ಸಂಜಯ್ ನಗರ ಪೊಲೀಸ್ ಮೇಲೆ ಹಲ್ಲೆ ಮಾಡಿದ್ದ ತಾಜುದ್ದೀನ್ ಇವತ್ತು ಬೆಳಗ್ಗೆ ಮತ್ತೆ ಪೊಲೀಸರಿಗೆ ಕೈ ಮಾಡಿ ಎಸ್ಕೇಪ್ ಆಗೋಕೆ ಟ್ರೈ ಮಾಡಿದ್ದಾನೆ… ಜೀವ ರಕ್ಷಣೆಗೆ ಪೊಲೀಸರು ಕಾಲಿಗೆ ಗುಂಡು ಹಾರಿಸಿದ್ದಾರೆ…

ತಾಜುದ್ದೀನ್‌ನನ್ನು ಗುರುವಾರ ನಸುಕಿನಲ್ಲಿ ಘಟನಾ ಸ್ಥಳಕ್ಕೆ ಕರೆದೊಯ್ದು ಮಹಜರು ನಡೆಸುವ ವೇಳೆ ಆತ ಪರಾರಿಯಾಗಲು ಯತ್ನಿಸಿದ. ಸ್ವಲ್ಪ ದೂರ ಓಡಿದ ಆರೋಪಿಯನ್ನು ಬಂಧಿಸಲು ಹೋದ ಪೊಲೀಸರ ಮೇಲೆ, ಆತ ಕಲ್ಲು ಮತ್ತು ಇಟ್ಟಿಗೆ  ತುಂಡುಗಳನ್ನು ಎಸೆದಿದ್ದಾನೆ.

ಈ ವೇಳೆ ಪಿಎಸ್ಐ ರೂಪಾ ಮತ್ತು ಹೆಡ್ ಕಾನ್‌ಸ್ಟೆಬಲ್ ಮಂಜಣ್ಞ ಅವರ ಮೇಲೆ ಆರೋಪಿ ಹಲ್ಲೆ ನಡೆಸಿದ್ದಾನೆ.

ತಕ್ಷಣ ಸಂಜಯನಗರ ಇನ್‌ಸ್ಪೆಕ್ಟರ್ ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿದ್ದಾರೆ. ಆದರೂ  ಆರೋಪಿ ಶರಣಾಗದಿದ್ದಾಗ ಎಡಗಾಲಿಗೆ ಗುಂಡು ಹೊಡೆದಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here