ಜೀ ಕನ್ನಡ ವಾಹಿನಿಯ ಸರಿಗಮಪ ಸಿಂಗಿಂಗ್ ರಿಯಾಲಿಟಿ ಶೋ ಹಲವು ಕಾರಣಗಳಿಗೆ ಜನರ ಮೆಚ್ಚುಗೆ ಪಡೆದಿದೆ. ಇದು ಕೇವಲ ಮನರಂಜನೆಯ ವೇದಿಕೆಯಾಗಿಲ್ಲ, ಪ್ರತಿಭಾವಂತರ ಪ್ರತಿಭೆಯನ್ನು ಹೊರಹಾಕುವ, ಅವಕಾಶಗಳ ಹಾದಿಯನ್ನು ಅವರಿಗೆ ತೋರುವ ಕಾರ್ಯಕ್ರಮ ಆಗಿರುವ ಜೊತೆಜೊತೆಗೆ ಈ ವೇದಿಕೆಯು ಹಲವು ಬಾರಿ ಭಾವನಾತ್ಮಕ ಆಗಿ ಬಿಡುತ್ತದೆ ಹಾಗೂ ಜನರಲ್ಲಿ ಒಂದು ಸ್ಪೂರ್ತಿ ಹಾಗೂ ಪ್ರೇರಣೆಯನ್ನು ಕೂಡಾ ತುಂಬುವಲ್ಲಿ ತನ್ನ ಪಾತ್ರವನ್ನು ವಹಿಸ್ತಾ ಇದೆ ಅನ್ನೋದು ಬಹಳಷ್ಟು ಜನರಿಗೆ ಈಗಾಗಲೇ ಅನುಭವಕ್ಕೆ ಬಂದಿದೆ. ಈಗ ಈ ವೇದಿಕೆ ಮತ್ತೊಮ್ಮೆ ಅಂತದ್ದೇ ಒಂದು ಭಾವನಾತ್ಮಕ ಸನ್ನಿವೇಶಕ್ಕೆ ಸಾಕ್ಷಿಯಾಗಿದೆ‌.

ಈ ಬಾರಿಯ ಸರಿಗಮಪ‌ ಲಿಟಲ್ ಚಾಂಪ್ಸ್ ನಲ್ಲಿ ಹಲವು ಪ್ರತಿಭಾವಂತ ಮಕ್ಕಳು ಇದ್ದಾರೆ. ಅದರಲ್ಲಿ ದೃಷ್ಟಿ ಚೇತನಳಾದ ಸಂಗೀತ ಕೂಡಾ ಒಬ್ಬರು. ಆ ಹುಡುಗಿ ವಯಸ್ಸು ಹದಿನಾಲ್ಕಾದರೂ ಆಕೆ ಹೇಳಿದ ವಿಷಯ ಮಾತ್ರ ಪ್ರತಿಯೊಬ್ಬರು ತಲೆ ಬಾಗುವಂತದ್ದು. ಸರಿಗಮಪ ಕಾರ್ಯಕ್ರಮದವರೇ ನಾರಾಯಣ ನೇತ್ರಾಲಯದ ವತಿಯಿಂದ ಸಂಗೀತಳಿಗೆ ದೃಷ್ಟಿ ಮತ್ತೆ ಬರೋದಿಕ್ಕೆ ಅವಕಾಶ ಇದೆಯಾ ಅಂತ ವೈದ್ಯಕೀಯ ಪರೀಕ್ಷೆ ಮಾಡಿಸಿದ್ದರು. ಅಲ್ಲಿನ ವೈದ್ಯರಾದ ಭುಜಂಗ ಶೆಟ್ಟಿ ಯವರು ಆ ಬಾಲಕಿಗೆ ದೃಷ್ಟಿ ನರ ಬೆಳವಣಿಗೆ ಆಗದ ಕಾರಣ ದೃಷ್ಟಿ ಬರೋ ಅವಕಾಶಗಳಿಲ್ಲ ಎಂದರು. ಆಗ ನಿರೂಪಕಿಯಾದ ಅನುಶ್ರೀ ಅವರು ಸಂಗೀತಳನ್ನು ಬೇಸರ ಆಯ್ತಾ ಎಂದಾಗ , ಆ ಬಾಲಕಿ ಹೇಳಿದ ಮಾತು ಕೇಳಗರಿಗೆ ರೋಮಾಂಚನ ಉಂಟು ಮಾಡಿತು.

ಸಂಗೀತ ಮಾತನಾಡುತ್ತಾ ನನಗೆ ದೃಷ್ಟಿ ಬರಲ್ಲ ಅನ್ನೋ ಬೇಜಾರೇನಿಲ್ಲ, ನನಗೆ ಈ ವೇದಿಕೆ ಸಿಕ್ಕಿದೆ ಅಷ್ಟು ಸಾಕು ಎಂದರು. ನಂತರ ಆ ಬಾಲಕಿ ನಮ್ಮಂತಹ ಅಂಧರು ಬಹಳಷ್ಟು ಜನ ಇರ್ತಾರೆ, ಅದಕ್ಕೆ ನಿಮ್ಮಲ್ಲಿ ವಿನಂತಿ ಮಾಡ್ಕೊಳ್ತೀನಿ , ನೀವು ಆ ಅಂಧರಿಗೆ ನೇತ್ರದಾನ ಮಾಡಿ, ನಾನು ನೋಡದಿದ್ದರೂ ಪರವಾಗಿಲ್ಲ, ಅವರು ಈ ಜಗತ್ತನ್ನು ನೋಡಲಿ ಎಂದು ಎಲ್ಲರಲ್ಲಿ ವಿನಂತಿ ಮಾಡಿಕೊಂಡಾಗ ಅಲ್ಲಿ ನೆರೆದಿದ್ದ ಎಲ್ಲರೂ ಎದ್ದು ನಿಂತು ಚಪ್ಪಾಳೆ ಹೊಡೆಯೋ ಮೂಲಕ ಆ ಬಾಲಕಿಗೆ ಮಾತುಗಳಿಗೆ ಅಭಿನಂದನೆ ಸಲ್ಲಸಿದರು. ನೇತ್ರದಾನ ಮಹಾದಾನ ಎಂಬುದನ್ನು ಎಲ್ಲರೂ ಕೂಡಾ ಅರಿತು ಕೊಳ್ಳಬೇಕು.

'ರಾಜ್ ಗಾನಸುಧೆ' ಯಲ್ಲಿ ನಶಿಸಿ ಹೋಗುವ ಮುನ್ನ ನೇತ್ರದಾನ ಮಾಡಿ ಎಂದು ಎಲ್ಲರಿಗೂ ಸ್ಫೂರ್ತಿ ತುಂಬಿದ ಸಂಗೀತಾ.#ZeeKannada #SarigamapaLilChamps16 ಇಂದು ರಾತ್ರಿ 8ಕ್ಕೆ.

Zee Kannada यांनी वर पोस्ट केले रविवार, २८ एप्रिल, २०१९

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here