ಏಕತೆಯ ಪ್ರತಿಮೆಯ ಅನಾವರಣ ಇಂದು ಆಗಿದೆ. ಹೌದು ಭಾರತೀಯತೆಯ ಏಕತೆ , ಐಕ್ಯತೆ ಹಾಗೂ ಸಮಗ್ರತೆಯನ್ನು ಸಾರುವ, ಜಗತ್ತಿನಲ್ಲೇ ಅತಿ ಎತ್ತರದ ಪ್ರತಿಮೆಯನ್ನು ಇಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆ ಮಾಡಿದ್ದಾರೆ. ಈ ಪ್ರತಿಮೆ ಮತ್ತಾರದ್ದೂ ಅಲ್ಲ, ಸ್ವತಂತ್ರ ನಂತರ 562 ದೇಶೀಯ ಸಂಸ್ಥಾನಗಳಾಗಿ ಹರಿದು ಹಂಚಿ ಹೋಗಿದ್ದ ಭಾರತವನ್ನು ಒಗ್ಗೂಡಿಸಿದ, ಸಂಸ್ಥಾನಗಳ ಆಡಳಿತವನ್ನು ಕೊನೆಗಳಿಸಿ, ಭಾರತ ಒಕ್ಕೂಟಕ್ಕೆ ಸೇರಿಸಿದ ಮಹತ್ಕಾರ್ಯವನ್ನು ತನ್ನ ದಕ್ಷತೆ, ದೂರದೃಷ್ಟಿ, ಶ್ರಮ ಹಾಗೂ ಕ್ಷಮತೆಯಿಂದ ಮಾಡಿದ ಭಾರತದ ಉಕ್ಕಿನ ಮನುಷ್ಯ ಎಂದೇ ಕರೆಯಲ್ಪಡುವ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಪ್ರತಿಮೆ. ಸ್ವಾತಂತ್ರ್ಯ ನಂತರದಲ್ಲಿ ಮೊದಲ ಬಾರಿಗೆ ಈ ರಾಷ್ಟ್ರೀಯ ನಾಯಕನಿಗೆ ಸರ್ಕಾರವೊಂದು ತನ್ನ ಗೌರವವನ್ನು ಈ ರೀತಿ ಸಲ್ಲಿಸುತ್ತಿದೆ.

ಗುಜರಾತಿನ ನದಿ ದ್ವೀಪವಾದ ಸಾಧು ಬೇಟ್ , ನರ್ಮದಾ ನದಿ ಕಣಿವೆ ಯೋಜನೆಯ ಬಳಿ ಇದ್ದು, ಈ ಪ್ರತಿಮೆಯ ಸ್ಥಾಪನೆಗೆ ಸುತ್ತಲ 20,000 ಚದರ ಮೀಟರ್ ಸ್ಥಳವನ್ನು ಬಳಸಿಕೊಳ್ಳಲಾಗಿದ್ದು, ಸುತ್ತಲೂ ಸುಮಾರು 12 ಚ.ಕಿಮೀ ಸ್ಥಳದಲ್ಲಿ ಕೃತಕವಾದ ಸರೋವರವನ್ನು ಕೂಡಾ ನಿರ್ಮಿಸಲಾಗಿದೆ. ಇನ್ನೂ ಈ ಸರೋವರದ ಮಧ್ಯೆ ನಿರ್ಮಾಣವಾಗಿರುವ ಈ ಪ್ರತಿಮೆಯು ಸುಮಾರು 184 ಮೀಟರ್ ಅಂದರೆ 597 ಅಡಿ ಎತ್ತರವಿದ್ದು, ಇದು ಜಗತ್ತಿನಲ್ಲೇ ಅತಿ ಎತ್ತರವಾದ ಪ್ರತಿಮೆ ಎಂಬ ಕೀರ್ತಿಗೆ ಪಾತ್ರವಾಗಿದೆ. ಲಾರ್ಸನ್ ಅಂಡ್ ಟರ್ಬೋ ಕಂಪನಿಯು ಈ ನಿರ್ಮಾಣದ ಜವಬ್ದಾರಿಯನ್ನು ವಹಿಸಿಕೊಂಡಿದ್ದು 2,989 ಕೋಟಿಗಳ ವೆಚ್ಚದಲ್ಲಿ ನಿರ್ಮಾಣವಾದ ಅದ್ಭುತವಾದ ಸ್ಥಳ ಇದಾಗಿದೆ. ರಾಮ್. ವಿ. ಸುತರ್ ಈ ನಿರ್ಮಾಣದ ವಿನ್ಯಾಸವನ್ನು ರಚಿಸಿದ್ದು, ನರೇಂದ್ರ ಮೋದಿಯವರು ಇದನ್ನು ಉದ್ಘಾಟನೆ ಮಾಡಿದ್ದಾರೆ.

