ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ಒಬ್ಬ ವಿಕೃತ ಮನಸ್ಸಿನ ವ್ಯಕ್ತಿ ಎಂದು ವಾಗ್ದಾಳಿಯನ್ನು ನಡೆಸಿದ್ದಾರೆ ಬಿಜೆಪಿ ಶಾಸಕ ರೇಣುಕಾಚಾರ್ಯ ಅವರು. ನ್ಯಾಮತಿ ತಾಲೂಕಿನ ರಾಮತೀರ್ಥದಲ್ಲಿ ಮಾತನಾಡಿದ ರೇಣುಕಾಚಾರ್ಯ ಅವರು ಮಾಜಿ ರಾಜ್ಯಪಾಲ ಹಂಸರಾಜ್ ಅವರನ್ನು ಕೂಡಾ ಟೀಕಿಸುತ್ತಾ, ಅವರು ಹಂಸರಾಜ್ ಅಲ್ಲ ಬದಲಾಗಿ ಧ್ವಂಸರಾಜ್ ಎಂದು ಕರೆದಿದ್ದು, ಅಂದಿನ ಲೋಕಾಯುಕ್ತರಾಗಿದ್ದ ಸಂತೋಷ್ ಹೆಗ್ಡೆಯವರು ನೀಡಿದ ವರದಿಗೆ ಅನುಮತಿ ನೀಡಿ, ದುರುದ್ದೇಶದಿಂದ ಯಡಿಯೂರಪ್ಪನವರ ಮೇಲೆ ಕೇಸ್ ಹಾಕಿ ಜೈಲಿಗೆ ಹೋಗುವಂತೆ ಮಾಡಿದ್ದರೆಂದು ಅವರು ಟೀಕೆ ಮಾಡಿದ್ದಾರೆ.

ಬಿ.ಎಸ್.ಯಡಿಯೂರಪ್ಪನವರು ಯಾವುದೇ ಭ್ರಷ್ಟಾಚಾರ ಅಥವಾ ಲೂಟಿಯನ್ನು ಮಾಡಿಲ್ಲ.‌ ಆದರೆ ರಾಜಕೀಯ ಷಡ್ಯಂತ್ರ ಮಾಡಿ ಅವರನ್ನು ಅಂದು ಜೈಲಿಗೆ ಕಳುಹಿಸಲಾಗಿತ್ತು ಎಂದಿರುವ ರೇಣುಕಾಚಾರ್ಯ, ಅಂದು ಯಡಿಯೂರಪ್ಪನವರು ಜೈಲಿಗೆ ಹೋದಂತಹ ಸಂದರ್ಭದಲ್ಲಿ ಬಿಜೆಪಿಯವರು ಯಾವುದೇ ರೀತಿಯಲ್ಲಿ ಗಲಾಟೆ, ದೊಂಭಿಯನ್ನು ಮಾಡಲು ಮುಂದಾಗಲಿಲ್ಲ. ಆದರೆ ಇಂದು ಮಾಜಿ ಸಚಿವ ಡಿ.ಕೆ.ಸಚಿವ ಡಿ.ಕೆ.ಶಿವಕುಮಾರ್ ಬಂಧನ ಆಗಿದ್ದೇ , ಕಾಂಗ್ರೆಸ್‍ನವರು ಅದರ ವಿರುದ್ಧ ಪ್ರತಿಭಟನೆ ನಡೆಸಿ, ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡಿದ್ದಾರೆಂದು ದೂರು ನೀಡಿದ್ದಾರೆ ಎಂದು ಟೀಕೆ ಮಾಡಿದ್ದಾರೆ.

ಯಡಿಯೂರಪ್ಪನವರನ್ನು ಕಾಂಗ್ರೆಸ್ಸಿನವರು ಪದೇ ಪದೇ ಜೈಲಿಗೆ ಹೋಗಿ ಬಂದವರು ಎಂದು ಹೇಳುತ್ತಾರೆ. ಈಗ ಮಾಜಿ ಸಚಿವರಾದ ಚಿದಂಬರಂ ಕೂಡಾ ಜೈಲಿಗೆ ಹೋಗಿದ್ದಾರೆ. ಇನ್ನು ಮಾಜಿ ಸಚಿವ ಡಿಕೆ ಶಿವಕುಮಾರ್ ಅವರು ಕೂಡಾ ನನಗೆ ಒಬ್ಬ ಒಳ್ಳೆಯ ಸ್ನೇಹಿತರಿದ್ದಂತೆ. ಅವರು ಬಂಧಿಯಾಗಿರುವುದಕ್ಕೆ ನನಗೇನು ಸಂತೋಷವಿಲ್ಲ ಎಂದು ಅವರು ಹೇಳಿದ್ದಾರೆ. ಅಲ್ಲದೆ ಈಶ್ವರಪ್ಪನವರು ಉದ್ದಟತನ ತೋರುವ ವ್ಯಕ್ತಿಯಲ್ಲ, ಮಾದ್ಯಮಗಳು ಎಡವಿದ ವ್ಯಕ್ತಿಗಳನ್ನು ಮೇಲೆಕ್ಕೆತ್ತುವ ಕೆಲಸ ಮಾಡಬೇಕು ಎಂದು ಅವರು ಹೇಳಿದ್ದಾರೆ.‌

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here