ಲಾಕ್ ಡೌನ್ ಆದಾಗಿನಿಂದ ಸ್ತಬ್ಧವಾಗಿದ್ದ ಕನ್ನಡ ಚಿತ್ರರಂಗದ ಚಟುವಟಿಕೆಗಳು ಇದೀಗ ಅನ್ಲಾಕ್ ಪ್ರಕ್ರಿಯೆ ಆರಂಭವಾದ ಮೇಲೆ ಒಂದೊಂದಾಗಿ ಆರಂಭವಾಗುತ್ತಿವೆ. ಸಿನಿಮಾ ಚಟುವಟಿಕೆಗಳು ಕೂಡಾ ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುವ ಮೂಲಕ ಚಿತ್ರೀಕರಣವು ನಡೆಯುತ್ತಿದೆ. ಈಗ ಒಂದೊಂದಾಗಿ ಹೊಸ ಹೊಸ ಸಿನಿಮಾಗಳ ಇಂಟರೆಸ್ಟಿಂಗ್ ಸುದ್ದಿಗಳು ಕೂಡಾ ಹೊರ ಬೀಳುತ್ತಿವೆ‌. ಅಂತಹುದೇ ಒಂದು ಹೊಸ ಸಿನಿಮಾ, ಹೊಸ ಸುದ್ದಿ ಈಗ ಬಂದಿದ್ದು, ಬರ್ಕ್ಲಿ ಸಿ‌ನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ.‌

ವಿಭಿನ್ನವಾದ ಹಾಗೂ ಒಂದು ಕ್ರೇಜ್ ಹುಟ್ಟು ಹಾಕುವ ಟೈಟಲ್ ನೊಂದಿಗೆ ಬರ್ತಾ ಇರೋ ಈ ಹೊಸ ಸಿನಿಮಾ ಬರ್ಕ್ಲಿಯಲ್ಲಿ, ಗಣಪ ಚಿತ್ರದ ನಂತರ ಸಂತೋಷ್ ಬಾಲರಾಜ್ ಒಂದು ವಿಭಿನ್ನವಾದ
ಅವತಾರದಲ್ಲಿ ಜನರನ್ನು ರಂಜಿಸಲು ಸಿದ್ಧವಾಗಿದ್ದಾರೆ.‌
ಇಂದು ಸ್ವಾತಂತ್ರ್ಯೋತ್ಸವದ ಸಂಭ್ರಮಕ್ಕೆ ಅಭಿಮಾನಿಗಳು ಹಾಗೂ ಚಿತ್ರ ರಸಿಕರಿಗೆ ಒಂದು ಅಪರೂಪದ ಕಾಣಿಕೆಯಾಗಿ ಬರ್ಕ್ಲಿ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಗಿದ್ದು, ಜನರಲ್ಲಿ ಈ ಸಿನಿಮಾ ಬಗ್ಗೆ ಹೊಸ ಹೊಸ ನಿರೀಕ್ಷೆಗಳನ್ನು ಹುಟ್ಟು ಹಾಕುತ್ತಿದೆ.‌

ಬರ್ಕ್ಲಿ ಸಿನಿಮಾ ಆನೇಕಲ್ ಬಾಲರಾಜ್ ಅವರ ಅದ್ದೂರಿ ನಿರ್ಮಾಣದಲ್ಲಿ ರೂಪ ಪಡೆಯುತ್ತಿದ್ದು, ಈ ಸಿ‌ನಿಮಾದ ನಿರ್ದೇಶನದ ಸಾರಥ್ಯವನ್ನು ವಹಿಸಿದ್ದಾರೆ  ಕಾಲಚಕ್ರ ಮೂಲಕ ಕುತೂಹಲ ಹುಟ್ಟಿಸಿರುವ ನಿರ್ದೇಶಕ ಸುಮನ್ ಕ್ರಾಂತಿ ಅವರು . ಹೆಸರೇ ಡಿಫರೆಂಟ್ ಅಂಡ್ ಅಟ್ರಾಕ್ಟಿವ್ ಆಗಿರುವ ಬರ್ಕ್ಲಿ ಚಿತ್ರದಲ್ಲಿ ನಟ ಸಂತೋಷ್ ಬಾಲರಾಜ್ ಕೂಡಾ ಡಿಫರೆಂಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಒಟ್ಟಾರೆ ಪೋಸ್ಟರ್ ಬಹಳ ಆಕರ್ಷಕವಾಗಿದ್ದು, ಸಿನಿಮಾ ಬಗ್ಗೆ ಒಂದು ಕುತೂಹಲವನ್ನಂತೂ ಮೂಡಿಸಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here