ಅಕ್ಟೋಬರ್ 31 ಭಾರತದ ಇತಿಹಾಸದಲ್ಲಿ ಮರೆಯಲಾರದ ದಿನ. ಅಖಂಡ ಭಾರತ ನಿರ್ಮಾಣಕ್ಕೆ ಕಾರಣರಾದ ಮಹಾ ನಾಯಕ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮದಿನ. ರಾಷ್ಟ್ರವನ್ನು ಒಗ್ಗೂಡಿಸಿದ ನಾಯಕನಿಗೆ ಇದುವರೆವಿಗೂ ಸರಿಯಾದ ಗೌರವವನ್ನು ಸಲ್ಲಿಸದೇ ಇರುವುದು ನಮ್ಮ ದೇಶದಲ್ಲಿ ಕೆಲವು ನಾಯಕರಿಗೆ ಮಾತ್ರ ಮಣೆ ಹಾಕಿರುವ ಆಚಾರವನ್ನು ಎತ್ತಿ ಹಿಡಿದಿದೆ.
ಆದರೆ ಅದೆಲ್ಲವನ್ನು ಮೀರಿ ರಾಷ್ಟ್ರದ ಐಕ್ಯತೆ ಹಾಗೂ ಸಮಗ್ರತೆಯನ್ನು ಎತ್ತಿ ಹಿಡಿದ ಆ ಮಹಾನಾಯಕನ ಜನ್ಮದಿನ. ಅವರ ಜನ್ಮದಿನದಂದು ಈ ಪ್ರತಿಮೆಯ ಅನಾವರಣ ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ. ಇನ್ನಾದರೂ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಘನತೆಯನ್ನು ರಾಷ್ಟ್ರ ಗುರ್ತಿಸುವಂತಾಗಲಿ.

ಈ ಸಂದರ್ಭದಲ್ಲಿ ಈ ಏಕತಾ ಮೂರ್ತಿ ಬಗ್ಗೆ ನೀವು ತಿಳಿದುಕೊಳ್ಳಬೇಕಾದ 10 ಸಂಗತಿಗಳು.

1) ಏಕತಾ ಪ್ರತಿಮೆಯು 597 ಅಡಿ( 182ಮೀಟರುಗಳಲ್ಲಿ) ಎತ್ತರ ಹೊಂದಿರುವ ಪ್ರಪಂಚದ ಅತಿ ಎತ್ತರದ ಪ್ರತಿಮೆಯಾಗಿದೆ.

2) ಇದು ಚೀನಾದ ಸ್ಪ್ರಿಂಗ್ ಟೆಂಪಲ್ ಬುದ್ಧ ನ ಪ್ರತಿಮೆಗಿಂತ 177 ಅಡಿ ಎತ್ತರಹೊಂದಿದ್ದು, ಇದು ಈಗವರೆಗೂ ಅತಿ ಎತ್ತರದ ಪ್ರತಿಮೆಯಾಗಿತ್ತು.

3) ಇದು ನ್ಯೂಯಾರ್ಕ್ನ ಲಿಬರ್ಟಿ ಪ್ರತಿಮೆಗಿಂತ ಎರಡು ಪಟ್ಟು ಎತ್ತರವಾಗಿದೆ.

4) ಯೂನಿಟಿ ಪ್ರತಿಮೆಯನ್ನು ಅಂದಾಜು ರೂ. 2,989 ಕೋಟಿ ರೂ.

5) ಇದನ್ನು ಪದ್ಮಭೂಷಣ-ವಿಜೇತ ಶಿಲ್ಪಿ ರಾಮ್ ವಿ ಸೂತಾರ್ ವಿನ್ಯಾಸಗೊಳಿಸಿದರು ಮತ್ತು ನಿರ್ಮಾಣ ಸಂಸ್ಥೆ ಲಾರ್ಸೆನ್ ಮತ್ತು ಟೂಬ್ರೊ ಮತ್ತು ಸರ್ಕಾರಿ ಸ್ವಾಮ್ಯದ ಸರ್ದಾರ್ ನರ್ಮದಾ ನಿಗಮ್ ಲಿಮಿಟೆಡ್ (ಎಸ್ಎಸ್ಎನ್ಎನ್ಎಲ್) ನಿರ್ಮಿಸಿದೆ.

6) ಇದು ಗುಜರಾತಿನ ಸರ್ದಾರ್ ಸರೋವರ್ ಅಣೆಕಟ್ಟಿನಿಂದ 3.32 ಕಿಲೋಮೀಟರ್ ದೂರದಲ್ಲಿದೆ.

7) ಸರ್ದಾರ್ ಪಟೇಲ್ ಅವರ ಪ್ರತಿಮೆಗಾಗಿ ದೇಶದಾದ್ಯಂತ ಕಬ್ಬಿಣವನ್ನು ಸಂಗ್ರಹಿಸಲಾಯಿತು.

8) ವೀಕ್ಷಣಾ ಗ್ಯಾಲರಿ, 193 ಮೀಟರ್ ಎತ್ತರದಲ್ಲಿದೆ ಏಕಕಾಲಕ್ಕೆ 200 ಪ್ರವಾಸಿಗರ ವೀಕ್ಷಣೆಗೆ ಅವಕಾಶ ಕಲ್ಪಿಸುತ್ತದೆ.

9) ಕಟ್ಟಡದ ತಳದಲ್ಲಿ ಸರ್ದಾರ್ ಪಟೇಲ್ಗೆ ಮೀಸಲಾಗಿರುವ ವಸ್ತು ಸಂಗ್ರಹಾಲಯವು 40,000 ದಾಖಲೆಗಳು, 2,000 ಚಿತ್ರಗಳನ್ನು ಮತ್ತು ಸರ್ದಾರ್ ಪಟೇಲ್ಗೆ ಮೀಸಲಾದ ಸಂಶೋಧನಾ ಕೇಂದ್ರವನ್ನು ಹೊಂದಿರುತ್ತದೆ.

10) ಈ ಮೂರ್ತಿಯ ಎರಕವನ್ನು ಚೀನಾದಲ್ಲಿ ನಿರ್ಮಿಸಲಾಗಿದೆ

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here