಹಾಯ ಮಾಡಿದೆ. ಅವರ ಬಳಿ ಮಾತಾಡಿರೋ ಕಾಲ್ ರಿಕಾರ್ಡ್, ಮಸೇಜ್‍ಗಳು, ಎಲ್ಲಾ ಇರಬಹುದು. ಆದರೆ ನನಗೆ ಯಾವುದೇ ಕೆಟ್ಟ ಆಲೋಚನೆಯಂತೂ ಇಲ್ಲ. ಕೇವಲ ಕಷ್ಟದಲ್ಲಿದ್ದಾರೆ ಎಂದು ಸಹಾಯ ಮಾಡಿದೆ. ಅವರ ಯೋಗ ಕ್ಷೇಮ ವಿಚಾರಿಸಿದೆ ಇದೇ ತಪ್ಪಾಯಿತೆ? ಎಂದು ರವಿ ಪ್ರಕಾಶ್ ಅವರು ಹೇಳಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here