ಜೂನ್ 15 ರಂದು ಚೀನಾ ಸೈನಿಕರ ವಿರುದ್ಧ ಲಡಾಖ್ ಗಡಿಯಲ್ಲಿ ತಾಯ್ನಾಡಿನ ರಕ್ಷಣೆಯನ್ನು ಮಾಡುವ ಧ್ಯೇಯದೊಂದಿಗೆ ಹೋರಾಟ ಮಾಡಿದ ಭಾರತೀಯ ವೀರ ಯೋಧರು ಆ ಘರ್ಷಣೆಯಲ್ಲಿ ವೀರ ಮರಣ ಹೊಂದಿದ್ದರು. ಅದರಲ್ಲಿ ಒಬ್ಬರು ತೆಲಂಗಾಣದ ಕರ್ನಲ್​ ಸಂತೋಷ್​ ಬಾಬು ಕೂಡಾ ಒಬ್ಬರು. ದೇಶಕ್ಕಾಗಿ ಜೀವವನ್ನೇ ಕೊಟ್ಟ ಆ ಯೋಧನ ಕುಟುಂಬಕ್ಕೆ ಈಗ ಸರ್ಕಾರವು ಆಸರೆಯಾಗಬೇಕಿದೆ. ಈ ಹಿನ್ನೆಲೆಯಲ್ಲಿ ತೆಲಂಗಾಣ ಸರ್ಕಾರವು ಕೂಡಾ ತನ್ನ ಬಾದ್ಯತೆಯನ್ನು ನಿರ್ವಹಣೆ ಮಾಡಲು ಮುಂದಾಗಿದೆ. ವೀರ ಯೋಧನ ಕುಟುಂಬಕ್ಕೆ ಆಸರೆಯಾಗಿದೆ.‌

ತೆಲಂಗಾಣ ಸರ್ಕಾರವು ವೀರ ಯೋಧ ಸಂತೋಷ್ ಬಾಬು ಅವರ ಪತ್ನಿ ಸಂತೋಷಿಗೆ ಡೆಪ್ಯೂಟಿ ಕಲೆಕ್ಟರ್ ಹುದ್ದೆಯನ್ನ ನೀಡಿ ಆದೇಶವನ್ನು ಹೊರಡಿಸಿದೆ. ಕೆಲವೇ ದಿನಗಳ ಹಿಂದೆಯಷ್ಟೇ ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ಬಾಬು ಅವರು ಕರ್ನಲ್ ಸಂತೋಷ್ ಬಾಬು ಅವರ ಕುಟುಂಬಕ್ಕೆ ಐದು ಕೋಟಿ ರೂಗಳ ಪರಿಹಾರವನ್ನು ಘೋಷಣೆ ಮಾಡಿದ್ದರು. ಅದೇ ಸಂದರ್ಭದಲ್ಲಿ ಕುಟುಂಬದ ಒಬ್ಬರು ಸದಸ್ಯರಿಗೆ ಸರ್ಕಾರಿ ಕೆಲಸವನ್ನು ನೀಡುವುದಾಗಿ ಹಾಗೂ ಕೃಷಿ ಭೂಮಿಯನ್ನು ಕೂಡಾ ನೀಡುವ ಭರವಸೆಯನ್ನು ಅವರು ನೀಡಿದ್ದರು.

ಕೊಟ್ಟ ಮಾತಿನಂತೆ ಇದೀಗ ತೆಲಂಗಾಣ ಸರ್ಕಾರವು
ಶ್ರೀಮತಿ ಸಂತೋಷಿ ಅವರನ್ನು ಗ್ರೂಪ್ I ಅಧಿಕಾರಿಯಾಗಿ, ಸೂರ್ಯ ಪೇಟೆ ಜಿಲ್ಲೆಯ ಡೆಪ್ಯುಟಿ ಕಮೀಷನರ್ ಆಗಿ ನೇಮಕ ಮಾಡುವ ಪತ್ರವನ್ನು ಸಿಎಂ ವೈಯಕ್ತಿಕವಾಗಿ ಹಸ್ತಾಂತರಿಸಿದ್ದು, ಜೊತೆಗೆ ಹೈದರಾಬಾದಿನಲ್ಲಿ 711 sq. ಯಾರ್ಡ್ಸ್ ಜಾಗವನ್ನು ಕೂಡಾ ಹಸ್ತಾಂತರಿಸಿದ್ದಾರೆ. ಅಲ್ಲದೇ ಸಿಎಂ ರೂ. 4 ಕೋಟಿ ಚೆಕ್ಕನ್ನು ಸಂತೋಷಿ ಅವರಿಗೆ ಮತ್ತು ಒಂದು ಕೋಟಿ ರೂ. ಚೆಕ್ಕನ್ನು ಸಂತೋಷ್ ಅವರ ಪೋಷಕರಿಗೆ ನೀಡಿದ್ದಾರೆ. ಗಾಲ್ವಾನ್ ಕಣಿವೆಯಲ್ಲಿ ಇಂಡೋ ಚೀನಾ ನಡುವೆ ನಡೆದಂತಹ ಸಂಘರ್ಷದಲ್ಲಿ ಕರ್ನಲ್ ಸಂತೋಷ್ ಬಾಬು ಅವರನ್ನೂ ಸೇರಿದಂತೆ 20 ಜನ ಯೋಧರು ದೇಶ ರಕ್ಷಣೆಯಲ್ಲಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here